Home Mangalorean News Kannada News ಕೃಷಿ ಕೊಳದಲ್ಲಿ ಮೀನು ಸಾಕಾಣಿಕೆ: ತಜ್ಞರಿಂದ ಕ್ಷೇತ್ರ ಭೇಟಿ  

ಕೃಷಿ ಕೊಳದಲ್ಲಿ ಮೀನು ಸಾಕಾಣಿಕೆ: ತಜ್ಞರಿಂದ ಕ್ಷೇತ್ರ ಭೇಟಿ  

Spread the love

ಕೃಷಿ ಕೊಳದಲ್ಲಿ ಮೀನು ಸಾಕಾಣಿಕೆ: ತಜ್ಞರಿಂದ ಕ್ಷೇತ್ರ ಭೇಟಿ  

ಮಂಗಳೂರು : ಕ್ಷೇತ್ರ ಭೇಟಿಯ ಅಂಗವಾಗಿ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ತಜ್ಞರು ಕೇರಳ ಗಡಿ ಪ್ರದೇಶದಲ್ಲಿರುವ ಬಾಯಾರು ಗ್ರಾಮದ ಸಮಗ್ರ ಕೃಷಿ ಭೂಮಿಗೆ ಭೇಟಿ ನೀಡಿ ಜಮೀನಿನ ಕೊಳಗಳಲ್ಲಿ ಮೀನು ಕೃಷಿ ಮಾಡುವ ಬಗ್ಗೆ ರೈತರಿಗೆ ಸಲಹೆ ಸೂಚನೆ ನೀಡಿದರು.

ಪೆÇ್ರಫೆಸರ್ ಡಾ. ರಾಮಚಂದ್ರ ನಾಯ್ಕ ಮತ್ತು ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಡಾ. ಚೇತನ್ ಎನ್. ಅವರು ಬಾಯಾರು ಗ್ರಾಮದ ನಿವಾಸಿ, ವಕೀಲ ರಾಮಚಂದ್ರ ಭಟ್ ಅವರ ಜಮೀನಿಗೆ ಭೇಟಿ ನೀಡಿದರು. ಕ್ಷೇತ್ರದ ಭೇಟಿಯ ಸಮಯದಲ್ಲಿ ವಿವಿಧ ಕೃಷಿ ಹಾಗೂ ಕೃಷಿಯೇತರ ಪದ್ದತಿಗಳ ಅಳವಡಿಕೆಗಳ ಬಗ್ಗೆ ಜೊತೆ ಮುಕ್ತವಾಗಿ ಚರ್ಚಿಸಿದರು.

ಇಲ್ಲಿನ ಕೃಷಿಕರು ಅಡಿಕೆ, ಮಾವು, ಪೇರಳೆ, ಕೊಕೋ, ಲವಂಗ, ತೆಂಗು, ಮೆಣಸು, ಹಲಸು, ಬಾಳೆ, ಪುನ್ನಾರ್ಪುಳಿ, ಜೀಗುಜ್ಜೆ, ಚಿಕ್ಕು, ಬೆಟ್ಟದನೆಲ್ಲಿ, ಮೆಣಸು, ಜೇನು, ಜಾನುವಾರು, ಇತ್ಯಾದಿ ಬಗೆಯ ಬೆಳೆಗಳನ್ನು ಬೆಳೆಸುತ್ತಿದ್ದಾರೆ. ಈ ಭೂಮಿಯಲ್ಲಿ ನೀರು ಶೇಖರಣೆ ಮಾಡಲು ಅಲ್ಲಲ್ಲಿ ಹೊಂಡ, ಕೊಳ, ಕೆರೆ ಇತ್ಯಾದಿಗಳನ್ನು ಸಂರಕ್ಷಿಸಿದ್ದಾರೆ. ಇವುಗಳು ಕೇವಲ ನೀರಿಗಾಗಿ ಮತ್ತು ತೋಟದ ಗಿಡ-ಮರಗಳಿಗೆ ನೀರು ಹಾಯಿಸಲು ಮಾತ್ರ ಎಂದುಕೊಂಡ ರಾಮಚಂದ್ರ ಭಟ್ ರವರು ಮೀನುಗಾರಿಕಾ ಪದವಿಧರ ಗುರುರಾಜ್ ರವಲ್ಲಿ ಆಕಸ್ಮಿಕವಾಗಿ ಚರ್ಚಿಸಿ ಸುಸುಕ್ತವಾಗಿ ಬಳಸಿಕೊಳ್ಳಲು ಯೋಚಿಸಿದ್ದರು.

