ಕೆಥೊಲಿಕ್ ಸಭಾ ಸಾಸ್ತಾನ ಘಟಕದಿಂದ ನಿರ್ಮಲ ಪರಿಸರ ಅಭಿಯಾನ
ಉಡುಪಿ: ಗಾಂಧಿ ಜಯಂತಿಯ ಪ್ರಯುಕ್ತ ಕೆಥೊಲಿಕ್ ಸಭಾ ಸಂತ ಅಂತೋನಿ ಘಟಕ ಸಾಸ್ತಾನ, ಐಸಿವೈಎಮ್, ವೈಸಿಎಸ್ ಹಾಗೂ ಕೆಥೊಲಿಕ್ ಸ್ತ್ರೀ ಸಂಘಟನೆ ವತಿಯಿಂದ ರಾಷ್ಟ್ರೀಯ ಹೆದ್ದಾರಿ 66 ಬಳಿ ಶುಕ್ರವಾರ ನಿರ್ಮಲ ಪರಿಸರ ಸ್ವಚ್ಛತಾ ಅಭಿಯಾನ ಜರುಗಿತು.
ಕೆಥೊಲಿಕ್ ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರು ಪರಿಸರ ಸಂಬಂಧಿ ನೀಡಿದ ವಿಶ್ವಪತ್ರ ಲಾವ್ದಾತೊ ಸಿ ಅನ್ವಯ ಹಾಗೂ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಪರಿಸರ ಸಂರಕ್ಷಣೆಗೆ ಸ್ವಚ್ಚತಾ ಹಿ ಸೇವಾ ಅಭಿಯಾನದನ್ವಯ ಕೆಥೊಲಿಕ್ ಸಭಾ ಉಡುಪಿ ಧರ್ಮಪ್ರಾಂತ್ಯದ ಆದೇಶದಂತೆ ಸ್ವಚ್ಚತಾ ಅಭಿಯಾನ ಜರುಗಿತು.
ಸಾಸ್ತಾನ ಸಂತಅಂತೋನಿ ಚರ್ಚಿನ ಎದುರು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ಬಳಿಯ ಬೆಳೆದು ನಿಂತ ಬೃಹತ್ ಗಾತ್ರದ ಹುಲ್ಲಿನ ಪೊದೆಗಳನ್ನು ಕೆಥೊಲಿಕ್ ಸಭಾ, ಭಾರತೀಯ ಕೆಥೊಲಿಕ್ ಯುವ ಸಂಚಾಲನ, ಯುವ ವಿದ್ಯಾರ್ಥಿ ಸಂಚಾಲನ ಹಾಗೂ ಕೆಥೊಲಿಕ್ ಸ್ತ್ರೀ ಸಂಘಟನೆ ಸದಸ್ಯರು ಸೇರಿಕೊಂಡು ಸವರಿ ತೆಗೆದು ಸ್ವಚ್ಚಗೊಳಿಸಿದರು.
ಕೆಥೊಲಿಕ್ ಸಭಾ ಸಾಸ್ತಾನ ಘಟಕ ಅಧ್ಯಕ್ಷೆ ಸಿಂತಿಯಾ ಡಿಸೋಜಾ, ಕೆಥೊಲಿಕ್ ಸ್ತ್ರೀ ಸಂಘಟನೆ ಅಧ್ಯಕ್ಷರಾದ ಸೋಫಿಯಾ ಆಲ್ಮೇಡಾ, ಐಸಿವೈಎಮ್ ಅಧ್ಯಕ್ಷರಾದ ರಿತೇಶ್ ಡಿಸೋಜಾ, ವೈಸಿಎಸ್ ಅಧ್ಯಕ್ಷರಾದ ತೋಮಸ್ ಡಿಸೋಜಾ, ಪದಾಧಿಕಾರಿಗಳಾದ ಲೂಯಿಸ್ ಮ್ಯಾಕ್ಷಿಮ್ ಡಿಸೋಜಾ, ಲೂಯಿಸ್ ಡಿಸೋಜಾ, ಜೊಸೇಫ್ ಡಿಸೋಜಾ, ಹೆನ್ರಿ ಲೂವಿಸ್, ವೀರಾ ಪಿಂಟೊ, ಫ್ಲೇವಿ ಡಿಸೋಜಾ, ಪ್ರೀತಿ ಪಿಂಟೊ, ರೋನಾಲ್ಡ್ ಪಿಂಟೊ, ಅನಿತಾ ಡಿ’ಆಲ್ಮೇಡಾ, ಲಿಯೋ ಡಿ’ಆಲ್ಮೇಡಾ ಹಾಗೂ ನಾಲ್ಕೂ ಸಂಘಟನೆಗಳ ಸದಸ್ಯರುಗಳು ಉಪಸ್ಥಿತರಿದ್ದರು.