ಕೆಪಿಸಿಸಿ ಜಾಲತಾಣ ಸಮನ್ವಯ ಸಮಿತಿಗೆ ದ.ಕ. ಜಿಲ್ಲೆಯ ಇಬ್ಬರ ಆಯ್ಕೆ
ಮಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಕೆಪಿಸಿಸಿ ಸಾಮಾಜಿಕ ಜಾಲತಾಣ ಕೋ ಆರ್ಡಿನೇಷನ್ ಸಮಿತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀಮತಿ ಲಾವಣ್ಯ ಬಳ್ಳಾಲ್ ಮತ್ತು ಶೇರಿಲ್ ಅಯೋನ ರವರನ್ನು ನಿಯೋಜನೆ ಮಾಡಿ ಆದೇಶ ಹೊರಡಿಸಿದ್ದಾರೆ.
ಸಮಿತಿಗೆ ಒಟ್ಟು 9 ಸದಸ್ಯರನ್ನು ಹೆಚ್ಚುವರಿಯಾಗಿ ಆಯ್ಕೆ ಮಾಡಿದ್ದು ಇದರಲ್ಲಿ ಆಯ್ಕೆಯಾದ ಎರಡೂ ಮಹಿಳಾ ಸದಸ್ಯರುಗಳೂ ದಕ್ಷಿಣಕನ್ನಡ ಮೂಲದವರು. ಲಾವಣ್ಯ ಬಳ್ಳಾಲ್ ರವರು ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದು ಹಲವಾರು ವರ್ಷಗಳಿಂದ ಮಹಿಳಾ ಕಾಂಗ್ರೆಸ್ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿಯೂ ಕರ್ತವ್ಯ ನಿರ್ವಹಿಸಿದ ಅನುಭವವಿದೆ.
ಶೆರಿಲ್ ಅಯೋನ ರವರು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದು ರಾಜ್ಯಮಟ್ಟದ ಮಹಿಳಾ ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣ ವಿಭಾಗದ ಸಂಚಾಲಕರಾಗಿ ಯು ಕರ್ತವ್ಯ ನಿರ್ವಹಿಸಿದ ಅನುಭವವಿದೆ.
ಇವರ ಕಾರ್ಯಕ್ಷಮತೆಯನ್ನು ಗುರುತಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರುಈ ಮೇಲಿನಂತೆ ಆದೇಶ ಹೊರಡಿಸಿದ್ದು ಇದು ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಹೆಮ್ಮೆಯ ವಿಷಯವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಹರೀಶ್ ಕುಮಾರ್ ಅವರು, ಇವರಿಬ್ಬರಿಗೂ ಅಭಿನಂದನೆ ಸಲ್ಲಿಸಿದ್ದಾರೆ