ಕೊಂಕಣಿ ಅಕಾಡೆಮಿಯಿಂದ ಫೆಬ್ರವರಿಯಲ್ಲಿ ಅಂತರಾಷ್ಟ್ರೀಯ ಬಹುಬಾಷಾ ಸಮ್ಮೇಳನ ; ಆರ್ ಪಿ ನಾಯ್ಕ

Spread the love

ಕೊಂಕಣಿ ಅಕಾಡೆಮಿಯಿಂದ ಫೆಬ್ರವರಿಯಲ್ಲಿ ಅಂತರಾಷ್ಟ್ರೀಯ ಬಹುಬಾಷಾ ಸಮ್ಮೇಳನ ; ಆರ್ ಪಿ ನಾಯ್ಕ

ಉಡುಪಿ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಆಶ್ರಯದಲ್ಲಿ ಫೆಬ್ರವರಿ ತಿಂಗಳಿನಿಲ್ಲಿ ಅಂತರಾಷ್ಟ್ರೀಯ ಬಹುಬಾಷಾ ಸಮ್ಮೇಳನವನ್ನು ನಡೆಸಲು ತೀರ್ಮನಿಸಿದ್ದು, ಅದಕ್ಕೆ ರಾಜ್ಯ ಸರಕಾರ ರೂ 5 ಲಕ್ಷ ಅನುದಾನ ಮೀಸಲಿರಿಸಿದೆ ಎಂದು ಅಕಾಡೆಮಿಯ ಅಧ್ಯಕ್ಷ ಆರ್ ಪಿ ನಾಯ್ಕ ಹೇಳಿದರು.

ಉಡುಪಿಯಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕೊಂಕಣಿ ಭಾಷೆಗೆ ಸಂವಿಧಾನದ ಎಂಟನೇ ಪರಿಚ್ಛೇಧದ ಮಾನತ್ಯತೆ ದೊರೆತ ಬೆಳ್ಳಿ ಹಬ್ಬದ  ಅಂಗವಾಗಿ ಕೊಂಕಣಿ ಸಾಹಿತ್ಯ ಅಕಾಡೆಮಿ 25 ಸರಣಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಪ್ರಯುಕ್ತ ಉಡುಪಿ, ಶಿರೂರು ಹಾಗೂ ಕೋಡಿ ಕನ್ಯಾನದಲ್ಲಿ ಸರಣಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ’

ಮಾತೃ ಭಾಷೆ ಕೊಂಕಣಿಯನ್ನು ಉಳಿಸಿವ ನಿಟ್ಟಿನಲ್ಲಿ ಉತ್ತರ  ಜಿಲ್ಲೆಯಲ್ಲಿನ ವಿದ್ಯಾರ್ಥಿಗಳಿಗಾಗಿ ಕೊಂಕಣಿ ಭಾಷಾ ಕಲಿಕಾ ಅಭಿಯಾನ ಆರಂಭಿಸಲಾಗಿದೆ. ಅದಕ್ಕಾಗಿ 10 ಶಾಲೆಗಳನ್ನು ಗುರುತಿಸಿ ಅಲ್ಲಿ ವಿದ್ಯಾರ್ಥಿ ಸಮ್ಮೇಳನವನ್ನು ನಡೆಸಲಾಗುತ್ತದೆ ಎಂದು ಹೇಳಿದರು.

ಮಂಗಳೂರಿನ ವಿಶ್ವವಿದ್ಯಾಲಯ ಸಂಧ್ಯಾ ಕಾಲೇಜಿನಲ್ಲಿ ಕಳೆದ ವರ್ಷ ಆರಂಭಿಸಲಾಗಿರುವ ಎಂಎ ಕೊಂಕಣಿ  ವಿಭಾಗ  ಮೊದಲ 5 ವಿದ್ಯಾರ್ಥಿಗಳ ಶುಲ್ಕವನ್ನು ಸಂಪೂರ್ಣವಾಗಿ  ಕಡಿತ ಮಾಡಲಾಗಿದೆ. ನಂತರ ಬರುವ  5 ವಿದ್ಯಾರ್ಥಿಗಳಿಗೆ ಅರ್ಧ ಶುಲ್ಕವನ್ನು ಭರಿಸಬೇಕಾಗಿದೆ. ಈ ವರ್ಷ ಸುಮಾರು 9 ವಿದ್ಯಾರ್ಥಿಗಳು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಮಂಗಳೂರಿನಲ್ಲಿ ಕೊಂಕಣಿ ಭವನ ನಿರ್ಮಿಣ ಹಾಗೂ ಅಕಾಡೆಮಿ ಸ್ವಂತ ಕಟ್ಟಡ ನಿರ್ಮಿಸಲು ನಿವೇಶನ ನೀಡುವ  ಬಗ್ಗೆ ರಾಜ್ಯ ಸರ್ಕಾದೊಂದಿಗೆ  ಇಗಾಗಲೇ ಮಾತುಕತೆ ನಡೆಸಲಾಗಿದೆ ಎಂದರು.

ಸುದ್ದಿಗೊಷ್ಟಿಯಲ್ಲಿ ಅಕಾಡೆಮಿ ರಿಜಿಸ್ಟ್ರಾರ್ ದೇವದಾಸ್ ಪೈ, ಮಂಗಳೂರು ವಿವಿಯ ಸೆನೆಟ್ ಸದಸ್ಯ ಅಮೃತ್ ಶೆಣೈ, ನಗರಸಭಾಧ್ಯಕ್ಷ ಜನಾರ್ದನ ಭಂಡಾರ್ ಕಾರ್ ಉಪಸ್ಥಿತರಿದ್ದರು.


Spread the love