ಅದಕ್ಕೆ ಸೂಕ್ತವಾದ ಮಾಹಿತಿ ಪಡೆಯಲು ಮೀನುಗಾರಿಕಾ ಕಾಲೇಜಿನ ವಿಷಯ ತಜ್ಞ ಹಾಗೂ ಪೆÇ್ರಫೆಸರ್ ಆದ ಡಾ. ರಾಮಚಂದ್ರ ನಾಯ್ಕ ರಲ್ಲಿ ದೂರವಾಣಿಯ ಮೂಲಕ ಸಂಪರ್ಕಿಸಿ ಕ್ಷೇತ್ರ ಬೇಟಿಗೆ ಮುಂದಾದರು. ಇವರು ಕೃಷಿ ವಿಜ್ಞಾನ ಕೇಂದ್ರದ ಮಾಜಿ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರಾಗಿ ಅನುಭವವುಳ್ಳವರು ಹಾಗೂ ರೈತರಿಗೆ ಸಮಗ್ರ ಮೀನು ಕೃಷಿ ಪದ್ದತಿಗಳನ್ನು ಅಳವಡಿಕೆಗಳಲ್ಲಿ ವೈಜ್ಞಾನಿಕ ಸಲಹೆ ನೀಡಿಕೊಂಡು ಬಂದವರು.

ಜಮೀನಿನ ಮಾಲಿಕ ರಾಮಚಂದ್ರ ಭಟ್ ಈ ರೀತಿಯ ಕೃಷಿ ಭೂಮಿಯಲ್ಲಿನ ನೀರು ಶೇಖರಣೆಯ ಪ್ರದೇಶವು ಮೀನು ಸಾಕಾಣೆಮಾಡಲು ಹೇಗೆ ಉಪಯೋಗವಾಗುತ್ತದೆಂಬ ಸಂದೇಹದಲ್ಲಿದ್ದರು. ಇದಕ್ಕೆ ಮಾಹಿತಿ ತಿಳಿಸಿದ ವಿಷಯ ತಜ್ಞರು ಈ ನೀರಿನ ಪ್ರದೇಶಗಳ ಯೋಗ್ಯತೆಯ ಬಗ್ಗೆ ಕೂಲಂಕುಷವಾಗಿ ಮಹಿತಿ ನೀಡಿ ಜಮೀನಿನ ಉದ್ದಗಲಕ್ಕೂ ತಿರುಗಿ ಸಂಪನ್ಮೂಲದ ವೀಕ್ಷಿಣೆ ಮಾಡಿ ಸೂಕ್ತ ಸಲಹೆಯನ್ನು ನೀಡಿದರು.

