Home Mangalorean News Kannada News ಕೆಪಿಸಿಸಿ ಅಧ್ಯಕ್ಷರ ಮನೆಯ ಮೇಲೆ ಸಿಬಿಐ ದಾಳಿ: ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಖಂಡನೆ

ಕೆಪಿಸಿಸಿ ಅಧ್ಯಕ್ಷರ ಮನೆಯ ಮೇಲೆ ಸಿಬಿಐ ದಾಳಿ: ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಖಂಡನೆ

Spread the love

ಕೆಪಿಸಿಸಿ ಅಧ್ಯಕ್ಷರ ಮನೆಯ ಮೇಲೆ ಸಿಬಿಐ ದಾಳಿ: ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಖಂಡನೆ

ಉಡುಪಿ : ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ, ಸಂಸದರಾದ ಡಿ.ಕೆ.ಸುರೇಶ್ ಅವರ ಮನೆಯ ಮೇಲೆ ಸಿಬಿಐ ದಾಳಿ ಮಾಡಿರುವುದು ಕೇವಲ ರಾಜಕೀಯ ಪ್ರೇರಿತ. ಎಂಬುದಾಗಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಯ ಅಧ್ಯಕ್ಷೆ ಗೀತಾ ವಾಗ್ಳೆ ಯವರು ಆರೋಪಿಸಿದ್ದಾರೆ.

ಡಿ. ಕೆ . ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಅನಂತರದಲ್ಲಿ ಅವರು ಪಡೆದುಕೊಳ್ಳುತ್ತಿರುವ ಅಪಾರ ಜನಪ್ರಿಯತೆ ಹಾಗೂ ಕೋವಿಡ್ 19 ನಿಂದಾಗಿ ಉಂಟಾದ ವಿಷಮ ಪರಿಸ್ಥಿತಿಯಲ್ಲಿ ದಿಕ್ಕು ತೋಚದೇ ತೊಳಲಾಡುತ್ತಿದ್ದ ಬಡ ವಲಸೆ ಕಾರ್ಮಿಕರು,ಕೂಲಿ ಕಾರ್ಮಿಕರು ಹಾಗೂ ರೈತಾಪಿ ವರ್ಗದವರಿಗೆ ಸಹಾಯ ಹಸ್ತ ವನ್ನು ಚಾಚುವುದರ ಮೂಲಕ ಆ ಬಡವರ ಹೃದಯಗಳಲ್ಲಿ ಒಂದು ವಿಶೇಷ ಸ್ಥಾನವನ್ನು ಹೊಂದಿರುವುದು ಎಲ್ಲರಿಗೂ ಗೊತ್ತು.

ಇದನ್ನು ಗಮನಿಸಿದ ಬಿಜೆಪಿಯ ಘಟಾನುಘಟಿಗಳ ಹೊಟ್ಟೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವವಾಗಿರುವುದು ಸರ್ವವಿಧಿತ.ಇದನ್ನು ಮರೆಮಾಚಲು,ಡಿಕೆಶಿಯವರ ಜನಪ್ರಿಯತೆ ಯನ್ನು ಕುಗ್ಗಿಸಲು ಬಿಜೆಪಿ ಹೆಣೆದಿರುವ ಒಂದು ದೊಡ್ಡ ಕುತಂತ್ರದ ಜಾಲವಾಗಿದೆ.ಕೊರೋನಾ ಸಂದರ್ಭದಲ್ಲಿ ತಾವು ಎಸಗಿರುವ ಭ್ರಷ್ಟಾಚಾರದ ಬಗ್ಗೆ ಇಂಚಿಂಚೂ ಪ್ರಶ್ನಿಸುತ್ತಿರುವ ಡಿಕೆಶಿಯವರು ಬಿಜೆಪಿಗರಿಗೆ ನುಂಗಲಾರದ ಬಿಸಿ ತುಪ್ಪ ವಾಗಿ ಪರಿಣಮಿಸುತ್ತಿದ್ದಾರೆ.ಅವರನ್ನು ಹತ್ತಿಕ್ಕಲು ಬಿಜೆಪಿ ಇನ್ನಿಲ್ಲದ ಹರಸಾಹಸ ಪಡುತ್ತಿದೆ.ಇದು ಮೊದಲನೇ ಬಾರಿಯೇನೂ ಅಲ್ಲ.

ಬಿಜೆಪಿಗರ ಆರೋಪಗಳಿಗೆ ಸೊಪ್ಪು ಹಾಕದೇ ಧೈರ್ಯದಿಂದ ಎದೆಯುಬ್ಬಿಸಿ ನಿಲ್ಲುವ ಡಿಕೆಶಿಯವರು ಎಂದೂ ಸೋಲಲಾರರು.ಅವರೊಂದಿಗೆ ಅವರನ್ನು ಪ್ರೀತಿಸುವ ಕೋಟ್ಯಂತರ ಬಡಜನರು ಹಾಗೂ ಕಾಂಗ್ರೆಸ್ ಕಾರ್ಯಕರ್ತರಿದ್ದಾರೆ.ಈ ಪ್ರೀತಿಯೇ ಅವರನ್ನು ರಕ್ಷಿಸಬಲ್ಲದು.ಪ್ರೀತಿಯ ರಾಜಕೀಯದ ಮುಂದೆ ಬಿಜೆಪಿಯ ದ್ವೇಷದ ರಾಜಕಾರಣ ಯಾವತ್ತೂ ಗೆಲ್ಲುವುದು ಸಾಧ್ಯವಿಲ್ಲ ಎಂದವರು ಹೇಳಿಕೆ ನೀಡಿದ್ದಾರೆ.


Spread the love

Exit mobile version