Home Mangalorean News Kannada News ಕೃಷ್ಣಾಷ್ಟಮಿ, ವಿಟ್ಲಪಿಂಡಿಗೆ ಮಾರ್ಪಳ್ಳಿ ಹುಲಿ ವೇಷ ತಂಡ ಸಜ್ಜು

ಕೃಷ್ಣಾಷ್ಟಮಿ, ವಿಟ್ಲಪಿಂಡಿಗೆ ಮಾರ್ಪಳ್ಳಿ ಹುಲಿ ವೇಷ ತಂಡ ಸಜ್ಜು

Spread the love

ಕೃಷ್ಣಾಷ್ಟಮಿ, ವಿಟ್ಲಪಿಂಡಿಗೆ ಮಾರ್ಪಳ್ಳಿ ಹುಲಿ ವೇಷ ತಂಡ ಸಜ್ಜು

ಉಡುಪಿ: ದೇವಳಗಳ ನಗರಿ ಉಡುಪಿಯಲ್ಲಿ ಸೆಪ್ಟೆಂಬರ್ 13 ಹಾಗೂ 14ರಂದು  ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವದ ಸಂಭ್ರಮ. ಈ ಸಂದರ್ಭಲ್ಲಿ ನಗರದ ಮೂಲೆ ಮೂಲೆಗಳಲ್ಲೂಹುಲಿ ವೇಷದ ಘರ್ಜನೆ ಕೇಳಿ ಬರುತ್ತಿದೆ.

ಪ್ರತಿವರ್ಷದಂತೆ ಈ ವರ್ಷವೂ ಕೂಡ ಜಿಲ್ಲೆಯ ಹೆಸರಾಂತ ಹುಲಿವೇಷ ತಂಡವಾದ ಮಾರ್ಪಳ್ಳಿ ಮಹಾಲಿಂಗೇಶ್ವರ  ಚಂಡೆ ಬಳಗದ ಸದಸ್ಯರು 14ರಂದು  ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವದ ಸಂಭ್ರಮ ಹುಲಿಯ ಘರ್ಜನೆಗೆ ಕಠಿಣ ಅಭ್ಯಾಸ ನಡೆಸಿದ್ದಾರೆ.  ಪ್ರತಿ ವರ್ಷ ಕೃಷ್ಣ ಜನ್ಮಾಷ್ಟಮಿಯಿಂದ ಒಂದೂವರೆ ತಿಂಗಳ ಮೊದಲೇ ಕೊರಂಗ್ರಪಾಡಿ ಮನಮೋಹನ್ ಎಂಬುವರ ಮಾರ್ಗದರ್ಶನದಲ್ಲಿ ಹುಲಿವೇಷಕ್ಕಾಗಿ ಕಠಿಣ ಅಭ್ಯಾಸ ನಡೆಸುತ್ತಾರೆ.

30ಕ್ಕೂ ಅಧಿಕ ತಂಡಗಳು ಅಷ್ಟಮಿಯ ಸಂದರ್ಭದಲ್ಲಿ ಹುಲಿವೇಷ ಧರಿಸಿ ಭಕ್ತರನ್ನು ರಂಜಿಸುತ್ತವೆ. ಈ ಸಂಭ್ರಮೋತ್ಸವಕ್ಕೆ ಮಾರ್ಪಳ್ಳಿ ಮಹಾಲಿಂಗೇಶ್ವರ ಚಂಡೆ ಬಳಗದ ಸದಸ್ಯರು ಹುಲಿವೇಷ ಧರಿಸಿ ಭಕ್ತರನ್ನು ರಂಜಿಸಲು ಸಕಲ ಸಿದ್ಧತೆ ನಡೆಸಿದ್ದಾರೆ.

ನವಿರೇಳಿಸುವಂತಹ ಆಕರ್ಷಕ ಕಸರತ್ತುಗಳನ್ನು ಪ್ರದರ್ಶಿಸಿ ಸಾಂಪ್ರದಾಯಿಕ ಹುಲಿ ನರ್ತನದ ಮೂಲಕ ಮಾರ್ಪಳ್ಳಿ ಮಹಾಲಿಂಗೇಶ್ವರ ಚಂಡೆ ಬಳಗ ವಿವಿಧ ಪ್ರಶಸ್ತಿಗಳನ್ನು ಪಡೆದಿದೆ.

ಚಂಡೆ ವಾದನದಲ್ಲಿ ರಾಜ್ಯ, ಹೊರರಾಜ್ಯಗಳಲ್ಲಿ ಪ್ರಸಿದ್ಧ ಪಡೆದಿರುವ ಮಾರ್ಪಳ್ಳಿ ಮಹಾಲಿಂಗೇಶ್ವರ ಚಂಡೆ ಬಳಗದವರು ಉಡುಪಿಯ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಮಹೋತ್ಸವದ ಪ್ರಯುಕ್ತ ಹದಿಮೂರು ವರ್ಷಗಳಿಂದ ಹುಲಿವೇಷ ಧರಿಸುತ್ತಿದ್ದಾರೆ.


Spread the love

Exit mobile version