ಕೇಂದ್ರ, ರಾಜ್ಯ ಸರಕಾರದ ಗೈಡ್ ಲೈನ್ ಪ್ರಕಾರ ಹೊರ ರಾಜ್ಯದವರನ್ನು ಜಿಲ್ಲೆಗೆ ಕರೆಸಿಕೊಳ್ಳಲಾಗುತ್ತಿಲ್ಲ, ಕ್ಷಮೆಯಿರಲಿ – ಜಿಲ್ಲಾಧಿಕಾರಿ ಜಿ ಜಗದೀಶ್

Spread the love

ಕೇಂದ್ರ, ರಾಜ್ಯ ಸರಕಾರದ ಗೈಡ್ ಲೈನ್ ಪ್ರಕಾರ ಹೊರ ರಾಜ್ಯದವರನ್ನು ಜಿಲ್ಲೆಗೆ ಕರೆಸಿಕೊಳ್ಳಲಾಗುತ್ತಿಲ್ಲ, ಕ್ಷಮೆಯಿರಲಿ – ಜಿಲ್ಲಾಧಿಕಾರಿ ಜಿ ಜಗದೀಶ್

ಉಡುಪಿ: ಕೇಂದ್ರ, ರಾಜ್ಯ ಸರ್ಕಾರದ ಆದೇಶದಂತೆ ಹೊರ ರಾಜ್ಯದವರನ್ನು ಜಿಲ್ಲೆಗೆ ಕರೆಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ದಯವಿಟ್ಟು  ಕ್ಷಮೆಯಿರಲಿ ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ವೀಡಿಯೊ ಸಂದೇಶದ ಮೂಲಕ ಮನವಿ ಮಾಡಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರಕಾರ ಹೊಸ ನಿಯಮವಳಿಗಳನ್ನು ರೂಪಿಸಿದ್ದು ಈ ಆದೇಶ  ಪ್ರಕಾರ ಯಾರನ್ನೂ ಕೂಡ ಜಿಲ್ಲೆಯೊಳಗೆ ಕರೆಸಿಕೊಳ್ಳುವಂತೆ ಇಲ್ಲ. ತಾವುಗಳು ಇರುವಲ್ಲೇ ಆರಾಮಾಗಿ ಉಳಿಯಬೇಕು ಎಂದು ಸರ್ಕಾರ ಆದೇಶಿಸಿದೆ ಆದ್ದರಿಂದ ಈ ಹಂತದಲ್ಲಿ ನಿಮ್ಮನ್ನು ಜಿಲ್ಲೆಗೆ ಕರೆಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯ ಸಂಸದರು ಶಾಸಕರು ಏನಾದರೂ ಮಾಡಿ ಕರೆಸಿಕೊಳ್ಳಿ ಎಂದು ಕೇಳುತ್ತಿದ್ದಾರೆ. ಜನಪ್ರತಿನಿಧಿಗಳಿಗೂ ಸಾಕಷ್ಟು ಒತ್ತಡ ಇದೆ ನಿಜ ಆದರೆ ಸರಕಾರದ ಆದೇಶಕ್ಕೆ ವಿರುದ್ಧವಾಗಿ ನಿಮ್ಮನ್ನು ಕರೆಸಿಕೊಳ್ಳುವಂತೆ ಇಲ್ಲ ದಯವಿಟ್ಟು ಉಡುಪಿ ಜಿಲ್ಲಾಡಳಿತವನ್ನು ಕ್ಷಮಿಸಿ ಎಂದು ಅವರು ಮನವಿ ಮಾಡಿದ್ದಾರೆ.

ಲಾಕ್ ಡೌನ್ ಆದೇಶ ಮುಗಿದನಂತರ ತಾವೆಲ್ಲರೂ ನಮ್ಮ ಜಿಲ್ಲೆಗೆ ಬರಬಹುದು ಈ ಹಂತದಲ್ಲಿ ಜಿಲ್ಲೆಗೆ ಬಂದರೆ ತಮಗೂ ತೊಂದರೆ ಇಲ್ಲಿನ ವಾಸಿಗಳಿಗೆ ತೊಂದರೆ ಆಗಲಿದೆ.ನಿಮಗೆ ತೊಂದರೆ ಮಾಡುವ ಉದ್ದೇಶ ನನಗಿಲ್ಲ ಆದ್ದರಿಂದ ದಯವಿಟ್ಟು ಈ ಸನ್ನಿವೇಶವನ್ನು ಅರ್ಥಮಾಡಿಕೊಂಡು ನೀವು ಇರುವಲ್ಲಿಯೇ ಆರಾಮಾಗಿರಿ ಎಂದು ಅವರು ಮನವಿ ಮಾಡಿದ್ದಾರೆ.


Spread the love