Spread the love
ಕೆ.ಎಸ್.ಸಿ.ಸಿ ಯ ಮೊದಲನೇ ಖಾಸಗಿ ಚಾರ್ಟೆಡ್ ವಿಮಾನ ಭಾನುವಾರ ಮಂಗಳೂರಿಗೆ
ದುಬೈ : ಕರ್ನಾಟಕ ಸ್ಪೊರ್ಟ್ಸ್ & ಕಲ್ಚರಲ್ ಕ್ಲಬ್ ನ ಮೊದಲನೇ ಖಾಸಗಿ ಚಾರ್ಟೆಡ್ ವಿಮಾನವು ಮಂಗಳೂರಿಗೆ ಜೂನ್ 21 ರಂದು ಶಾರ್ಜಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲಿದೆ.
ಶಾರ್ಜಾ ಮೂಲದ ಏರ್ ಅರೇಬಿಯಾ ಸಂಸ್ಥೆಯ ವಿಮಾನವು 173 ಅನಿವಾಸಿ ಕನ್ನಡಿಗರನ್ನು ಮರಳಿ ತಾಯ್ನಾಡಿಗೆ ಹೊತ್ತು ತರಲಿದೆ. ಈ ವಿಮಾನದಲ್ಲಿ ಆದ್ಯತೆಯ ಮೇರೆಗೆ ಗರ್ಭಿಣಿಯರಿಗೆ, ತುರ್ತು ಚಿಕಿತ್ಸಾ ರೋಗಿಗಳಿಗೆ, ಹಿರಿಯ ನಾಗರಿಕರಿಗೆ, ವಿಸಿಟ್ ವೀಸಾದಲ್ಲಿ ಬಂದು ಸಿಲುಕಿಕೊಂಡವರಿಗೆ, ಕೆಲಸ ಕಳೆದುಕೊಂಡವರಿಗೆ ಹಾಗೂ ತಾಯ್ನಾಡಿನಲ್ಲಿ ಮರಣ ಹೊಂದಿದ ವ್ಯಕ್ತಿಯ ಸಂಬಂಧಿಕರಿಗೆ ಅವಕಾಶ ಕಲ್ಪಿಸಲಾಗಿದೆ.
Spread the love