Home Mangalorean News Kannada News ಕೆಂಬೇರಿ ಮೀನು ಖರೀದಿಸದಂತೆ ಸೂಚನೆ

ಕೆಂಬೇರಿ ಮೀನು ಖರೀದಿಸದಂತೆ ಸೂಚನೆ

Spread the love

ಕೆಂಬೇರಿ ಮೀನು ಖರೀದಿಸದಂತೆ ಸೂಚನೆ

ಮಂಗಳೂರು: ಇತ್ತೀಚೆಗೆ ಉಳ್ಳಾಲ ಸುತ್ತಮುತ್ತಲು ವರದಿಯಾದ ಮೀನಿನ ತಲೆಭಾಗ ತಿಂದು ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಕೊಂಡ ಪ್ರಕರಣಗಳನ್ನು ಪರಿಶೀಲಿಸಲಾಗಿದೆ.

kemberi-fish-1

ಇದು ಕೆಂಬೇರಿ (2-spoiled red snapped) ಮೀನಿನ ತಲೆಯ ಸೇವನೆಯಿಂದಾಗಿದ್ದು, ಈ ಜಾತಿಯ ಮೀನು ಹವಳ ದ್ವೀಪ, ಕಲ್ಲುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ವರದಿಯಾದ ಪ್ರಕರಣಗಳಲ್ಲಿ ಸಂಸ್ಕರಣಾ ಘಟಕವು ಈ ಮೀನನ್ನು ಕೊಚ್ಚಿನ್‍ನಿಂದ ಪಡಕೊಂಡಿದ್ದು, ತನಿಖೆ ನಡೆಸಲಾಗಿ ಈ ಮೀನನ್ನು ಸೌತ್‍ಆಫ್ರಿಕಾ / ಮಾಲ್ಡೀವ್ಸ್ ಪಕ್ಕದ ನೀರಿನಿಂದ ಹಿಡಿದು ಪಡೆದಿದ್ದು, ಈ ಅಸ್ವಸ್ಥತೆಗೆ ಕಾರಣವು ಸಿಗ್ವುಟೇರಾ ಎಂದು ಶಂಕಿಸಲಾಗಿದೆ. ಸಮುದ್ರದಲ್ಲಿ ಉಂಟಾದ ಅಲ್ಲದೆ ಬ್ಲೂಮ್‍ನಿಂದ (dinoflagellates) ಈ ವಿಷಕಾರಿ ಅಂಶವು ಉತ್ಪತ್ತಿಯಾಗಿದ್ದು, ಇದನ್ನು ತಿಂದ ಸಸ್ಯಾಹಾರಿ ಮೀನುಗಳನ್ನು ತಿನ್ನುವ ಮಾಂಸಾಹಾರಿ ಮೀನಿನ ತಲೆ, ಕಿವಿರುಭಾಗ ಇತ್ಯಾದಿಗಳಲ್ಲಿ ವಿಷವು ಸಂಗ್ರಹವಾಗಿ, ಸೇವಿಸುವವರಿಗೆ ಅಸ್ವಸ್ಥತೆ ಉಂಟಾಗಿದೆ.

ಈ ಆಲ್ಗೆಯು ಕರ್ನಾಟಕ ಸಮುದ್ರದಲ್ಲಿ ಕಾಣಿಸದೇ ಇರುವುದರಿಂದ ಇಲ್ಲಿ ಈ ಸಮಯದಲ್ಲಿ ಹಿಡುವಳಿಯಾದ ಮೀನುಗಳು ಆಹಾರ ಯೋಗ್ಯವಾಗಿದೆ. ಆದರೆ ಬೇರೆ ಸಮುದ್ರದಿಂದ ವಿಷಕಾರಿಯಾದ ಆಲ್ಗೆ dinoflagellates ಉತ್ಪತ್ತಿಯಾದ ನೆಲೆಯಿಂದ ಹಿಡುವಳಿಯಾದ Reef ಜಾತಿಯ ಮೀನುಗಳನ್ನು ಸೇವಿಸುವುದು ಆರೋಗ್ಯ ದೃಷ್ಟಿಯಿಂದ ಒಳಿತಲ್ಲ. ಆದ್ದರಿಂದ ಫಿಶ್‍ಮಾರ್ಕೆಟ್‍ಗಳಲ್ಲಿ ಅಸ್ವಾಭಾವಿಕವಾಗಿ ಪತ್ತೆ ಆಗುವ ದೊಡ್ಡ ಗಾತ್ರದ ಕೆಂಬೇರಿ ಜಾತಿಯ ಮೀನುಗಳನ್ನು ಈ ಋತುವಿನಲ್ಲಿ ಖರೀದಿಸಬಾರದೆಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಹಾಗೂ ಸಂಸ್ಕರಣಾ ಘಟಕಗಳು ಈ ಮೀನಿನ ತ್ಯಾಜ್ಯವನ್ನು ಆಹಾರವಾಗಿ ಹೊರಗಡೆ ನೀಡಬಾರದೆಂದು ತಿಳಿಸಲಾಗಿದೆ.


Spread the love
2 Comments
Inline Feedbacks
View all comments
Original R.Pai
8 years ago

Thanks for reporting this in kannada. This should really help people like joker Paveena Pinto.

Praveen
8 years ago
Reply to  Original R.Pai

Thanks for reporting this in Kannada. This should really help people like Joker Praveena Pinto.

Preethiya RampaNNA,

Haudu kano, thumba help aaithu. Tx.

Eega meenu bagge innondu vishaya. Naanu Pilikula’dalli thumba noodide. Aadre nimma preethiya Kampi meenu siglilla. Aadre bejar maadbedi. Pilikulada nivasigalu helthare – Dusserah athava Christmas time’alli Kampi siguva chance ide anthe. Sadyakke swalpa adjust maadi. OK kano.

wpDiscuz
Exit mobile version