ಸಮಗ್ರ ಕೃಷಿ ಪದ್ದತಿಯಲ್ಲಿ ಎಲ್ಲಾ ಬಗೆಯ ಬೆಳೆಗಳನ್ನು ಕಡಿಮೆ ಪ್ರದೇಶದಲ್ಲಿ ಬೆಳೆಯುವುದರಿಂದ ಹೆಚ್ಚು ಅದಾಯವನ್ನು ಪಡೆಯುವುದರೊಂದಿಗೆ ಸಂಪನ್ಮೂಲಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಆರ್ಥಿಕವಾಗಿ ಅಭಿವೃದ್ದಿಯಾಗಲು ನೆರವಾಗಬಹುದಾದ ಮಾಹಿತಿಯನ್ನು ತಿಳಿಸಿಕೊಟ್ಟರು. ವಿವಿಧ ಬೆಳೆಗಳಿಗೆ ನೀರನ್ನು ಬಳಸುವ ಸಲುವಾಗಿ ಮೀಸಲಿಟ್ಟ ನೀರಿರುವ ಪ್ರದೇಶಗಳನ್ನು ಸಿಹಿನೀರು ಅಥವಾ ಚೆಪ್ಪೆನೀರಿನ ಮೀನುಗಳನ್ನು ಸಾಕಲು ಉಪಯೊಗಿಸುವುದರಿಂದ ಅನ್ಯ ಕೃಷಿ ಬೆಳೆಗಳಿಗೆ ಯಾವುದೇ ತೊಂದರೆಮಾಡದೆ ಸಂಪನ್ಮೂಲವನ್ನು ಸದ್ಬಳಕೆ ಮಾಡಿ ವೈಜ್ಞಾನಿಕ ರೀತಿಯ ಕೃಷಿ ಬೆಳೆಗಳನ್ನು ಮಾಡಿ ಹೆಚ್ಚಿನ ಅದಾಯವನ್ನು ಪಡೆಯಬಹುದಾಗಿದೆ ಎಂದರು.

ಇಂತಹ ನೀರು ಶೇಖರಿಸಿದ ಹೊಂಡಗಳಲ್ಲಿ ಕನಿಷ್ಟ 8 ರಿಂದ 9 ತಿಂಗಳುಗಳವರೆಗೆ ನೀರಿದ್ದಲ್ಲಿ ಮೀನು ಕೃಷಿಗೆ ಸೂಕ್ತವಾದುದು. ಮೀನುಕೃಷಿಯ ಮೀನು ಮರಿಗಳನ್ನು ಕೊಳದಲ್ಲಿ ಬಿತ್ತನೆ ಮಾಡುವ ಮುನ್ನ ಹೊಂಡಗಳಲ್ಲಿನ ಕಳೆ ಮೀನು, ಭಕ್ಷಕ ಮೀನು, ಕಪ್ಪೆ, ಜಲಚಿಟ್ಟೆ ಮುಂತಾದವುಗಳನ್ನು ತೆಗೆದು ಸಮವಾದ ತಳಬಾಗವನ್ನು ರಚಿಸುವುದು ಸೂಕ್ತ.

ಮೀನುಮರಿ ಬಿತ್ತನೆ ಸಮಯಕ್ಕೆ ಸರಿಯಾಗಿ ಮೀನುಗಾರಿಕಾ ಮಹಾವಿದ್ಯಾಲಯದ ಜಲ ಪರಿಸರ ನಿರ್ವಹಣೆ ವಿಭಾಗದಲ್ಲಿ ಡಾ. ರಾಮಚಂದ್ರ ನಾಯ್ಕರವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಪದವಿಯ ಸಂಶೋಧನಾ ವಿದ್ಯಾರ್ಥಿಗಳಾದ ಕಿಶೋರ್ ಸಿ. ಮತ್ತು ಪ್ರವೀಣ್ ಜೋಶಿ ಎಚ್.ಎಸ್. ಸಹಕರಿಸಿದರು.

ಸಾರ್ವಜನಿP್ಪರು ತಮ್ಮ ಜಮೀನುಗಳಲ್ಲಿ ಇಂತಹ ಅವಕಾಶವಿದ್ದರೆ, ಸಂಭಂದಪಟ್ಟ ತಜ್ಞರನ್ನು (ಮೊಬೈಲ್ ನಂಬರ್ 99169 24084)ಕೃಷಿ ವಿಜ್ಞಾನ ಕೇದ್ರದ ಪ್ರಕಟಣೆ ತಿಳಿಸಿದೆ.


Spread the love

Exit mobile version