Home Mangalorean News Kannada News ಕೆ.ಎಸ್.ಆರ್.ಪಿ ಸಿಬ್ಬಂದಿಗಳಿಗೆ ರೋಗ ನಿರೋಧಕ ಔಷಧ ವಿತರಣೆ

ಕೆ.ಎಸ್.ಆರ್.ಪಿ ಸಿಬ್ಬಂದಿಗಳಿಗೆ ರೋಗ ನಿರೋಧಕ ಔಷಧ ವಿತರಣೆ

Spread the love

ಕೆ.ಎಸ್.ಆರ್.ಪಿ ಸಿಬ್ಬಂದಿಗಳಿಗೆ ರೋಗ ನಿರೋಧಕ ಔಷಧ ವಿತರಣೆ

ಮಂಗಳೂರು : ಆಯುಷ್ ಇಲಾಖೆ ದಕ್ಷಿಣ ಕನ್ನಡ ಮತ್ತು ಯೆನೆಪೋಯ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯ ಸಹಯೋಗದಲ್ಲಿ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ 7ನೇ ಪಡೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ, ಅಸೈಗೋಳಿಯಲ್ಲಿ ಉಚಿತ ಆಯುಷ್ ರೋಗನಿರೋಧಕ ಶಕ್ತಿ ವರ್ಧಕ ಔಷಧಿ ವಿತರಣಾ ಶಿಬಿರದಲ್ಲಿ ಬುಧವಾರ 650 ಕೆ.ಎಸ್.ಆರ್.ಪಿ ಸಿಬ್ಬಂದಿಗಳಿಗೆ ಆಯುಷ್ ರೋಗನಿರೋಧಕ ಶಕ್ತಿವರ್ಧಕ ಔಷಧಿಯನ್ನು ವಿತರಿಸಲಾಯಿತು.

ಕಾರ್ಯಕ್ರಮ ಉದ್ಘಾಟನೆಯನ್ನು ಶಾಸಕ ಯು.ಟಿ.ಖಾದರ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮದ್ ಮೋನು, ಕೆ.ಎಸ್.ಆರ್.ಪಿ 7ನೇ ಪಡೆಯ ಕಮಾಂಡೆಂಟ್ ಎಸ್.ಯುವಕುಮಾರ್, ಅಸಿಸ್ಟೆಂಟ್ ಕಮಾಂಡೆಂಟ್ ಶರತ್ ಎಂ.ಎ, ಯೆನೆಪೋಯ ಹೋಮಿಯೋಪತಿ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ವಿವೇಕ್ ವರ್ಣೇಕರ್, ಉಪಪ್ರಾಂಶುಪಾಲ ಡಾ.ವಿಜಯೇಂದ್ರ ಇಟಗಿ, ಕಾಲೇಜಿನ ವೈದ್ಯಾಧಿಕಾರಿಗಳಾದ ಡಾ:ಶಶಿಕಾಂತ್, ಡಾ,ಕಿರಣ್, ಡಾ,ಅರುಣ್ ಕುಮಾರ್ ಹಾಜರಿದ್ದರು.

ಯೆನೆಪೋಯ ಹೋಮಿಯೋಪತಿ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿವೇಕ್ ವರ್ಣೇಕರ್ ರವರು ಹೋಮಿಯೋಪತಿ ಔಷಧಿಯನ್ನು ಸೇವಿಸುವ ವಿಧಾನ ಹಾಗೂ ಪರಿಣಾಮದ ಬಗ್ಗೆ ಮಾಹಿತಿಯನ್ನು ನೀಡಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಮಹಮದ್ ಇಕ್ಬಾಲ್, ಆಯುಷ್ ಇಲಾಖೆ ವೈದ್ಯಾಧಿಕಾರಿ ಡಾ:ಸಹನಾ ಪಾಂಡುರಂಗ ಮತ್ತಿತರು ಉಪಸ್ಥಿತರಿದ್ದರು.


Spread the love

Exit mobile version