Home Mangalorean News Kannada News ಕೆ ಸಿ ಸಿ ವತಿಯಿಂದ ಯು ಎ ಇ ರಾಷ್ಟ್ರೀಯ ದಿನಾಚರಣೆ

ಕೆ ಸಿ ಸಿ ವತಿಯಿಂದ ಯು ಎ ಇ ರಾಷ್ಟ್ರೀಯ ದಿನಾಚರಣೆ

Spread the love

ಕೆ ಸಿ ಸಿ ವತಿಯಿಂದ ಯು ಎ ಇ ರಾಷ್ಟ್ರೀಯ ದಿನಾಚರಣೆ

ದುಬೈ: ಹಲವಾರು ಕುಟುಂಬಗಳ ಕಣ್ಣೀರ ಧಾರೆಯನ್ನು ಒರೆಸಿ ಅವರ ಬಾಳಿನಲ್ಲಿ ಬೆಳಕನ್ನು ಚೆಲ್ಲಳು ಯು ಎ ಇ ರಾಷ್ಟ್ರದ ಕೊಡುಗೆಯನ್ನು ಎಂದೂ ಮರೆಯಲಸಾದ್ಯ. ಕಡಲಾಚೆಗೆ ಆಗಮಿಸಿದ ನಮ್ಮಂತಹ ಹಲವಾರು ಯುವ ಜನೆತೆಗೆ ಜಾತಿ  ವರ್ಣ ಪಂಗಡಗಳೆಂಬ ಭೇದ ಭಾವವನ್ನು ತೋರದೆ ಸರ್ವರನ್ನೂ ಸ್ವಾಗತಿಸಿ ಸರ್ವರಿಗೂ ಜೀವನದ ದಾರಿ ತೋರಿಸಿಕೊಟ್ಟ ಉದಾತ್ತ ರಾಷ್ಟ್ರವಾಗಿದೆ ಇದು. ಇಂತಹ ಸಂಧರ್ಭಗಳಲ್ಲಿ ಇಲ್ಲಿನ ಆಡಳಿತಾಧಿಕಾರಿಗಳನ್ನು , ನೇತಾರರನ್ನು ಸ್ಮರಿಸಿಕೊಂಡು ರಾಷ್ಟ್ರದ ಪ್ರಗತಿಯಲ್ಲಿ ನಾವೆಲ್ಲರೂ ಕೈಜೋಡಿಸಿಕೊಳ್ಳಬೇಕಾಗಿದ್ದು ನಮ್ಮ ಮೇಲಿನ ಕರ್ತವ್ಯವಾಗಿದೆ ಎಂದು ಉಸ್ತಾದ್ ಅಲವಿ ಕುಟ್ಟಿ ಹುದವಿ ರವರು ಕೆ ಐ ಸಿ ಯು ಎ ಇ ಹಾಗೂ ಕರ್ನಾಟಕ ಕಲ್ಚರಲ್ ಸೆಂಟರ್ ಹಮ್ಮಿಕೊಂಡ ಯು ಎ ಇ ರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಓರ್ವ ತಾಯಿ ತನ್ನ ಮಕ್ಕಳ್ಳನ್ನು ಯಾವ ರೀತಿಯಲ್ಲಿ ಮಮತೆಯಿಂದ ಸಾಕುತ್ತಾಳೋ ಅದೇ ರೀತಿ ನಮ್ಮಂತಹ ಅದೆಷ್ಟೋ ಅನಿವಾಸಿಗಳನ್ನೂ ಈ ರಾಷ್ಟ್ರವು