ಕೇಂದ್ರದ ಅಸಮರ್ಪಕ ಆಡಳಿತದಿಂದಾಗಿ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣ – ಅನ್ಸಾರ್ ಅಹ್ಮದ್

Spread the love

ಕೇಂದ್ರದ ಅಸಮರ್ಪಕ ಆಡಳಿತದಿಂದಾಗಿ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣ – ಅನ್ಸಾರ್ ಅಹ್ಮದ್

ಉಡುಪಿ: ಕೇಂದ್ರದ ಅಸಮರ್ಪಕ ಆಡಳಿತದಿಂದಾಗಿ ಭಾರತೀಯರು ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣ ಅನುಭವಿಸುವಂತಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರಾದ ಅನ್ಸಾರ್ ಅಹಮದ್ ರವರು ಅಭಿಪ್ರಾಯ ಪಟ್ಟಿರುತ್ತಾರೆ

ಕೊರೋನಾ ಸಂದರ್ಭದಲ್ಲಿ ಕೇಂದ್ರ ಸರಕಾರ ಸಂದರ್ಭೋಚಿತವಾಗಿ ಲಾಕ್ ಡೌನ್ ಮಾಡಿದ್ದು ಈಗ ಲಾಕ್ಡೌನ್ ನಿಂದಾಗಿ ಆಗಿರುವ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿರುವ ಲಕ್ಷಣಗಳು ಕಂಡುಬರುತ್ತಿವೆ.

ಕೊರೋನಾ ಆರಂಭವಾದ ನಂತರ ಇಡೀ ದೇಶದ ವ್ಯಾಪಾರ-ವಹಿವಾಟು ಸೇರಿದಂತೆ ಸಂಪೂರ್ಣ ಜನಜೀವನ ಸ್ತಬ್ಧವಾಗಿತ್ತು. ಮನುಷ್ಯ ಜೀವಿಸಲು ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಇಡೀ ದೇಶದಲ್ಲಿ ನಿರ್ಮಾಣವಾಗಿತ್ತು.

ಸಾಲ ಮಾಡಿಕೊಂಡಿರುವವರು ತಿಂಗಳ ಕಂತು ಕಟ್ಟಲು ಪರದಾಡುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೆಲವು ತಿಂಗಳುಗಳ ವಿನಾಯತಿಯನ್ನು ಕೊಟ್ಟಿತ್ತು. ಕೊಟ್ಟಿದ್ದ ವಿನಾಯಿತಿ ಆಗಸ್ಟ್ ತಿಂಗಳ ಕೊನೆಯಲ್ಲಿ ಮುಗಿಯುತ್ತದೆ.
ಬಾಕಿ ಇರಿಸಿಕೊಂಡಿರುವ ಸಾಲಗಾರರು ಸೆಪ್ಟೆಂಬರ್ ತಿಂಗಳ ನಂತರ ಸುಸ್ತಿದಾರರ ಪಟ್ಟಿ ಸೇರುವ ಲಕ್ಷಣ ಕಾಣುತ್ತಿದೆ. ಹೀಗಾದರೆ ಸಾಲಗಾರರು ಇನ್ನೊಂದು ಸಂಕಷ್ಟವನ್ನು ಎದುರಿಸಬೇಕಾಗುತ್ತದೆ.

ಕೇಂದ್ರ ಸರಕಾರವು ಇದಕ್ಕೆ ಸೂಕ್ತ ಪರಿಹಾರವನ್ನು ಒದಗಿಸಬೇಕು. ಇಲ್ಲದಿದ್ದಲ್ಲಿ ಜನಸಾಮಾನ್ಯರು ಕೊರೋನಾ ಸಮಯದಲ್ಲಿ ಅನುಭವಿಸಿದ ಸಮಸ್ಯೆಕ್ಕಿಂತಲೂ 100 ಪಟ್ಟು ಹೆಚ್ಚು ಪರಿಣಾಮವನ್ನು ಎದುರಿಸಬೇಕಾಗುವುದು ನಿಶ್ಚಿತ

ಜನರು ಅಘೋಷಿತ ತುರ್ತು ಪರಿಸ್ಥಿತಿ ಯಂತಹ ವಾತಾವರಣಕ್ಕೆ ಬಿದ್ದು ಸಿಡಿದೇಳುವ ಮುನ್ನವೇ ಕೇಂದ್ರ ಸರ್ಕಾರ ಇದಕ್ಕೊಂದು ಪರಿಹಾರ ಹುಡುಕಿ ಕೊಡುವುದು ಸೂಕ್ತ ಎಂದು ಸಾಮಾಜಿಕ ಕಾರ್ಯಕರ್ತರಾದ ಅನ್ಸಾರ್ ಅಹಮದ್ ರವರು ಅಭಿಪ್ರಾಯ ಪಟ್ಟಿರುತ್ತಾರೆ.


Spread the love