Home Mangalorean News Kannada News ಕೆಸಿಎಫ್ ಕಾರ್ಯಕರ್ತರ ಹಜ್ಜಾಜಿಗಳ ಸೇವೆ ಸೌದಿ ಸರಕಾರದ ಪ್ರಶಂಸಾ ಪತ್ರ

ಕೆಸಿಎಫ್ ಕಾರ್ಯಕರ್ತರ ಹಜ್ಜಾಜಿಗಳ ಸೇವೆ ಸೌದಿ ಸರಕಾರದ ಪ್ರಶಂಸಾ ಪತ್ರ

Spread the love

ಕೆಸಿಎಫ್ ಕಾರ್ಯಕರ್ತರ ಹಜ್ಜಾಜಿಗಳ ಸೇವೆ ಸೌದಿ ಸರಕಾರದ ಪ್ರಶಂಸಾ ಪತ್ರ

ಮಂಗಳೂರು: ಕೆಸಿಎಫ್ ಕಾರ್ಯಕರ್ತರ ಹಜ್ಜಾಜಿಗಳ ಸೇವೆಯನ್ನು ಮನಗೊಂಡು ಈ ಬಾರಿಯೂ ಕೂಡ ಸೌದಿ ಮಿನಿಸ್ಟ್ರಿ ಆಫ್ ಹೆಲ್ತ್ ಪ್ರಶಂಸನೀಯ ಪತ್ರ ನೀಡಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಹಜ್ಜಾಜಿಗಳ ಸೇವೆಗಾಗಿ ಸೌದಿ ಸರಕಾರದಿಂದ ಎರಡನೇ ಬಾರಿ ಪ್ರಶಂಸನೀಯ ಪತ್ರ ಪಡೆದುಕೊಂಡ ಏಕೈಕ ಸಂಘಟನೆ ಎಂದೆನಿಸಿಕೊಂಡಿದ್ದು , ಇಂದು ಮಕ್ಕಾದ ಮಿನಾ ಆಸ್ಪತ್ರೆಯಲ್ಲಿ ಕೆಸಿಎಫ್ ಕಾರ್ಯಕರ್ತರು ಸೌದಿ ಸರಕಾರಿ ಅಧಿಕಾರಿಗಳಿಂದ ಪ್ರಶಂಸನೀಯ ಪತ್ರ ಪಡೆದುಕೊಂಡರು.

kcf-haj-service-00

ಆ ಬಳಿಕ ಮಕ್ಕಾ ಅಜೀಜಿಯಾದಲ್ಲಿ ಕೆಸಿಎಫ್ ಹಜ್ ವಾಲೇಂಟಿಯರ್ ಕೋರ್ ಇದರ ಸಮಾರೋಪ ಸಮಾರಂಭ ನಡೆಯಿತು. ಈ ವೇಳೆ ಆಲ್ ಇಂಡಿಯಾ ಜಂಯ್ಯತುಲ್ ಉಲಮಾ ಇದರ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಮಾತನಾಡಿ ದೇಶ ವಿದೇಶಗಳಿಂದ ಹಜ್ಜ್ ನಿರ್ವಹಿಸಲು ಬಂದ ಹಾಜಿಗಳ ಸೇವೆ ಮಾಡಿದ ಕೆಸಿಎಫ್ ಕಾರ್ಯಕರ್ತರ ಕೆಲಸ ಶ್ಲಾಘನೀಯ. ಸುಡುಬಿಸಿಲಿನ ಬೇಗೆಯನ್ನು ಲೆಕ್ಕಿಸದ ಕೆಸಿಎಫ್ ಕಾರ್ಯಕರ್ತರು ಪರಿಶುದ್ಧ ಮಕ್ಕಾದ ಮಿನಾ, ಅರಫಾ, ಮುದ್ಸಲಿಫಾದಲ್ಲಿ ಹಾಜಿಗಳ ಸೇವೆ ನಡೆಸಿದ್ದು, ಎಲ್ಲಾ ಕಾರ್ಯಕರ್ತರನ್ನು ಅಭಿನಂದಿಸಿದರು. ಬಳಿಕ ಕೇರಳ ಮುಸ್ಲಿಂ ಜಮಾತ್ ರಾಜ್ಯ ಕಾರ್ಯದರ್ಶಿ ಖಲೀಲ್ ತಂಙಳ್ ಮಾತನಾಡಿ ಕೆಸಿಎಫ್ ಸಂಘಟನೆ ರಚನೆಯಾಗಿ ನಾಲ್ಕು ವರ್ಷಗಳಾಗಿದೆ,ಆದ್ರೆ ಅದರ ಸಾಧನೆ ನಾಲ್ಕು ಶತಮಾನಗಳನ್ನು ಮೀರಿಸುವಂತಿದೆ. ಸುಡುಬಿಸಿಲಿನಲ್ಲಿ ಕೊಡೆಗಳನ್ನು ಕೂಡ ಬಳಸದೇ ಹಾಜಿಗಳ ಸೇವೆಗೈದ ಕೆಸಿಎಫ್ ಕಾರ್ಯಕರ್ತರ ಸೇವೆ ಮೆಚ್ಚಲೇಬೇಕೆಂದರು. ಹಾಜಿಗಳ ಸೇವೆಗೈಯುವವರಿಗೆ ಹರ್ಷಿನ ನೆರಳು ಲಭಿಸಲಿದ್ದು, ಅಂತಹ ವಿಭಾಗದಲ್ಲಿ ಕೆಸಿಎಫ್ ಕಾರ್ಯಕರ್ತರು ಕೂಡ ಒಳಗೊಳ್ಳಲಿ ಎಂದು ಹಾರೈಸಿದರು.

ಈ ವೇಳೆ ಕೇರಳ ಎಸ್.ಎಸ್.ಎಫ್ ಉಪಾಧ್ಯಕ್ಷ ಫಾರೂಕ್ ನಈಮೀ, ತುರಾಬ್ ತಂಙಳ್, ಕೆಸಿಎಫ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಫಾರೂಕ್ ಕಾಟಿಪಳ್ಳ, ಕೆಸಿಎಫ್ ಹೆಚ್.ವಿ.ಸಿ ವ್ಯವಸ್ಥಾಪಕ ಸಲೀಂ ಕನ್ಯಾಡಿ, ಉಮರ್ ಸಖಾಫಿ ಕೊಡಗು, ನಝೀರ್ ಕಾಶಿಪಟ್ಣ ಮತ್ತಿತರರು ಉಪಸ್ಥಿತರಿದ್ದರು.


Spread the love

Exit mobile version