Home Mangalorean News Kannada News ಕೆಮುಂಡೇಲು ಶಾಲೆಯ 2 ಕೋಟಿ ರೂ. ವೆಚ್ಚದ ನೂತನ ಕಟ್ಟಡ ಶಂಕುಸ್ಥಾಪನೆ

ಕೆಮುಂಡೇಲು ಶಾಲೆಯ 2 ಕೋಟಿ ರೂ. ವೆಚ್ಚದ ನೂತನ ಕಟ್ಟಡ ಶಂಕುಸ್ಥಾಪನೆ

Spread the love

ಕೆಮುಂಡೇಲು ಶಾಲೆಯ 2 ಕೋಟಿ ರೂ. ವೆಚ್ಚದ ನೂತನ ಕಟ್ಟಡ ಶಂಕುಸ್ಥಾಪನೆ

ರಾಜ್ಯದಲ್ಲಿ 120ವರ್ಷಗಳ ಕಾಲದ ಪುರಾತನ ಕನ್ನಡ ಶಾಲೆ ಎಂಬ ಹೆಗ್ಗಳಿಕೆ ಇರುವ ದೈವಿಕ ಪರಿಸರದ ಕೆಮುಂಡೇಲು ಶಾಲಾ ಪುನರುದ್ಧಾರ ಸಂಕಲ್ಪಕ್ಕೆ ದೈವಾನುಗ್ರಹವಿದೆ. ನನಗೆ ಸ್ಪೂರ್ಥಿ, ಛಲ, ಮಹತ್ವಾಕಾಂಕ್ಷೆಯನ್ನು ನೀಡಿದ ಈ ಕನ್ನಡ ಶಾಲೆಗೆ ಸಹಸ್ರಮಾನೋತ್ಸವ ಅನುಗ್ರಹವಾಗಲಿ ಎಂದು ಶಾಲಾ ಸಂಚಾಲಕ/ ಶ್ರೀ ಪುತ್ತಿಗೆ ಮಠಾೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

ಎಲ್ಲೂರು ಸಮೀಪದ ಕೆಮುಂಡೇಲು ಹಿರಿಯ ಪ್ರಾಥಮಿಕ ಶಾಲೆಗೆ ರೂ.2ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಮಹತ್ವಾಕಾಂಕ್ಷೆಯ ವಿದ್ಯಾಭ್ಯಾಸದ ಗುರಿ ವಿದ್ಯಾರ್ಥಿಗಳಲ್ಲಿರಬೇಕು. ಮಾತೃ ಬಾಷಾ ಕಲಿಕೆಯಿಂದ ಮಾತ್ರ ಇದು ಸಾಧ್ಯ. ಹೆಚ್ಚಾದ ಅಹಂಭಾವದಿಂದ ಸಾಧನೆ ಕಡಿಮೆಯಾಗುತ್ತದೆ. ಕೀಳರಿಮೆ ಪಡದೆ ಕನ್ನಡ ಶಾಲೆಯಲ್ಲಿ ಕಲಿತ ನೀವೇ ಶ್ರೇಷ್ಠರು. ಎಲ್ಲರ ಬಾವನೆಗಳ-ಅಭಿಮಾನದ ಸಂಗಮವಾಗುವ ಮೂಲಕ ಈ ಶಾಲೆಯು ಸನಾತನ ವಿದ್ಯಾ ಸಂಸ್ಥೆಯಾಗಿ ಮುನ್ನಡೆಯಲಿ ಎಂದು ಆಶೀರ್ವಚಿಸಿದರು.

