Home Mangalorean News Kannada News ಕೇಂದ್ರ ಸರಕಾರದ ಎನ್.ಸಿ.ಐ.ಬಿ ಲಾಂಛನ ಉಪಯೋಗಿಸಿ ದರೋಡೆಗೆ ಸಂಚು – 8 ಮಂದಿ ಬಂಧನ

ಕೇಂದ್ರ ಸರಕಾರದ ಎನ್.ಸಿ.ಐ.ಬಿ ಲಾಂಛನ ಉಪಯೋಗಿಸಿ ದರೋಡೆಗೆ ಸಂಚು – 8 ಮಂದಿ ಬಂಧನ

Spread the love

ಕೇಂದ್ರ ಸರಕಾರದ ಎನ್.ಸಿ.ಐ.ಬಿ ಲಾಂಛನ ಉಪಯೋಗಿಸಿ ದರೋಡೆಗೆ ಸಂಚು – 8 ಮಂದಿ ಬಂಧನ

ಮಂಗಳೂರು: ಕೇಂದ್ರ ಸರಕಾರದ ಎನ್.ಸಿ.ಐ.ಬಿ ಎಂಬ ಲಾಂಛನ ಉಪಯೋಗಿಸಿ ದರೋಡೆಗೆ ಸಂಚು ನಡೆಸುತ್ತಿದ್ದ ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ ಆರೋಪಿಗಳಿಂದ ಸುಮಾರು 20 ಲಕ್ಷ ಮೌಲ್ಯದ 2 ಕಾರು, 1 ಪಿಸ್ತೂಲ್, 1 ರಿವಾಲ್ವರ್ ಮತ್ತು 8 ಜೀವಂತ ಗುಂಡುಗಳನ್ನು ಹಾಗೂ ಅವರಲ್ಲಿದ್ದ 10 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಕಮೀಷನರ್ ಡಾ ಹರ್ಷ ತಿಳಿಸಿದರು.

ಬಂಧಿತರನ್ನು ಸ್ಯಾಮ್ ಪೀಟರ್ ಕೇರಳ, ಮೊಹಿದ್ದಿನ್ ಮಂಗಳೂರು, ಅಬ್ದುಲ್ ಲತೀಫ್ ಮಂಗಳೂರು, ಟಿಕೆ ಬೋಪಣ್ಣ ಮಡಿಕೇರಿ, ಚಿನ್ನಪ್ಪ ವಿರಾಜಪೇಟೆ, ಮದನ್ ಬೆಂಗಳೂರು ದಕ್ಷಿಣ, ಸುನೀಲ್ ರಾಜು ಬೆಂಗಳೂರು, ಕೋದಂಡರಾಮ ಉತ್ತರ ಹಳ್ಳಿ ಬೆಂಗಳೂರು ಎಂದು ಗುರುತಿಸಲಾಗಿದೆ.

ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ನಗರ ಪೋಲಿಸ್ ಕಮೀಷನರ್ ಹರ್ಷ, ಶುಕ್ರವಾರ ಮಂಗಳೂರು ನಗರದ ಪಂಪ್ ವೆಲ್ ಬಳಿ ದರೋಡೆ ಮಾಡುವ ಉದ್ದೇಶದಿಂದ ಕಾರಿನಲ್ಲಿ ಕುಳಿತು ಹೊಂಚು ಹಾಕುತ್ತಿದ್ದಾರೆಂದ ಮೇಲಾಧಿಕಾರಿಗಳಿಗೆ ಮಾಹಿತಿ ಬಂದಿದ್ದು ಅದರಂತೆ ಕದ್ರಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದಾಗ ನಂಬರ್ ಪ್ಲೇಟ್ ಇಲ್ಲದ ಪೂರ್ಣ ಕಪ್ಪು ಟಿಂಟ್ ಇದ್ದ ಮಹೀಂದ್ರಾ ಟಿಯುವಿ -300 ಕಾರಿನಲ್ಲಿ ಕುಳಿತಿದ್ದ 5 ಜನರು ಪರಾರಿಯಾಗಲು ಪ್ರಯತ್ನ ನಡೆಸಿದ ವೇಳೆ ಪೊಲೀಸರು ಅಡ್ಡ ಹಾಕಿ ತಡೆದಿದ್ದು ನಂತರ ಪರೀಶಿಲಿಸಿದಾಗ ಕಾರಿನ ಮುಂಬಾಗದಲ್ಲಿ ಎನ್ ಸಿ ಐಬಿ ನಿರ್ದೇಶಕರು ಎಂದು ಬರೆದಿದ್ದು, ಕಾರಿನಲ್ಲಿ ಚಾಲಕ ಸೇರಿ ಸಫಾರಿ ಡ್ರೆಸ್ ಹಾಕಿದವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ನಮ್ಮ ಜೊತೆ ಸಾಯಿ ಆರ್ಯ ಲಾಡ್ಜ್ ನಲ್ಲಿ ನಮ್ಮ ಸರ್ ಸ್ಯಾಮ್ ಪೀಟರ್ ಇರುವುದಾಗಿ ತಿಳಿಸಿ ಮತ್ತು ಇತರ ಇಬ್ಬರು ಇದ್ದು ಅವರ ಸೂಚನೆ ಮೇರೆಗೆ ಓರ್ವ ದರೋಡೆದ ನಡೆಸಲು ಹೊಂಚು ಹಾಕುತ್ತಿದ್ದುದ್ದಾಗಿ ತಿಳಿಸಿದ್ದಾರೆ. ಕಾರಿನಲ್ಲಿದ್ದ ಬೋಪಣ್ಣ ಎಂಬಾತನ ಕೈಯಲ್ಲಿ 22 ರಿವಾಲ್ವರ್ ಮತ್ತು ಅದರಲ್ಲಿ 8 ಜೀವಂತ ಗುಂಡುಗಳಿದ್ದು, ನಂತ ಸಾಯಿ ಲಾಡ್ಜ್ ಗೆ ಬಂದು ರೂಮ್ ನಲ್ಲಿ ನೋಡಿದಾಗಿ 3 ಜನರು ಇದ್ದು ಅವರಲ್ಲಿ ಮೊಹಿದ್ದಿನ್ ಮಂಗಳೂರು, ಅಬ್ದುಲ್ ಲತೀಫ್ ಮಂಗಳೂರು ಮತ್ತೋರ್ವ ಸಾಮ್ ಪೀಟರ್ ಎಂದು ತಿಳಿಸಿ ತಾನು ಕೇಂದ್ರ ಸರಕಾರದ ಎನ್ ಸಿ ಐ ಬಿ ನಿರ್ದೇಶಕ ಎಂದು ತಿಳಿಸಿ ನಕಲಿ ಐಡಿ ಕಾರ್ಡನ್ನು ಮತ್ತು ವಿಸಿಟಿಂಗ್ ಕಾರ್ಡನ್ನು ಹಾಗೂ ಆತನಲ್ಲಿದ್ದ 4.5 ಎಮ್ ಎಮ್ ಪಿಸ್ತೂಲ್, ಲ್ಯಾಪ್ ಟಾಪ್, ವಾಯಿಸ್ ರೆಕಾರ್ಡರ್ ಹಾಗೂ ಇತರ ದಾಖಲೆ ಪತ್ರಗಳನ್ನು ವಶಪಡಿಸಕೊಳ್ಳಲಾಗಿದೆ ಎಂದರು.

ಸದ್ರಿ ಕಾರ್ಯಾಚರಣೆಯನ್ನು ಪೊಲೀಸ್ ಆಯುಕ್ತಾರಾದ ಡಾ ಹರ್ಷ, ಉಪ ಪೊಲೀಸ್ ಆಯುಕ್ತರಾದ ಅರುಣಾಂಶುಗಿರಿ ಮತ್ತು ಲಕ್ಷ್ಮೀ ಗಣೇಶ್ ಅವರ ಸಹಾಯಕ ಆಯುಕ್ತರಾದ ಭಾಸ್ಕರ್ ಒಕ್ಕಲಿಗ ಇವರ ಮಾರ್ಗದರ್ಶನದಲ್ಲಿ ಕದ್ರಿ ಠಾಣೆಯ ಪೊಲೀಸ್ ನಿರೀಕ್ಷಕರಾದ ಶಾಂತರಾಮ್, ಪಿಎಸ್ ಐ ಮಾರುತಿ ಎಸ್ ವಿ ಮತ್ತು ಸಿಬಂದಿಯವರಾದ ಧನರಾಜ್, ಪ್ರಶಾಂತ್, ಲೋಕೇಶ್, ನಾಗರಾಜ್, ಮೋಹನ್ ಅವರು ಭಾಗವಹಿಸಿದ್ದಾರೆ.


Spread the love

Exit mobile version