ಕೇಂದ್ರ ಸರ್ಕಾರದಿಂದ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ 2 ರೂ ಹೆಚ್ಚಳ
ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸಲ್ ಮೇಲಿನ ಅಬಕಾರಿ ಸುಂಕವನ್ನು ಎರಡು ರೂಗಳಷ್ಟು ಸೋಮವಾರ ಹೆಚ್ಚಿಸಿದೆ.
ಪೆಟ್ರೋಲ್ ಮೇಲೆ ಅಬಕಾರಿ ಸುಂಕ ಒಂದು ಲೀಟರ್ಗೆ 11 ರೂ ಇದ್ದದ್ದು 13 ರೂಗೆ ಏರಿಕೆ ಆಗುತ್ತಿದೆ. ಡೀಸಲ್ ಮೇಲಿನ ಅಬಕಾರಿ ಸುಂಕವು ಪ್ರತೀ ಲೀಟರ್ಗೆ 10 ರೂಗೆ ಏರಿಕೆ ಆಗುತ್ತಿದೆ. ಆದರೆ, ಪೆಟ್ರೋಲ್ ಮತ್ತು ಡೀಸಲ್ನ ರೀಟೇಲ್ ಬೆಲೆಗಳಲ್ಲಿ ಹೆಚ್ಚಳ ಆಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ, ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಇಳಿಕೆ. ಅಬಕಾರಿ ಸುಂಕ ಏರಿಕೆಯು ಮಂಗಳವಾರದಿಂದ (ಏಪ್ರಿಲ್ 8) ಜಾರಿಗೆ ಬರುತ್ತದೆ.