Home Mangalorean News Kannada News ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ: ಜೂನ್ 5 ರಿಂದ ಎಲ್ಲಾ ಹೊರ ರೋಗಿ ವಿಭಾಗಗಳು ಆರಂಭ

ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ: ಜೂನ್ 5 ರಿಂದ ಎಲ್ಲಾ ಹೊರ ರೋಗಿ ವಿಭಾಗಗಳು ಆರಂಭ

Spread the love

ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ: ಜೂನ್ 5 ರಿಂದ ಎಲ್ಲಾ ಹೊರ ರೋಗಿ ವಿಭಾಗಗಳು ಆರಂಭ

ವiಂಗಳೂರು: ಫಿಸಿಯೋಥೆರಪಿ ಮತ್ತು ಅವಲಂಭಿತ ಸೇವೆಗಳು ಸೇರಿದಂತೆ ಎಲ್ಲಾ ಒ.ಪಿ.ಡಿ. (ಹೊರ ರೋಗಿ) ವಿಭಾಗಗಳು ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಜೂನ್ 5 ರಿಂದ ಬೆಳಿಗ್ಗೆ 9 ರಿಂದ 1 ಗಂಟೆಯವರೆಗೆ ಪುನರಾರಂಭಗೊಳ್ಳಲಿವೆ. ದೂರವಾಣಿ ಮೂಲಕ ಮುಂಗಡವಾಗಿ ಸಂದರ್ಶನದ ವೇಳೆಯನ್ನು ನಿಗದಿಪಡಿಸಿ ಹೊರ ರೋಗಿ ಸೇವೆಯನ್ನು ಪಡೆದುಕೊಳ್ಳಬಹುದು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಜಾನ್ ರಾಮಪುರಮ್ ತಿಳಿಸಿದ್ದಾರೆ.

ರೋಗಿಗಳ ಅನುಕೂಲಕ್ಕಾಗಿ ಈ ಹೊರ ರೋಗಿ ಸೌಲಭ್ಯವನ್ನು ಪಡೆಯಲು ದೂರವಾಣಿ ಸಂಖ್ಯೆ: 8861586249 / 0824 – 2445858 ಕ್ಕೆ, ಕರೆ ಮಾಡಿ ಸಂದರ್ಶನದ ವೇಳೆಯನ್ನು ನಿಗದಿಪಡಿಸಬೇಕು.

ಆಸ್ಪತ್ರೆಗೆ ಭೇಟಿ ನೀಡುವರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಆಸ್ಪತ್ರೆಯ ಆಡಳಿತ ಮಂಡಳಿಯು ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ. ಆಸ್ಪತ್ರೆಗೆ ಭೇಟಿ ನೀಡುವ ಪ್ರತಿಯೊಬ್ಬರೂ ಮುಖಗವಸು (ಮಾಸ್ಕ್) ಧರಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು ಒಬ್ಬ ರೋಗಿಯೊಂದಿಗೆ ಒಬ್ಬ ಸಹಾಯಕರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಆಸ್ಪತ್ರೆಗೆ ಭೇಟಿ ನೀಡುವವರ ಟ್ರಯಾಜಿಂಗ್ ಹಾಗೂ ಉಷ್ಣಾಂಶ ತಪಾಸಣೆಯನ್ನು ಮಾಡಿದ ನಂತರ ಅವರನ್ನು ಆಯಾಯ ವಿಭಾಗಗಳಿಗೆ ಕಳುಹಿಸಲಾಗುವುದು.


Spread the love

Exit mobile version