ಕೆಎಎಂಎಲ್ಎಸ್ಸಿಒಎನ್-ಮಣಿಪಾಲ ಕಾರ್ಯಕ್ರಮದ ಆಯೋಜನೆ
ಮಣಿಪಾಲ: ಮಣಿಪಾಲದ ಫಾರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ವಿಭಾಗವು ಡಾ. ಟಿ. ಎಂ. ಎ ಪೈ ಆಡಿಟೋರಿಯಂನಲ್ಲಿ ಕರ್ನಾಟಕ ಮೆಡಿಕೊ ಲೀಗಲ್ ಸೊಸೈಟಿಯ, ಕೆಎಎಂಎಲ್ಎಸ್ಸಿಒಎನ್ 2018 – ಮಣಿಪಾಲ ಎಂಬ 26ನೇ ವಾರ್ಷಿಕ ಸಮ್ಮೇಳನವನ್ನು ಇಂದು ಆಯೋಜಿಸಿತ್ತು.
ಕೆಎಎಂಎಲ್ಎಸಿಒಎನ್ 2018 – ಮಣಿಪಾಲ ಎಂಬ ಈ ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ಆರಕ್ಷಕ (ಪೋಲೀಸ್) ವಿಭಾಗದ ಹೆಚ್ಚುವರಿ ಡಿಜಿಪಿ, ಎಂ ಎ ಸಲೀಮ್, ಐಪಿಎಸ್ ಇವರು ಉದ್ಘಾಟಿಸಿದರು.
ಹೆಚ್ಚುವರಿ ಡಿಜಿಪಿ, ಎಂ ಎ ಸಲೀಂರವರು ಜನರನ್ನು ಉದ್ದೇಶಿಸುತ್ತಾ “ಉತ್ತಮ ಫಲಿತಾಂಶಗಳನ್ನು ಪಡೆಯುವುದಕ್ಕಾಗಿ ಫಾರೆನ್ಸಿಕ್ ಮೆಡಿಸಿನ್ ಮತ್ತು ತನಿಖಾ ಪ್ರಕ್ರಿಯೆಗಳು ಒಂದಕ್ಕೊಂದು ಬೆಂಬಲ ನೀಡಬೇಕು”, ಫಾರೆನ್ಸಿಕ್ ವಿಶ್ಲೇಷಣೆ ಇಲ್ಲದೆ ಕೇಸ್ ಪರಿಹರಿಸಲು ಸಾಧ್ಯವಾಗುವುದಿಲ್ಲ. ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚುತ್ತಿವೆ ಮತ್ತು ಸರಕಾರವು ಕಾನೂನಿನಲ್ಲಿ ಬದಲಾವಣೆಗಳನ್ನು ಮಾಡಿದ್ದು ಹೆಚ್ಚಿನವರಿಗೆ ಇದರ ಬಗ್ಗೆ ಅರಿವಿಲ್ಲ ಎಂದು ಹೇಳಿದರು.
ಮಣಿಪಾಲ ಮಾಹೆಯ ಆರೋಗ್ಯ ವಿಜ್ಞಾನ ವಿಭಾಗದ ಸಹ ಉಪಕುಲಪತಿ ಡಾ. ಪೂರ್ಣಿಮಾ ಬಾಳಿಗಾರವರು ಮಾತನಾಡಿ “ಫಾರೆನ್ಸಿಕ್ ಮೆಡಿಸಿನ್ ಕ್ಷೇತ್ರದಲ್ಲಿ ಅಪಾರ ಅಭಿವೃದ್ಧಿ ಆಗಿದ್ದು ವೈದ್ಯಕೀಯ ಶಿಕ್ಷಣ ಪಠ್ಯದಲ್ಲಿ ಅದಕ್ಕೆ ಮಹತ್ವ ನೀಡಬೇಕಾಗಿದೆ”, ಫಾರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ಈಗ ವೈದ್ಯರಿಗೆ ಹೆಚ್ಚು ಸೇವೆಗಳನ್ನು ಮತ್ತು ವಿಶ್ಲೇಷಣೆಗಳನ್ನು ಒದಗಿಸುತ್ತಿದೆ ಎಂದು ಅಭಿಪ್ರಾಯಪಟ್ಟರು. ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಪೋಲೀಸ್ ವಿಭಾಗ ಮತ್ತು ಫಾರೆನ್ಸಿಕ್ ಮೆಡಿಸಿನ್ ವಿಭಾಗದ ನಡುವೆ ಇರುವ ಸ್ನೇಹಮಯ ವಾತಾವರಣ ಮುಖ್ಯವಾಗಿದೆ ಎಂದರು
ಮಣಿಪಾಲ ಮಾಹೆಯ ಸಹ ಕುಲಪತಿ ಡಾ. ಹೆಚ್ ಎಸ್ ಬಲ್ಲಾಳ್ರವರು ಮಾತಾಡಿ “ಇಂತಹ ಸಮ್ಮೇಳನಗಳನ್ನು ಆಯೋಜಿಸುವುದು ಬಹಳ ಮುಖ್ಯ, ಇದರಿಂದ ಜ್ಞಾನವನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಮಾಹೆ ಮಣಿಪಾಲವು ಪೋಲೀಸ್ ವಿಭಾಗದೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಂಡಿದೆ ಮತ್ತು ನ್ಯಾಯದ ಆವಶ್ಯಕತೆ ಇದ್ದವರಿಗೆ ಅದನ್ನು ಪೂರೈಸಲು ಬೆಂಬಲ ನೀಡಿದೆ ಎಂಬುದಾಗಿ ಹೇಳಿದರು.