ಸಾಕುತ್ತಿದೆ. ಒಂದೊತ್ತಿನ ಅನ್ನಕ್ಕೆ ಪರದಾಡುವ ಹಲವಾರು ರಾಷ್ಟ್ರಗಳತ್ತ  ಈ ರಾಷ್ಟ್ರದ ನೇತಾರರು ಸಹಾಯದ ಹಸ್ತ ಚಾಚಿದ್ದು , ಇಸ್ಲಾಮಿನ ಆದರ್ಶಗಳಂತೆ ಮುನ್ನಡೆಯುತಿದೆ. ಪರಿಶುದ್ಧ ಹದೀಸ್ ಗಳ ಉಲ್ಲೇಖದಂತೆ , ತನ್ನ ನೆರೆಮನೆಯವನು ಹಸಿವಿನಿಂದ ಇದ್ದು ತಾನು ಹೊಟ್ಟೆ ತುಂಬ ಉಂಡು ತೇಗಿದವನು ಎಂದೂ ಪರಿಪೂರ್ಣ ಮುಸಲ್ಮಾನನಾಗಲಾರ,,ಎಂಬಂತೆ ಈ  ರಾಷ್ಟ್ರವು ಅದೆಷ್ಟೋ ಮಾನವಕುಲವನ್ನು ರಕ್ಷಿಸಿದೆ. ಇಂತಹ ಉದಾತ್ತ ಮನೋಭಾವದ ಯು ಎ ಇ ರಾಷ್ಟ್ರವು ಇಂದು ತನ್ನ ನಲವತ್ತೇಳನೇ ರಾಷ್ಟ್ರೀಯ ದಿನಾಚರಣೆಯನ್ನು ಆಚರಿಸುತ್ತಿದ್ದು ಅದರ ಭಾಗವಾಗಿ ಅನಿವಾಸಿಗಳಾದ ನಾವು ಸಹಭಾಗಿಗಳಾಗಿದ್ದು ನಮ್ಮ ಈ ರಾಷ್ಟ್ರದ ಮೇಲಿನ ಪ್ರೀತಿಯನ್ನು ಎತ್ತಿತೋರಿಸುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಯ್ಯದ್ ಶುಹೈಬ್ ತಂಘಳ್ ಪ್ರಾರ್ಥನೆಗೆ ನೇತೃತ್ವವನ್ನು ನೀಡಿ ಶುಭಹಾರೈಸಿದರು. ನಂತರ ಕೆ ಐ ಸಿ ಗ್ರಾಂಡ್ ಮೀಟ್ ಸ್ವಾಗತ ಸಮಿತಿ ಅಧ್ಯಕ್ಷರಾದ ಅಶ್ರಫ್ ಷಾ ಮಾಂತೂರ್ ರವರು ಸ್ವಾಗತಿಸಿ ಮಾತನಾಡಿ ಅನಿವಾಸಿಗಳಾದ ನಮ್ಮ ಮೇಲೆ ಈ ರಾಷ್ಟ್ರದ ತೋರುತ್ತಿರುವ ಉದಾತ್ತ ಮನೋಭಾವವನ್ನು ಸ್ಮರಿಸಿಕೊಂಡು , ಜಗತ್ತಿನ ಇತರ ರಾಷ್ಟ್ರಗಳಿಗೆ ಮಾದರಿಯಾಗಿರುವ ಯು ಎ ಇ ರಾಷ್ಟ್ರವು ಮುಂದೆಯೂ ಉತ್ತಮ ಆಡಳಿತದೊಂದಿಗೆ ಮುನ್ನಡೆಯಲಿ ಎಂದು ಶುಭ ಹಾರೈಸಿದರು.

