Home Mangalorean News Kannada News ಕೇರಳ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ರಿಯಾದ್ – ಈದ್ ಕುಟುಂಬ ಸಂಗಮ

ಕೇರಳ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ರಿಯಾದ್ – ಈದ್ ಕುಟುಂಬ ಸಂಗಮ

Spread the love

ಕೇರಳ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ರಿಯಾದ್ಈದ್ ಕುಟುಂಬ ಸಂಗಮ 

ರಿಯಾದ್: ಸಮಸ್ತ ಕೇರಳ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಕರ್ನಾಟಕ ಘಟಕ ಇದರ ಸೌದಿ ಅರೇಬಿಯಾ – ರಿಯಾದ್ ಸಮಿತಿಯ ವತಿಯಿಂದ ಈದ್ ಅಲ್-ಅಧ ಪ್ರಯುಕ್ತ ಕುಟುಂಬ ಸಂಗಮ ಕಾರ್ಯಕ್ರಮ ರಿಯಾದಿನ ಬಥದಲ್ಲಿರುವ ಸಫಾ ಮಕ್ಕಾ ಆಡಿಟೋರಿಯಂನಲ್ಲಿ ನಡೆಯಿತು.

ಎಸ್ ವೈ ಎಸ್ ನ ಕಾರ್ಯದರ್ಶಿ ಬಹು. ಅಲಿ ಫೈಝಿ ದುಹಗೈದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಹು. ಬಷೀರ್ ಫೈಝಿಯವರು, “ಪರಿಶುದ್ಧ ಇಸ್ಲಾಮ್ ಕಲ್ಪಿಸಿದ ಏಕದೈವ ವಿಶ್ವಾಸ ಮತ್ತು ಸಹೋದರತ್ವದ ಮಹತ್ವವನ್ನು ವಿವರಿಸಿ, ಕುಟುಂಬ ಸಂಗಮಗಳು ಧರ್ಮ ಮತ್ತು ಅದರ ಆಚರಣೆಗಳನ್ನು ಅರಿತುಕೊಳ್ಳುವ ವೇದಿಕೆಗಳಾಗಬೇಕು” ಎಂದರು,

ಮುಖ್ಯ ಪ್ರಭಾಷಣಗಾರ ಬಹು: ರಫೀಕ್ ಫೈಝಿಯವರು ಮಾತನಾಡಿ, “ಆಧುನಿಕ ಜೀವನದಲ್ಲಿ ಕುಟುಂಬ ಸಂಬಂಧಗಳು ಸಂದಿಗ್ದ ಅವಸ್ಥೆಯಲ್ಲಿದ್ದು, ಪ್ರವಾದಿವರ್ಯರು ಪ್ರತಿಪಾದಿಸಿದ ಪೋಷಕರನ್ನು ಗೌರವಿಸುವ ಮಹತ್ತರ ಪುಣ್ಯದಾಯಕ ಜವಾಬ್ದಾರಿಯನ್ನು ಯುವ ಪೀಳಿಗೆ ಮೈಗೂಡಿಕೊಳ್ಳಬೇಕು. ವ್ಯವಹರಿಕ ಲಾಭ ನಷ್ಟಗಳ ಲೆಕ್ಕಾಚಾರಕ್ಕಿಂತ ಮಾನವ ಸಂಬಂಧಗಳಿಗೆ ಮಹತ್ವ ಕಲ್ಪಿಸಬೇಕಾಗಿದೆ. ಆದರ್ಶತೆಯ ಪರಿಶುದ್ದತೆಯತ್ತ ನಮ್ಮ ಪಯಣ ಅತ್ಯವಶ್ಯಕ” ಎಂದರು.

ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣಗೈದ SKSSF ಕರ್ನಾಟಕ ರಿಯಾದ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಷೀರ್ ಅರಂಬೂರುರವರು ಸಮಿತಿಯ ರೂಪುರೇಷೆ, ಉದ್ದೇಶ, ಯೋಜನೆಗಳನ್ನು ವಿವರಿಸಿದರು. ಸಮಿತಿಯ ಉಪಾಧ್ಯಕ್ಷರಾದ ಹಸನ್ ಅರ್ಕಾನ ಅಧ್ಯಕ್ಷತೆ ವಹಿಸಿದ್ದರು. ದಾರುನ್ನೂರ್ ಕಾಶಿಪಟ್ನ ರಿಯಾದ್ ಸಮಿತಿಯ ಅಧ್ಯಕ್ಷರಾದ ಷರೀಫ್ ತೋಡಾರ್, ಶಂಸುಲ್ ಉಲೇಮಾ ಇಸ್ಲಾಮಿಕ್ ಅಕೆಡಮಿ ವಾದಿತೈಬಾ ಕಿನ್ಯ ರಿಯಾದ್ ಸಮಿತಿ ಅಧ್ಯಕ್ಷರಾದ ಅನ್ವಾರ್ ತುಂಬೆ, ಪಯ್ಯಕ್ಕಿ ಉಸ್ತಾದ್ ಇಸ್ಲಾಮಿಕ್ ಅಕೆಡಮಿ – ರಿಯಾದ್ ಸಮಿತಿಯ ಕಾರ್ಯದರ್ಶಿ ಸನೀರ್ ಪೈವಳಿಕೆ, ಇಬ್ರಾಹಿಂ ಮಂಜೇಶ್ವರ ಶುಭಸಂಷಣೆಗೈದರು.

ಬರ್ಮಾದಲ್ಲಿ ರೋಹಿಂಗ್ಯಾ ಮುಸ್ಲಿಮರ ಮೇಲೆ ನಡೆಯುತ್ತಿರುವ ಹತ್ಯೆಯನ್ನು ಸಭೆಯಲ್ಲಿ ಖಂಡಿಸಲಾಯಿತು ಮತ್ತು ವಿಶ್ವಸಂಸ್ಥೆಯು ತಕ್ಷಣ ಮಧ್ಯಪ್ರವೇಶಿಸಿ ಬರ್ಮಾ ಸರ್ಕಾರ ಪ್ರಾಯೋಜಿತ ನರಹತ್ಯೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಇಸ್ಲಾಮಿಕ್ ಕಲಾ ಕಾರ್ಯಕ್ರಮ ನಡೆಯಿತು. ಸಮಿತಿಯ ಕೋಶಾಧಿಕಾರಿ ಶಾಫಿ ತೋಡಾರ್ ಕಾರ್ಯಕ್ರಮ ಸಂಯೋಜಿಸಿ, ಧನ್ಯವಾದ ಸಮರ್ಪಿಸಿದರು.

 


Spread the love

Exit mobile version