ಕೆ.ಸಿ ಎಫ್ ನಿಂದ ಅಫಘಾತಕ್ಕಿಡಾದ ವ್ಯಕ್ತಿಗೆ ಆರ್ಥಿಕ ನೆರವು
ಜಿದ್ದಾ: ಕೆಸಿಎಫ್ ಜಿದ್ದಾ ಝೋನ್ ಅಧೀನದಲ್ಲಿರುವ ಮಕ್ಕತುಲ್-ಮುಕರ್ರಮ ಸೆಕ್ಟರ್ ಸದಸ್ಯರಾಗಿರುವ ಫಕ್ರುದ್ದೀನ್ ಅಬ್ದುಲ್ಲಾ ಮಂಬಾಡಿ ಯವರು ಕೆಲವು ದಿನಗಳ ಹಿಂದೆ ಅಲ್-ಲೀತ್ ಎಂಬಲ್ಲಿ ರಸ್ತೆ ಅಫಘಾತಕ್ಕೀಡಾಗಿದ್ದು, ಈಗಾಗಲೇ ಮೂರು ತಿಂಗಳ ವೇತನ ಕೂಡಾ ಲಭಿಸದೆ ಬಡತನದಿಂದಿರುವ ಇವರಿಗೆ ಅಪಘಾತವು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು.
ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆ.ಸಿ ಎಫ್ ಅನಿವಾಸಿ ಕನ್ನಡಿಗ ಸದಸ್ಯರಿಗಾಗಿ ಮೆಂಬರ್ಸ್ ರಿಲೀಫ್ ಫಂಡ್(ಎಂ ಆರ್ ಎಫ್) ರಚಿಸಿದ್ದು, ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಅಧೀನದ ಎಂ .ಆರ್. ಎಫ್ ಫಂಡ್ ನಿಂದ 50,000 ರೂಪಾಯಿಯನ್ನು ಜಿದ್ದಾ ಝೋನಲ್ ನೇತಾರರು ಫಕ್ರುದ್ದೀನ್ ಅಬ್ದುಲ್ಲಾ ರವರಿಗೆ ಜಿದ್ದಾದಲ್ಲಿ ನೀಡಿದರು.
ಇದಕ್ಕೂ ಮುಂಚೆ ಜಿದ್ದಾ ಝೋನಲ್ ಅಧ್ಯಕ್ಷರ ನೇತ್ರತ್ವದಲ್ಲಿ ಕೆಲವು ಕಾರ್ಯಕರ್ತರು ಅವರನ್ನು ಭೇಟಿಯಾಗಿದ್ದಲ್ಲದೆ, ಪ್ರಾಥಮಿಕ ಹಂತವಾಗಿ ಒಂದು ಸಾವಿರ ರಿಯಾಲ್ ನೀಡಿ ಅವರಿಗೆ ಸಾಂತ್ವನ ಹೇಳಿದ್ದರು.
ಇನ್ನು, ಅವರು ಊರಿಗೆ ಹೋಗಲು ಉದ್ದೇಶಿಸಿದ್ದು ಕಂಪನಿಯಿಂದ ಅದಕ್ಕೆ ಅನುಮತಿ ಸಿಗಲು ಕೆಲವು ವಿಳಂಬಗಳು ಸಂಭವಿಸುತ್ತಿದ್ದ ವಿಷಯ ತಿಳಿದು ಕೆಸಿಎಫ್ ಕಾರ್ಯಕರ್ತರು ಈ ವಿಷಯದಲ್ಲಿ ಕಂಪನಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಊರಿಗೆ ಹೋಗಲು ಕಂಪನಿಯಿಂದ ಸಮ್ಮತಿ ದೊರಕುವಂತೆ ಮಾಡಿರುತ್ತಾರೆ.
ಫಕ್ರುದ್ದೀನ್ ಅಬ್ದುಲ್ಲಾ ಮಂಬಾಡಿಯವರ ಎಲ್ಲಾ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗಿಯಾದ ಜಿದ್ದಾ ಝೋನಲ್ ಕಾರ್ಯಕರ್ತರನ್ನು ರಾಷ್ಟ್ರೀಯ ಸಮಿತಿಯು ಅಭಿನಂದಿಸಿದೆ.