ಕೇಂದ್ರದಿಂದ ಕೋವಿಡ್ ಗೈಡ್ಲೈನ್ಸ್ ಬಿಡುಗಡೆ: ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯಗಳಿಗೆ ಸೂಚನೆ
ಬೆಂಗಳೂರು: ನೆರೆಯ ರಾಜ್ಯ ಕೇರಳದಲ್ಲಿ ಕೊರೊನಾ ವೈರಸ್ ರೂಪಾಂತರಿ ಜೆಎನ್.1 ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದ ಹಿನ್ನೆಲೆ ಕೇಂದ್ರ ಸರ್ಕಾರ ಕೊವಿಡ್ ಗೈಡ್ಲೈನ್ಸ್ ಬಿಡುಗಡೆ ಮಾಡಿದ್ದು, ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಮುಂಬರುವ ಹಬ್ಬಗಳ ಮೇಲೆ ನಿಗಾ ವಹಿಸಬೇಕು. ಪ್ರತಿ ಜಿಲ್ಲೆ ಮತ್ತು ನಗರಗಳಲ್ಲಿ ಆರ್ಟಿಪಿಸಿಆರ್, ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಮಾಡಲು ಸೂಚನೆ ನೀಡಲಾಗಿದೆ.
Centre issues advisory to States in view of a recent upsurge in COVID-19 cases and detection of first case of JN.1 variant in India. States urged to maintain a state of constant vigil over the COVID situation. States to report & monitor district-wise SARI and ILI cases on a… pic.twitter.com/NpS1wAQLM8
— ANI (@ANI) December 18, 2023
ಐಎಲ್ಐ, ಸ್ಯಾರಿ ಕೇಸ್ಗಳ ಮೇಲೆ ನಿಗಾ ಇಡಲು ಚಿಕಿತ್ಸೆ ಬೇಕಾದ ಮೂಲ ಸೌಕರ್ಯ ಕ್ರೋಢೀಕರಣ. ಆರ್ಟಿಪಿಸಿಆರ್ ಪಾಸಿಟಿವ್ ಬಂದರೆ ಜೆನೆಮಿಕ್ ಸೀಕ್ವೆನ್ಸ್ಗೆ ಸ್ಯಾಂಪಲ್ ಕಳಿಸಬೇಕು. ಆ ಮೂಲಕ ಕೋವಿಡ್ ರೂಲ್ಸ್ ನಿರ್ಧಾರ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಹೊಣೆ ನೀಡಿದೆ.
ಹೆಚ್ಚಿನ ಸಂಖ್ಯೆಯ RT-PCR ಪರೀಕ್ಷೆ ಮಾಡುವುದದು ಮತ್ತು ಜೀನೋಮ್ ಅನುಕ್ರಮಕ್ಕಾಗಿ ಧನಾತ್ಮಕ ಮಾದರಿಗಳನ್ನು ಭಾರತೀಯ SARS COV-2 ಜೀನೋಮಿಕ್ಸ್ ಕನ್ಸೋರ್ಟಿಯಮ್ ಪ್ರಯೋಗಾಲಯಗಳಿಗೆ ಕಳುಹಿಸಿ, ಇದರಿಂದಾಗಿ ದೇಶದಲ್ಲಿ ಯಾವುದಾದರೂ ಹೊಸ ರೂಪಾಂತರಗಳನ್ನು ಸಮಯೋಚಿತವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತದೆ.
ಸಚಿವಾಲಯವು ನಡೆಸುತ್ತಿರುವ ಡ್ರಿಲ್ನಲ್ಲಿ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಆರೋಗ್ಯ ಸೌಲಭ್ಯಗಳ ಸಕ್ರಿಯ ಭಾಗವಹಿಸುವಿಕೆಯನ್ನು ಖಾತ್ರಿಪಡಿಸಿಕೊಳ್ಳುವುದು. ಅವುಗಳ ಸನ್ನದ್ಧತೆ ಮತ್ತು ಪ್ರತಿಕ್ರಿಯೆ ಸಾಮರ್ಥ್ಯಗಳನ್ನು ಪರಿಶೀಲಿಸುವುದು.
ಉಸಿರಾಟದ ನೈರ್ಮಲ್ಯವನ್ನು ಅನುಸರಿಸುವುದು ಸೇರಿದಂತೆ ಕೋವಿಡ್ ನಿಯಂತ್ರಿಸುವಲ್ಲಿ ನಿರಂತರ ಬೆಂಬಲದೊಂದಿಗೆ ಸಮುದಾಯದ ಜಾಗೃತಿಯನ್ನು ಉತ್ತೇಜಿಸುವುದು.