Spread the love
ಕೆ.ಎಂ.ಸಿ ಅತ್ತಾವರ – ನವೀಕೃತ ವೈದ್ಯಕೀಯ ಹೊರರೋಗಿ ವಿಭಾಗ ಉಧ್ಘಾಟನೆ
ಮಂಗಳೂರು: ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ನವೀಕೃತಗೊಂಡ ವೈದ್ಯಕೀಯ (ಜನರಲ್ ಮೆಡಿಸಿನ್) ಹೊರರೋಗಿ ವಿಭಾಗವನ್ನು ಕೆ.ಎಂ.ಸಿ. ಮಂಗಳೂರು ಕ್ಯಾಂಪಸ್ನ ಡೀನ್ ಡಾ. ಎಂ. ವೆಂಕಟರಾಯ ಪ್ರಭು ರವರು ಉಧ್ಘಾಟಿಸಿದರು.
ನವೀಕೃತಗೊಂಡ ವೈದ್ಯಕೀಯ ಹೊರರೋಗಿ ವಿಭಾಗವು ತಪಾಸಣೆಗಾಗಿ ಬರುವ ರೋಗಿಗಳಿಗೆ ಬಹಳಷ್ಟು ಅನುಕೂಲಕರವಾಗುವಂತೆ ಸುಸಜ್ಜಿತವಾಗಿ ನವೀಕೃತಗೊಂಡಿದೆ. ಈ ಉಧ್ಘಾಟನಾ ಸಮಾರಂಭದಲ್ಲಿ ಕೆ.ಎಂ.ಸಿ. ಮಂಗಳೂರಿನ ಅಸೋಸಿಯೇಟ್ ಡೀನ್ ಡಾ. ಉನ್ನಿಕೃಷ್ಣನ್, ವೈದ್ಯಕೀಯ ಅಧೀಕ್ಷಕ ಡಾ.ಆನಂದ್ ವೇಣುಗೋಪಾಲ್, ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಜಾನ್ ರಾಮಪುರಮ್, ವೈದ್ಯಕೀಯ ವಿಭಾಗದ ಹಿರಿಯ ನಿವೃತ್ತ ಮಾಜಿ ಘಟಕ ಮುಖ್ಯಸ್ಥರಾದ ಡಾ. ಪ್ರಭಾ ಅಧಿಕಾರಿ, ವೈದ್ಯಕೀಯ ವಿಭಾಗ ಮುಖ್ಯಸ್ಥರು ಹಾಗೂ ಹಿರಿಯ ವೈದ್ಯಕೀಯ ತಜÐರು ಹಾಗೂ ವೈದ್ಯಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
Spread the love