ಉಡುಪಿಯ ಪೋಲೀಸ್ ಅಧೀಕ್ಷಕರಾದ ಶ್ರೀ ಲಕ್ಷ್ಮಣ್ ನಿಂಬರ್ಗಿ ಐಪಿಎಸ್ ರವರು “ವೈದ್ಯಕೀಯ ವಿಜ್ಞಾನದ ಬಳಕೆ ಮತ್ತು ವಿಶ್ಲೇಷಣೆಗಳು ಅಪರಾಧವನ್ನು ಭೇದಿಸಲು ಸಹಾಯ ಮಾಡುವ ಮೂಲಾ ಮತ್ತು ಕಾನೂನು ಭಂಗಪಡಿಸುವ ಶಕ್ತಿಗಳನ್ನು ನಿಗ್ರಹಿಸಲು ಬೆಂಬಲ ನೀಡುವ ಮೂಲಾ ಸಮಾಜದಲ್ಲಿ ಶಾಂತಿಯನ್ನು ಸ್ಥಾಪಿಸಲು ನೆರವಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಪುರುಷೋತ್ತಮ್ ಶೆಟ್ಟಿ, ಉಡುಪಿಯ ಉಜ್ವಲ್ ಡೆವಲಪರ್ಸ್ ಎಂಡಿ ಅವರು ಸಮ್ಮೇಳನದ ಸ್ಪರಣಿಕೆಯನ್ನು ಬಿಡುಗಡೆ ಮಾಡಿದರು. ಡಾ. ರೋಹಿಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ-ಉಡುಪಿ, ಇವರು ಕೆಎಎಂಎಲ್ಎಸ್ ಸಮ್ಮೇಳನ ಜರ್ನಲ್ ಬಿಡುಗಡೆ ಮಾಡಿದರು.
ಕೆಎಂಸಿ ಮಣಿಪಾಲದ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ಡಾ. ಶಂಕರ್ ಎಂ ಬಕ್ಕಣನವರ್ ಅವರು ಬರೆದಿರುವ ಪ್ರ್ಯಾಕ್ಟಿಕಲ್ ಆಸ್ಪೆಕ್ಟ್ಸ್ ಆಫ್ ಫೊರೆನ್ಸಿಕ್ ಮೆಡಿಸಿನ್ ಪುಸ್ತಕವನ್ನು ಕೆಎಂಸಿ ಮಣಿಪಾಲದ ಡೀನ್- ಡಾ. ಪ್ರಜ್ಞಾ ರಾವ್ ಬಿಡುಗಡೆ ಮಾಡಿದರು.
ಕೆಎಎಂಎಲ್ಎಸ್ 2018- ಮಣಿಪಾಲ, ಇದನ್ನು ಕೆಎಂಸಿ ಮಣಿಪಾಲದ ಫೊರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ವಿಭಾಗವು ಆಯೋಜಿಸಿದೆ, ಡಾ. ವಿನೋದ್ ಸಿ. ನಾಯಕ್ ಅವರು ಅಧ್ಯಕ್ಷತೆ ವಹಿಸಿದ್ದರು ಮತ್ತು ಡಾ. ವಿಕ್ರಮ್ ಪಾಲಿಮರ್ ಅವರು ಸಂಘಟನಾ ಕಾರ್ಯದರ್ಶಿಯಾಗಿದ್ದರು. ಈ ಸಮ್ಮೇಳನದ ಭಾಗವಾಗಿ ಹಲವಾರು ಕಾರ್ಯಗಾರ ಮತ್ತು ಸೆಶನ್ಗಳನ್ನು ಆಯೋಜಿಸಲಾಗಿತ್ತು.