ಕೆಥೊಲಿಕ್ ಸಭಾ ಸಾಸ್ತಾನ ಘಟಕದಿಂದ ನಿರ್ಮಲ ಪರಿಸರ ಅಭಿಯಾನ

Spread the love

ಕೆಥೊಲಿಕ್ ಸಭಾ ಸಾಸ್ತಾನ ಘಟಕದಿಂದ ನಿರ್ಮಲ ಪರಿಸರ ಅಭಿಯಾನ

ಕೋಟ: ಗಾಂಧಿ ಜಯಂತಿಯ ಪ್ರಯುಕ್ತ ಕೆಥೊಲಿಕ್ ಸಭಾ ಸಂತ ಅಂತೋನಿ ಘಟಕ ಸಾಸ್ತಾನ ಹಾಗೂ ಕೆಥೊಲಿಕ್ ಸ್ತ್ರೀ ಸಂಘಟನೆ ವತಿಯಿಂದ ರಾಷ್ಟ್ರೀಯ ಹೆದ್ದಾರಿ 66 ಬಳಿ ಬುಧವಾರ ಸಾಮೂಹಿಕ ಸ್ವಸ್ಥ ಹಾಗೂ ನಿರ್ಮಲ ಪರಿಸರ ಅಭಿಯಾನ ಜರುಗಿತು.

ಕೆಥೊಲಿಕ್ ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರು ಪರಿಸರ ಸಂಬಂಧಿ ನೀಡಿದ ವಿಶ್ವಪತ್ರ ಲಾವ್ದಾತೊ ಸಿ ಅನ್ವಯ ಹಾಗೂ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಪರಿಸರ ಸಂರಕ್ಷಣೆಗೆ ಸ್ವಚ್ಚತಾ ಹಿ ಸೇವಾ ಅಭಿಯಾನದನ್ವಯ ಕೆಥೊಲಿಕ್ ಸಭಾ ಉಡುಪಿ ಧರ್ಮಪ್ರಾಂತ್ಯದ ಆದೇಶದಂತೆ ಸ್ವಚ್ಚತಾ ಅಭಿಯಾನ ಜರುಗಿತು.

ಸಾಸ್ತಾನ ಸಂತಅಂತೋನಿ ಚರ್ಚಿನ ಎದುರು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ಬಳಿಯ ಬೆಳೆದು ನಿಂತ ಬೃಹತ್ ಗಾತ್ರದ ಹುಲ್ಲಿನ ಪೊದೆಗಳನ್ನು ಕೆಥೊಲಿಕ್ ಸಭಾ, ಕೆಥೊಲಿಕ್ ಸ್ತ್ರೀ ಸಂಘಟನೆ, ಸ್ವಾಸ್ಥ್ಯ ಆಯೋಗದ ಸದಸ್ಯರು, ಸಂತ ಅಂತೋನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಸಹಕಾರದಿಂದ ಸವರಿ ತೆಗೆದು ಸ್ವಚ್ಚಗೊಳಿಸಲಾಯಿತು.

ಕೆಥೊಲಿಕ್ ಸಭಾ ಸಾಸ್ತಾನ ಘಟಕ ಅಧ್ಯಕ್ಷ ಲೂಯಿಸ್ ಡಿಸೋಜಾ, ಕೆಥೊಲಿಕ್ ಸ್ತ್ರೀ ಸಂಘಟನೆ ಅಧ್ಯಕ್ಷರಾದ ಸೋಫಿಯಾ ಆಲ್ಮೇಡಾ, ಸ್ವಾಸ್ಥ್ಯ ಆಯೋಗದ ಸಂಚಾಲಕಿ ಐರಿನ್ ಲೂವಿಸ್, ಸಂತ ಅಂತೋನಿ ಚರ್ಚಿನ ಧರ್ಮಗುರು ವಂ|ಜಾನ್ ವಾಲ್ಟರ್ ಮೆಂಡೊನ್ಸಾ, ಸಂತ ಅಂತೋನಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ರೇಜಿ ತೋಮಸ್ ಹಾಗೂ ಉಪಸ್ಥೀತರಿದ್ದರು.


Spread the love