ಕೆ ಐ ಸಿ ಯು ಎ ಇ , ಕರ್ನಾಟಕ ಕಲ್ಚರಲ್ ಸೆಂಟರ್ ಯು ಎ ಇ ಸಮಿತಿಯು ಪೋಷಕರೂ ಉದ್ಯಮಿಗಳೂ ಆದ ಮುಹಮ್ಮದ್ ಮುಸ್ತಫಾ ಎಂಸ್ಕ್ವಾರ್ ರವರು ಉದ್ಘಾಟಿಸಿ ಮಾತನಾಡಿ  ಸಮಾನತೆಗೆ ಮಾದರಿಯಾದ ಈ ಯು ಎ ಇ ರಾಷ್ಟ್ರವು ಇಂದು ಸರ್ವ ಕ್ಷೇತ್ರಗಳಲ್ಲೂ ಸಂಪತ್ತ್ ಭರಿತವಾಗಿ ಮುನ್ನಡೆಯಿತ್ತಿದೆ. ಇಲ್ಲಿನ ನೇತಾರರ ಆಡಳಿತವರ್ಗದವರ ಉದಾತ್ತ ಮನೋಭಾವವಾಗಿದೆ ನಮ್ಮಂತಹ ಅನಿವಾಸಿಗಳ ಯಶಸ್ಸು. ಅದೆಷ್ಟೋ ಕನಸ್ಸುಗಳನ್ನು ಹೊತ್ತು ಬಂದ  ನಮ್ಮೆಲ್ಲಾ ಕನಸ್ಸನ್ನು ನನಸಾಗಿಸಿದ ಈ ರಾಷ್ಟ್ರದ ಋಣ ಜನ್ಮ ಜನ್ಮಗಳಲ್ಲೂ ಮರೆಯಲಸಾದ್ಯ ಎಂದು ಸರ್ವರಿಗೂ ಯು ಎ ಇ ರಾಷ್ಟ್ರೀಯ ದಿನಾಚರಣೆಯ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಭರತ್ ಕನ್ಸ್ಟ್ರಕ್ಷನ್  ಮುಸ್ತಫಾ ಎಸ್ ಎಂ ರವರು ಕಾರ್ಯಕ್ರಮಕ್ಕೆ ಶುಭಹಾರೈಸಿ ಮಾತನಾಡಿ ಇಂದು ಜಗತ್ತಿನಲ್ಲಿ ಅಸಾಧ್ಯವಾಗಿರುವುದು ಯಾವುದು ಇಲ್ಲ ಎಂಬುದಕ್ಕೆ ಯು ಇ ರಾಷ್ಟ್ರವು ಪ್ರತ್ಯಕ್ಷ ಶಾಕ್ಷಿಯಾಗಿದೆ. ಇತರ ರಾಷ್ಟ್ರಗಳೊಂದಿಗೆ ಸ್ನೇಹ ಸಂಬಂಧವನ್ನು ವೃದ್ಧಿಸಿಕೊಂಡು ಕಷ್ಟಗಳ ಸಂಧರ್ಭಗಳಲ್ಲಿ  ಪರಸ್ಪರ ಸಹಾಯ ಹಸ್ತವನ್ನು ಚಾಚುತ್ತಾ ಬಂದಿರುವ ಈ ರಾಷ್ಟ್ರ ನಾಯಕರ ಮನಸ್ಸನ್ನು ಪ್ರಶಂಸಿಲೇ ಬೇಕು ಎಂದರು. ವರ್ಣ ಜಾತಿ ದೇಶ ಗಳೆಂಬ ಭೇಧವನ್ನು ತೋರದೆ ಸರ್ವರಿಗೂ ಸಮಾನ ಅವಕಾಶವನ್ನು ನೀಡಿದ ಈ ರಾಷ್ಟ್ರದ ನಾಯಕರನ್ನು ಅಭಿನಂದಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಡುಕಾಟಿ ಬೈಕ್ ರೇಸ್ ಸ್ಪರ್ಧೆಯಲ್ಲಿ ಚಾಂಪಿಯನ್ ನಾಸಿರ್ ಸಯದ್ ರವರನ್ನು ನೀಡಿ ಅವರನ್ನು ಸನ್ಮಾನಿಸಲಾಯಿತು.

