Spread the love
ಉಡುಪಿ: ಪೇಜಾವರ ಶ್ರೀವಿಶ್ವೇಶ ತೀರ್ಥರು ತಮ್ಮ ಪಂಚಮ ಪರ್ಯಾಯದ ಕ್ರಾಂತಿಕಾರಿ ಯೋಜನೆಯಾಗಿ ಪರ್ಯಾಯೋತ್ಸವ ದರ್ಬಾರ್ ಸಭೆಯಲ್ಲಿ ಘೋಷಿಸಿದ “ವೃಕ್ಷರಕ್ಷ ವಿಶ್ವರಕ್ಷ’ ಯೋಜನೆಯಂತೆ ಆಸಕ್ತ ಸಾರ್ವಜನಿಕರಿಗೆ ಕೃಷ್ಣನ ಹೆಸರಿನಲ್ಲಿ ನೆಟ್ಟು ಪೋಷಿಸಲು ಕೃಷ್ಣಮಠದಲ್ಲಿ ಸಸಿ ವಿತರಣಾ ಕೌಂಟರ್ ಮಂಗಳವಾರ ಉದ್ಘಾಟನೆಗೊಂಡಿತು.
ಸಸಿವಿತರಣಾ ಕೌಂಟರ್ ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಉಡುಪಿ ಡಿಎಫ್ಒ ಎಂ.ವಿ. ಅಮರನಾಥ್, ಆರ್ಜಿ ಭಟ್, ವಲಯ ಅರಣ್ಯಾಧಿಕಾರಿ ರಮೇಶ್, ರವೀಂದ್ರ ಹಾಗೂ ಮಠದ ದಿವಾನರಾದ ಎಂ.ರಘುರಾಮಾಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಮುಂದಿನ ದಿನಗಳಲ್ಲಿ ಆಸಕ್ತರು ಸಸಿಗಳನ್ನು ಸ್ವೀಕರಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Spread the love