Home Mangalorean News Kannada News ಕೇಂದ್ರ ಶಿಪ್ಪಿಂಗ್ ಮಂತ್ರಾಲಯದಿಂದ ದಕ ಜಿಲ್ಲೆಗೆ ರೂ. 2೦೦೦ ಕೋಟಿಯ ಯೋಜನೆ: ನಳಿನ್ ಕುಮಾರ್ ಕಟೀಲ್

ಕೇಂದ್ರ ಶಿಪ್ಪಿಂಗ್ ಮಂತ್ರಾಲಯದಿಂದ ದಕ ಜಿಲ್ಲೆಗೆ ರೂ. 2೦೦೦ ಕೋಟಿಯ ಯೋಜನೆ: ನಳಿನ್ ಕುಮಾರ್ ಕಟೀಲ್

Spread the love

ಕೇಂದ್ರ ಶಿಪ್ಪಿಂಗ್ ಮಂತ್ರಾಲಯದಿಂದ ದಕ ಜಿಲ್ಲೆಗೆ ರೂ. 2೦೦೦ ಕೋಟಿಯ ಯೋಜನೆ: ನಳಿನ್ ಕುಮಾರ್ ಕಟೀಲ್

ಮಂಗಳೂರು: ಕರಾವಳಿ ಸಮುದಾಯವನ್ನು ಆತ್ಮನಿರ್ಭರ್ ಗೆ ಒಳಪಡಿಸುವ ನಿಟ್ಟಿನಲ್ಲಿ ದ.ಕ ಜಿಲ್ಲೆಯ 23 ವಿವಿಧ ಯೋಜನೆಗಳಿಗೆ ಕೇಂದ್ರ ಶಿಪ್ಪಿಂಗ್ ಮಂತ್ರಾಲಯದಿಂದ ರೂ. 2೦೦೦ ಕೋಟಿಯ ಯೋಜನೆ: ನಳಿನ್ ಕುಮಾರ್ ಕಟೀಲ್

ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಸಮುದಾಯವನ್ನು ಆತ್ಮನಿರ್ಭರ್ ಗೆ ಒಳಪಡಿಸುವ ನಿಟ್ಟಿನಲ್ಲಿ ಅಂದಾಜು ರೂ. 2000 ಕೋಟಿ ವೆಚ್ಚದಲ್ಲಿ ಕೇಂದ್ರ ಶಿಪ್ಪಿಂಗ್ ಮಂತ್ರಾಲಯದ ವತಿಯಿಂದ 23 ವಿವಿಧ ಯೋಜನೆಗಳು ಅನುಷ್ಠಾನಗೊಳ್ಳಲಿವೆ.

ಇವುಗಳಲ್ಲಿ ಮುಖ್ಯವಾಗಿ ನವ ಮಂಗಳೂರು ಬಂದರಿನಲ್ಲಿ ಗ್ಯಾಸ್ ಟರ್ಮಿನಲ್, ಎಲ್ ಎನ್ ಜಿ ಟೆರ್ಮಿನಲ್, ಪೆಟ್ರೋಕೆಮಿಕಲ್ಸ್ ಕಾಂಪ್ಲೆಕ್ಸ್, ಆಹಾರ ಧಾನ್ಯ ಗೋದಾಮು, ಸೀಫುಡ್ ಪಾರ್ಕ್, ವಾಟರ್ ಸ್ಪೋರ್ಟ್ ಜಟ್ಟಿಗಳ ನಿರ್ಮಾಣ, ಬಂದರು ಆಸ್ಪತ್ರೆ ನಿರ್ಮಾಣ ಹಾಗೂ ವಿವಿಧ ಬೀಚ್ ಗಳ ಅಭಿವೃದ್ಧಿ ಮುಂತಾದ ವಿವಿಧ ಯೋಜನೆಗಳು ಸೇರಿವೆ.

ಕೇಂದ್ರ ಶಿಪ್ಪಿಂಗ್ ರಾಜ್ಯ ಸಚಿವರಾದ   ಮಾನ್ ಸುಖ್ ಮಾಂಡವೀಯ ಇವರು ಇಂದು ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಕರಾವಳಿ ಜಿಲ್ಲೆಗಳ ಸಂಸದರೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಈ ಮಾಹಿತಿಯನ್ನು ನೀಡಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಗೆ ವಿವಿಧ ಯೋಜನೆಗಳನ್ನು ನೀಡಿರುವ ನೆಚ್ಚಿನ ಪ್ರಧಾನಿ   ನರೇದ್ರ ಮೋದಿ, ಕೇಂದ್ರ ಸಚಿವರಾದ   ನಿತಿನ್ ಗಡ್ಕರಿ ಹಾಗೂ   ಮಾನ್ ಸುಖ್ ಮಾಂಡವೀಯ ಇವರಿಗೆ ದಕ್ಷಿಣ ಕನ್ನಡ ಸಂಸದರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ  ನಳಿನ್ ಕುಮಾರ್ ಕಟೀಲ್ ಇವರು ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ.


Spread the love

Exit mobile version