ಯು ಎ ಇ ಪುಟಾಣಿಗಳ ಯು ಎ ಇ ರಾಷ್ಟ್ರ ಗೀತೆಯೊಂದಿಗೆ ಪ್ರಾರಂಭ ಗೊಂಡ ಕಾರ್ಯಕ್ರಮದಲ್ಲಿ ಯು ಎ ಇ ಸ್ವದೇಶಿಗಳಾದ ಮುಹಮ್ಮದ್ ಒಬೈದ್ ಸಾಲಿಮ್ ಬೆಲ್ರುವೈಸ್ದ , ನಾಸೀರ್ ಅಬ್ದುಲ್ ಅಝೀಝ್ ಅಲಿ ಅಬ್ದುಲ್ ಅಲ್ ಖಾಝಾ,  ಮುಹಮ್ಮದ್ ಸುಲ್ತಾನ್ ಸಾಲಿಮ್ ಅಲ್ ಶಂಸಿ , ಮುಹಮ್ಮದ್ ಯೂಸುಫ್ ಮುಹಮ್ಮದ್ ಅಬ್ದುಲ್ಲಾ ಬಿನ್ ಇಸ್ಮಾಯಿಲ್ , ಫಹದ್ ಅಬ್ದುಲ್  ಅಝೀಝ್ ಅಲಿ ಅಬ್ದುಲ್ ಅಲ್ ಖಾಝಾ , ಅಲಿ ಹಸ್ಸನ್ ಅಲ್ ಮತ್ರೂಶಿ , ಖಾಲಿದ್ ಅಬ್ದುಲ್  ಅಝೀಝ್ ಅಲಿ ಅಬ್ದುಲ್ ಅಲ್ ಖಾಝಾ , ಫಾರಿಸ್ ಯೂಸುಫ್ ಅಲ್ ತಾನಿ ಅಲ್ ಸುವೈದಿ , ಸವೂದ್ ಅಬ್ದುಲ್ ಅಝೀಝ್ ಅಲಿ ಅಬ್ದುಲ್ ಅಲ್ ಖಾಝಾ , ಮೊದಲಾದವಾದವರು ಭಾಗವಹಿಸಿ ಕಾರ್ಯಕ್ರಮದ ಕುರಿತು ಹರ್ಷ ವ್ಯಕ್ತ ಪಡಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಇದೇ ಸಂಧರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸ್ವದೇಶೀ ನೇತಾರರಿಗೆ ಹಾಗೂ ಮುಖ್ಯ ಅತಿಥಿಗಳಿಗೆ ಕೆ ಐ ಸಿ ಗ್ರಾಂಡ್ ಮೀಟ್ ಪಧಾಧಿಕಾರಿಗಳು ಸ್ಮರಣಿಕೆ ನೀಡಿ ಗೌರವಿಸಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಕೆ ಐ ಸಿ ಅಕಾಡೆಮಿ ಅಧ್ಯಕ್ಷರಾದ ಕೆ ಪಿ ಅಹಮ್ಮದ್ ಹಾಜಿ ಆಕರ್ಷಣ್ ರವರು ಮಾತನಾಡಿ ಅನಿವಾಸಿಗಳಾದ ತಮ್ಮಂತಹ ದೀನೀ ಸಹೋದರರ ಸೇವಾ ಮನೋಭಾವದಿಂದ ಇಂದು ತಾಯಿನಾಡಿನಾದ್ಯಂತ ಹಲವಾರು ಶಿಕ್ಷಣ ಕ್ಷೇತ್ರಗಳು , ಧಾರ್ಮಿಕ ಕ್ಷೇತ್ರಗಳು ಮುನ್ನಡೆಯುತ್ತಿದೆ. ಅಂತಹ ಶಿಕ್ಷಣ ಕೇಂದ್ರಗಳಲ್ಲಿ ಒಂದಾಗಿದೆ ಕರ್ನಾಟಕ ಇಸ್ಲಾಮಿಕ್ ಸೆಂಟರ್ , ಈ ಸಂಸ್ಥೆಯು ಇಂದು ಅಂತಾರಾಷ್ಟ್ರೀಯ ಮಾನ್ಯತೆ ಹೊಂದಿದ ವಾಫಿ ಪಠ್ಯ ಪದ್ಧತಿಯೊಂದಿಗೆ ಮುನ್ನಡೆಯುತ್ತಿದ್ದು ತಮ್ಮ ಸಹಕಾರದ ಒಂದು ಭಾಗವಾಗಿದೆ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮೂಲಖ್ಯಾ ಅತಿಥಿಗಳಾಗಿ ಉಪಸ್ಥಿತರಿದ್ದ ಸಯ್ಯದ್ ಅಸ್ಕರಲಿ ತಂಘಳ್ ಕೋಲ್ಪೆ ,ಮೊಹಿಯುದ್ದೀನ್ ಕುಟ್ಟಿ ಹಾಜಿ ದಿಬ್ಬ ,  ಅಬ್ದುಲ್ ಲತೀಫ್ ಮದರ್ ಇಂಡಿಯಾ , ಮುಹಮ್ಮದ್ ಮುಸ್ತಾಕ್ ಕದ್ರಿ , ಪ್ರೊಫೆಸ್ಸರ್ ಅಬೂಬಕ್ಕರ್ ತುಂಬೆ,  ಶಂಸುದ್ದೀನ್ ಸೂರಲ್ಪಾಡಿ , ಮಿರ್ ಮುಹಮ್ಮದ್ ಮುನವ್ವರ್ ಅಲಿ , ಡಾ . ಎಂ ಕೆ ಅಬ್ದುಲ್ ಹಾರಿಸ್ , ನಾಸೀರ್ ಅಬ್ದುಲ್ ಖಾದರ್ , ಯೂಸುಫ್ ಹಾಜಿ ಬೆರಿಕೆ , ಸಲೀಂ ಅಲ್ತಾಫ್ ಫರಂಗಿಪೇಟೆ , ಷರೀಫ್ ಕಾವು , ಅಬ್ದುಲ್ ಖಾದರ್ ಬೈತಡ್ಕ, ಅಬ್ದುಲ್ ಸಲಾಂ ಬಪ್ಪಳಿಗೆ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಕೆ ಐ ಸಿ ಅಲ್ ಕೌಸರ್ ಯೂತ್ ವಿಂಗ್ ಯು ಎ ಇ ನೇತಾರರು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿ , ಲತೀಫ್ ಕೌಡಿಚ್ಚಾರ್, ಅಶ್ರಫ್ ಪರ್ಲಡ್ಕ ರವರು ನಿರೂಪಿಸಿದರು.  ಸುಲೈಮಾನ್ ಮೌಲವಿ ಕಲ್ಲೇಗ ವಂದಿಸಿದರು.


Spread the love

Exit mobile version