ಕೇಂದ್ರದ ಬೆಲೆ ಏರಿಕೆ ವಿರುದ್ದ ಯುವ ಕಾಂಗ್ರೆಸ್ ಪ್ರತಿಭಟನೆ
ಮಂಗಳೂರು: ಕೇಂದ್ರ ಸರಕಾರದ ಬೆಲೆ ಏರಿಕೆಯನ್ನು ವಿರೋಧೀಸಿ ದಕ ಜಿಲ್ಲಾ ಯುವ ಕಾಂಗ್ರೆಸ್ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಕೇಂದ್ರ ಸರಕಾರ ಜನಪರ ಆಡಳಿತವನ್ನು ನೀಡುವುದಾಗಿ ಹೇಳಿ ದೇಶದ ಜನತೆ ದುರಾಡಳಿತವನ್ನು ನೀಡುತ್ತಿದೆ. ಅಗತ್ಯ ವಸ್ತುಗಳ ಬೆಲೆ ದಿನದಿಂದ ಏರಿಸುತ್ತಿದ್ದು, ಬೆಲೆ ಏರಿಕೆಯನ್ನು ತಡೆಯಲು ವಿಫಲವಾಗಿದೆ. ಅಭಿವೃದ್ಧಿಯ ವಿಷಯದಲ್ಲಿ ಬಿಜೆಪಿ ಸದಾ ರಾಜಕೀಯ ಮಾಡುತ್ತಿದ್ದು ಎನ್ ಡಿ ಎ ಮಿತ್ರ ಪಕ್ಷಗಳು ಆಡಳಿತದಲ್ಲಿಲ್ಲದ ರಾಜ್ಯಗಳಿಗೆ ನೀಡುವ ಅನುದಾನ ವಿತರಣೆಯಲ್ಲಿ ತಾರತಮ್ಯ ಎಸಗಲಾಗುತ್ತಿದೆ. ಜನರಿಕ್ ಔಷದಕ್ಕೆ ಬೆಂಬಲಿಸಲು ಹೇಳುತ್ತಿರುವ ದೇಶದ ಪ್ರಧಾನಿ ಆ ಔಷದವನ್ನು ಉತ್ಪನ್ನ ಮಾಡಲು ತನಗೆ ಬೇಕಾದ ಕಂಪೆನಿಗೆ ಅವಕಾಶ ನೀಡಿರುವುದು ಒಂದು ದೊಡ್ಡ ಷಡ್ಯಂತ್ರವಾಗಿದೆ ಎಂದರು.
ಮನಾಪ ಮೇಯರ್ ಕವಿತಾ ಸನೀಲ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರವೂಫ್ ಬಜಾಲ್, ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವ, ಪ್ರೇಮಚಂದ್ರ, ಜಿಪಂ ಸದಸ್ಯ ಯು ಪಿ ಇಬ್ರಾಹಿಂ ತಾಪಂ ಸದಸ್ಯ ಬಶೀರ್ ಜೋಕಟ್ಟೆ, ಸಚಿನ್ ಅಡಪ, ಯುವ ಕಾಂಗ್ರೆಸ್ ನಾಯಕರಾದ ಸುಹೈಲ್ ಕಂದಕ್, ಧನಂಜಯ, ಹಾಗೂ ಇತರರು ಉಪಸ್ಥಿತರಿದ್ದರು.