Home Mangalorean News Kannada News ಕೆಂಪು, ಕಿತ್ತಳೆ, ಹಸಿರು ವಲಯಗಳ ಹೊಸ ಪಟ್ಟಿ ಬಿಡುಗಡೆಗೊಳಿಸಿದ ಕೇಂದ್ರ ಸರ್ಕಾರ- ಉಡುಪಿ ಹಸಿರು, ದಕ...

ಕೆಂಪು, ಕಿತ್ತಳೆ, ಹಸಿರು ವಲಯಗಳ ಹೊಸ ಪಟ್ಟಿ ಬಿಡುಗಡೆಗೊಳಿಸಿದ ಕೇಂದ್ರ ಸರ್ಕಾರ- ಉಡುಪಿ ಹಸಿರು, ದಕ ಜಿಲ್ಲೆ ಕಿತ್ತಳೆ ವಲಯಕ್ಕೆ

Spread the love

ಕೆಂಪು, ಕಿತ್ತಳೆ, ಹಸಿರು ವಲಯಗಳ ಹೊಸ ಪಟ್ಟಿ ಬಿಡುಗಡೆಗೊಳಿಸಿದ ಕೇಂದ್ರ ಸರ್ಕಾರ- ಉಡುಪಿ ಹಸಿರು, ದಕ ಜಿಲ್ಲೆ ಕಿತ್ತಳೆ ವಲಯಕ್ಕೆ

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯವು ದೇಶದ ನಾನಾ ಜಿಲ್ಲೆಗಳನ್ನು ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳೆಂದು ವರ್ಗೀಕರಿಸಿ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ ದೆಹಲಿ, ಮುಂಬೈ, ಚೆನ್ನೈ, ಕೋಲ್ಕತಾ ಬೆಂಗಳುರು ಸೇರಿದಂತೆ ಎಲ್ಲಾ ಮೆಟ್ರೋ ನಗರಗಳನ್ನು. ಕೆಂಪು ವಲಯ (ರೆಡ್ ಜೋನ್) ನಲ್ಲಿರಿಸಲು ಆರೋಗ್ಯ ಸಚಿವಾಲಯ ನಿರ್ಧರಿಸಿದೆ.

ಜಿಲ್ಲೆಗಳನ್ನು ರೆಡ್ ಜೋನ್ ಆರೆಂಜ್ ಜೋನ್ ಹಾಗೂ ಗ್ರೀನ್ ಜೋನ್ ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಹೊಸ ವರ್ಗೀಕರಣದ ಪ್ರಕಾರ, ಇಲ್ಲಿಯವರೆಗೆ ಯಾವುದೇ ಕೊರೋನಾ ಪ್ರಕರಣಗಲು ವರದಿಯಾಗದ ಥವಾ ಕಳೆದ 21 ದಿನಗಳಲ್ಲಿ (28 ದಿನಗಳ ಬದಲು) ಯಾವ ಹೊಸ ಪ್ರಕರಣಗಳು ಕಂಡುಬರದ ಜಿಲ್ಲೆಯನ್ನು ಗ್ರೀನ್ ಜೋನ್ ಎಂದು ಹೆಸರಿಸಲಾಗುತ್ತದೆ.

ಅದರಂತೆ ಉಡುಪಿ ಜಿಲ್ಲೆಯು ಗ್ರೀನ್ ಜೋನ್ ವ್ಯಾಪ್ತಿಗೆ ಬಂದರೆ ದಕ್ಷಿಣ ಕನ್ನಡವನ್ನು ಆರೆಂಜ್ ಜೋನ್ ವ್ಯಾಪ್ತಿಗೆ ಸೇರಿಸಲಾಗಿದೆ. ಬೆಂಗಳೂರು ಗ್ರಾಮಾಂತರ, ಮೈಸೂರು ಮತ್ತು ಬೆಂಗಳೂರು ನಗರ ಜಿಲ್ಲೆಗಳು ರೆಡ್ ಜೋನ್ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಗಿದೆ.

ಮಹಾರಾಷ್ಟ್ರ 10,000 ಕೊರೋನಾ ಕರಣಗಳನ್ನು ದಾಟಿದ್ದು, ದೇಶದ ಅತಿ ಹೆಚ್ಚು ಎಂದರೆ 14 ಜಿಲ್ಲೆಗಳನ್ನು ರೆಡ್ ಜೋನ್ ಗೆ ಸೇರ್ಪಡಿಸಿದೆ. ದೆಹಲಿಯಲ್ಲಿ 11 ಜಿಲ್ಲೆಗಳು, ತಮಿಳುನಾಡಿನಲ್ಲಿ 12 ಜಿಲ್ಲೆಗಳು, ಉತ್ತರ ಪ್ರದೇಶದ 19 ಜಿಲ್ಲೆಗಳು, ಪಶ್ಚಿಮ ಬಂಗಾಳದ 10 ಜಿಲ್ಲೆಗಳು, ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ತಲಾ 9 ಜಿಲ್ಲೆಗಳು ಮತ್ತು ರಾಜಸ್ಥಾನದ 8 ಜಿಲ್ಲೆಗಳು ಕರ್ನಾಟಕದ 3 ಜಿಲ್ಲೆಗಳು ರೆಡ್ ಜೋನ್ ವ್ಯಾಪ್ತಿಯಲ್ಲಿದೆ.


Spread the love

Exit mobile version