ಕೇರಳ: ಲ್ಯಾಂಡಿಂಗ್ ವೇಳೆ ರನ್ ವೇಯಿಂದ ಜಾರಿದ ದುಬೈ-ಕೋಯಿಕ್ಕೋಡ್ ಏರ್ ಇಂಡಿಯಾ ವಿಮಾನ
ಕೇರಳ: ದುಬೈ-ಕೋಯಿಕ್ಕೋಡ್ ನಡುವಿನ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ (ಐಎಕ್ಸ್-1344) ಕೇರಳದ ಕೋಯಿಕ್ಕೋಡ್‌ನ ಕಾರಿಪುರ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿಸುವ ವೇಳೆ ಅವಘಡಕ್ಕೀಡಾಗಿದೆ.
7.45ರಲ್ಲಿ ಅಪಘಾತ ಸಂಭವಿಸಿದೆ ಎಂದು ಕೊಂಡೋಳ್ಳಿ ಪೊಲೀಸರು ತಿಳಿಸಿದ್ದಾರೆ. ವಿಮಾನದಲ್ಲಿ 184 ಪ್ರಯಾಣಿಕರು, ಸಿಬ್ಬಂದಿ ಇದ್ದರು ಎಂದು ® ಹೇಳಲಾಗಿದೆ. ಈ ಪೈಕಿ ಇಬ್ಬರು ಪ್ರಯಾಣಿಕರು, ಪೈಲಟ್ ಮೃತಪಟ್ಟಿರುವುದಾಗಿ ಆರಂಭಕ್ತಿಕ ಮಾಹಿತಿ ಲಭ್ಯವಾಗಿದೆ.
ಮೃತರಾದ ಪೈಲಟ್ ಹೆಸರು ದೀಪಕ್ ವಿ ಸಾಠ ಎಂದು ತಿಳಿದು ಬಂದಿದೆ. ಅವರು ವಿಮಾನ ಹಾರಾಟದಲ್ಲಿ ಅನುಭವಿಯಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ವಿಮಾನ ಎರಡು ತುಂಡಾಗಿದೆ: ಡಿಜಿಸಿಎ ಹೇಳಿಕೆ
ದುಬೈನಿಂದ ಕೋಯಿಕ್ಕೋಡ್‌ಗೆ ಮರಳುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ(ಎಎಕ್ಸ್‌ಬಿ 1344, ಬಿ 737) 10ನೇ ರನ್‌ವೇಗೆ ಇಳಿದ ನಂತರ ಚಲಿಸುವುದನ್ನು ಮುಂದುವರೆಸಿದೆ. ರೇನ್‌ವೇ ಅಂತ್ಯಕ್ಕೆ ಬಂದಾಗ ಭಾರಿ ಮಳೆಯ ಕಾರಣ ಕಣಿವೆಯಲ್ಲಿ ಕೆಳಗೆ ಬಿದ್ದು ಎರಡು ತುಂಡುಗಳಾಗಿ ಒಡೆದಿದೆ ಎಂದು ಡಿಜಿಸಿಎ ತಿಳಿಸಿದೆ.
ಮಾಹಿತಿ ಪಡೆದ ಪ್ರಧಾನಿ ಮೋದಿ
ದುರ್ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಂದ ಮಾಹಿತಿ ಪಡೆದಿದ್ದಾರೆ. ಕೋಯಿಕ್ಕೋಡ್ ಮತ್ತು ಮಲಪುರಂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ತೆರಳಿದ್ದು, ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ ಎಂದು ಪಿಣರಾಯಿ ವಿಜಯನ್ ಅವರು ಪ್ರಧಾನಿ ಮೋದಿ ಅವರಿಗೆ ತಿಳಿಸಿದ್ದಾರೆ. ಅಲ್ಲದೆ, ರಕ್ಷಣಾ ಕಾರ್ಯಾಚರಣೆ ಅಗತ್ಯವಿರುವ ಎಲ್ಲ ಸೇವೆಗಳನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ. ಸಚಿವ ಎ.ಸಿ ಮೊಯಿದ್ದಿನ್ ಅವರು ರಕ್ಷಣ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ ಎಂದು ಅವರು ಹೇಳಿದ್ದಾರೆ.