ಕೆಥೊಲಿಕ್ ಸಭಾ ಸಾಸ್ತಾನ ಘಟಕದ ಅಧ್ಯಕ್ಷರಾಗಿ ಸಿಂತಿಯಾ ಡಿಸೋಜಾ ಆಯ್ಕೆ
ಬ್ರಹ್ಮಾವರ: ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಸಂತ ಅಂತೋನಿ ಚರ್ಚ್ ಸಾಸ್ತಾನ ಘಟಕದ 2020-21ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಸಿಂತಿಯಾ ಡಿ’ಸೋಜಾ ಪಾಂಡೇಶ್ವರ ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ಉಪಸ್ಥಿತರಿದ್ದ ಸಂಘಟನೆಯ ಆಧ್ಯಾತ್ಮಿಕ ನಿರ್ದೇಶಕ ಹಾಗೂ ಚರ್ಚಿನ ಧರ್ಮಗುರು ವಂ|ಜಾನ್ ವಾಲ್ಟರ್ ಮೆಂಡೊನ್ಸಾ ಮಾತನಾಡಿ ಸಂಘಟನೆ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜಮುಖಿ ಕೆಲಸಗಳು ನಡೆಯಲಿ ಎಂದು ಶುಭ ಹಾರೈಸಿದರು.
ನಿಕಟಪೂರ್ವ ಅಧ್ಯಕ್ಷ ಲೂಯಿಸ್ ಎನ್ ಡಿ’ಸೋಜಾ ಸ್ವಾಗತಿಸಿ, ಕಾರ್ಯದರ್ಶಿ ಎಲ್ಸಿ ಲೂವಿಸ್ ವಂದಿಸಿದರು. ಕೋಶಾಧಿಕಾರಿ ಲೂಯಿಸ್ ಎಮ್ ಡಿಸೋಜಾ ಉಪಸ್ಥಿತರಿದ್ದರು.
2020-21ನೇ ಸಾಲಿನ ನೂತನ ಪದಾಧಿಕಾರಿಗಳ ವಿವರ ಇಂತಿದೆ.
ನಿಯೋಜಿತ ಅಧ್ಯಕ್ಷ ಐವನ್ ಡಿ ಆಲ್ಮೇಡಾ, ನಿಕಟಪೂರ್ವ ಅಧ್ಯಕ್ಷ ಲೂಯಿಸ್ ಡಿಸೋಜಾ, ಉಪಾಧ್ಯಕ್ಷ: ಮೈಕಲ್ ರೊಡ್ರಿಗಸ್, ಪ್ರಧಾನ ಕಾರ್ಯದರ್ಶಿ : ಜಾನೆಟ್ ಬಾಂಜ್, ಸಹ ಕಾರ್ಯದರ್ಶಿ : ಜನವೀವ್ ಡಿಸೋಜಾ, ಕೋಶಾಧಿಕಾರಿ : ವೀರಾ ಪಿಂಟೊ, ಸಹ ಕೋಶಾಧಿಕಾರಿ : ಲೂಯಿಸ್ ಮ್ಯಾಕ್ಷಿಮ್ ಡಿಸೋಜಾ, ಆಮ್ಚೊ ಸಂದೇಶ್ ಪತ್ರಿಕಾ ಪ್ರತಿನಿಧಿ :ಸೋಫಿಯಾ ಡಿ ಆಲ್ಮೇಡಾ, ರಾಜಕೀಯ ಸಂಚಾಲಕಿ: ಶೈಲಾ ಸಲ್ಡಾನಾ, ಸರಕಾರಿ ಸೌಲಭ್ಯಗಳ ಸಂಚಾಲಕಿ : ಮಾಲಾ ಲೂವಿಸ್, ಆಂತರಿಕ ಲೆಕ್ಕಪರಿಶೋಧಕರು: ಸುಜಾನ್ನಾ ಡಿ ಆಲ್ಮೇಡಾ, ಸ್ವಯಂ ಸೇವಕರು: ಮೈಕಲ್ ಲೂವಿಸ್, ಶರ್ಮಿಳಾ ಡಿಸೋಜಾ, ಜಸಿಂತಾ ಸೆರಾವೊ, ವಲೇರಿಯನ್ ಆಲ್ಮೇಡಾ ಮತ್ತು ಫ್ರಾನ್ಸಿಸ್ ಫೆರ್ನಾಂಡಿಸ್.