ಮೂಲ ಸೌಕರ್ಯ ಕಲ್ಪಿಸುವಲ್ಲಿ ಸರಕಾರಿ ಅನುದಾನಗಳನ್ನು ಕಾಯದೆ ಲಕ್ಷಾಂತರ ವಿದ್ಯಾರ್ಥಿಗಳ ಅಕ್ಷರ ಸಂಸ್ಕøತಿಯ ಸಾಧನೆಗೈದ ವಿದ್ಯಾದೇಗುಲವಾಗಿರುವ ಕೆಮುಂಡೇಲು ಶಾಲೆ ಎಲ್ಲರಿಗೂ ಮಾದರಿಯಾಗಲಿ ಎಂದು ದ.ಕ. ಸಹಕಾರಿ ಸಂಘ ನಿರ್ದೇಶಕ ಡಾ|ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಜಿ.ಪಂ.ಸದಸ್ಯೆ ಶಿಲ್ಪಾ ಜಿ.ಸುವರ್ಣ, ಜೆ.ಡಿ.ಎಸ್ ಜಿಲ್ಲಾದ್ಯಕ್ಷ ಯೋಗೀಶ್ ಶೆಟ್ಟಿ, ನಿ.ಪೂ.ಸಂಚಾಲಕ ಢಾ|ಭವಾನಿ ಶಂಕರ್, ಸಂಸ್ಕøತ ಲೋಕಬಾಷಾ ಪ್ರಚಾರ ಪರಿಷತ್ ಇದರ ಡಾ|ಸದಾನಂದ ೀಕ್ಷಿತ್ ಒರಿಸ್ಸಾ ಅವರು ಮಾತನಾಡಿ ಶುಭ ಹಾರೈಸಿದರು.

ಎಲ್ಲೂರು ಗ್ರಾ.ಪಂ.ಅಧ್ಯಕ್ಷೆ ವಸಂತಿ ಮಧ್ವರಾಜ್ ಸಭಾಧ್ಯಕ್ಷತೆವಹಿಸಿದ್ದರು. ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷೆ ಶಮಲಾ ನಾಗರತ್ನ ರಾವ್, ಹಳೆ ವಿದ್ಯಾರ್ಥಿ ಡಾ|ಭವಾನಿಶಂಕರ್, ನಾಗರಾಜ ಆಚಾರ್ಯ, ಶಿಕ್ಷಕಿ ಕ್ಯಾಥರಿನ್ ಫೆರ್ನಾಂಡಿಸ್, ಅನಂತಪದ್ಮನಾಭ ಜೆನ್ನಿ ಅವರು ನೂತನ ಕಟ್ಟಡಕ್ಕೆ ಪ್ರಥಮ ಆರ್ಥಿಕ ನಿ ಸಮರ್ಪಿಸಿದರು.

ಎಲ್ಲೂರು ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೈ.ಪ್ರಪುಲ್ಲ ಶೆಟ್ಟಿ, ಸಮಾಜ ಸೇವಕ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ತಾ.ಪಂ.ಸದಸ್ಯ ಕೇಶವ ಮೊೈಲಿ, ಉದ್ಯಮಿ ಕಿಶೋರ್ ಕುಮಾರ್ ಗುರ್ಮೆ, ಮುರಳೀಧರ ಆಚಾರ್ಯ , ಗುತ್ತಿಗೆದಾರ ತೆಂಕರಗುತ್ತು ಸಂತೋಶ್ ಶೆಟ್ಟಿ ಉಪಸ್ಥಿತರಿದ್ದರು.

ಎಲ್ಲೂರು ಕ್ಷೇತ್ರ ತಂತ್ರಿ ಬೆಟ್ಟಿಗೆ ವೆಂಕಟರಾಜ ತಂತ್ರಿ ಅವರು ಧಾರ್ಮಿಕ ವಿ ನೆರವೇರಿಸಿದರು. ವಿದ್ಯಾರ್ಥಿಗಳಾದ ಸಾನ್ವಿ ಮತ್ತು ಪ್ರತೀಕ್ಷಾ ಪ್ರಾರ್ಥಿಸಿ, ಮುಖ್ಯೋಪಾದ್ಯಾಯ ಜಗನ್ನಾಥ ಶೆಟ್ಟಿ ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷೆ ಶಮಲಾ ನಾಗರತ್ನ ರಾವ್ ಪ್ರಸ್ತಾವಿಸಿ, ಹರೀಶ್ ಕೋಟ್ಯಾನ್ ಶುಭ ಸಂದೇಶ ಪತ್ರ ವಾಚಿಸಿ, ನಿರೂಪಿಸಿದರು. ಕೃಷ್ಣಾನಂದ ರಾವ್ ವಂದಿಸಿದರು.


Spread the love

Exit mobile version