ಕೊಂಕಣಿ ಅಕಾಡೆಮಿಯ ಸ್ಮರಣ ಸಂಚಿಕೆ `ಶಿಖರ’ ಲೋಕಾರ್ಪಣೆ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2014-17ನೇ ಸಾಲಿನ ಕೊನೆಯ ಕಾರ್ಯಕ್ರಮ ನಗರದ ಬಿಷಪ್ಸ್ ಹಾವ್ಸ್ ಸಭಾಂಗಣದಲ್ಲಿ 25-02-2017 ರಂದು ನಡೆಯಿತು.
ಅಕಾಡೆಮಿಯ ಮೂರು ವರ್ಷಗಳ ಕಾರ್ಯಚಟುವಟಿಕೆಗಳ ಬಗ್ಗೆ ದಾಖಲೀಕರಣ ಮಾಡಿದ ಸ್ಮರಣ ಸಂಚಿಕೆ`ಶಿಖರ’ ವನ್ನು ಮಂಗಳೂರಿನ ಬಿಷಪ್ ಅ. ವಂ. ಡಾ. ಎಲೋಶಿಯಸ್ ಡಿಸೋಜ ಇವರು ಬಿಡುಗಡೆಗೊಳಿಸಿದರು.
ಇದೇ ವೇಳೆ ಮಾಂಡ್ ಸೊಭಾಣ್ ಕೊಡಮಾಡುವ ದಿ. ಜೆಸ್ಸಿ ಕ್ಯಾಸ್ತೆಲಿನೊ ಸ್ಮಾರಕ ಶ್ರೇಷ್ಟ ಕೊಂಕಣಿ ಶಿಕ್ಷಕ ಪುರಸ್ಕಾರವನ್ನು ರೋಜಾ ಮಿಸ್ತಿಕಾ ಹೈಸ್ಕೂಲಿನ ಲ್ಯಾನ್ಸಿ ಸಿಕ್ವೇರಾ ಇವರಿಗೆ ಹಸ್ತಾಂತರಿಸಲಾಯಿತು.
ಬಿಷಪರು ಕೊಂಕಣಿಗೆ ನೀಡಿದ ಸರ್ವ ಸಹಕಾರಕ್ಕೆ ಅಕಾಡೆಮಿ ವತಿಯಿಂದ ಅವರನ್ನು ಅಧ್ಯಕ್ಷರು ಮತ್ತು ಸದಸ್ಯರು ಗೌರವಿಸಿದರು. ಶಾಲೆಗಳಲ್ಲಿ ಕೊಂಕಣಿ ಕಲಿಕೆಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುವುದಾಗಿ ಬಿಷಪರು ವಾಗ್ದಾನವಿತ್ತರು.
ಬೆಳಿಗ್ಗೆ ಕೊಂಕಣಿ ಶಿಕ್ಷಕರ ವಾರ್ಷಿಕ ಸಮಾವೇಶ ನಡೆಯಿತು. ಪಾದುವಾ ಕಾಲೇಜಿನ ಪ್ರಾಂಶುಪಾಲರಾದ ವಂ. ಆಲ್ವಿನ್ ಸೆರಾವೊ ಇವರು ಮಾತೃಭಾಷೆ ಕಲಿಕೆಯ ಮಹತ್ವದ ಬಗ್ಗೆ ವಿವರಿಸಿದರು. ಪ್ಲೋರಾ ಕ್ಯಾಸ್ತೆಲಿನೊ ಪ್ರಶ್ನೋತ್ತರಿ ನಡೆಸಿ ಕೊಟ್ಟರು.
ವೇದಿಕೆಯಲ್ಲಿ ಮೊನ್ಸಿ ಡೆನಿಸ್ ಮೊರಾಸ್ ಪ್ರಭು ಮತ್ತು ವಂ ವಿಲಿಯಂ ಮಿನೇಜಸ್ ಉಪಸ್ಥಿತರಿದ್ದರು.
ರೊಯ್ ಕ್ಯಾಸ್ತೆಲಿನೊ ಸ್ವಾಗತಿಸಿ ರಿಜಿಸ್ಟ್ರಾರ್ ಡಾ ಬಿ ದೇವದಾಸ ಪೈ ಧನ್ಯವಾದವನ್ನಿತ್ತರು. ವಿತೊರಿ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.