ಕೊಂಕಣಿ – ಕನ್ನಡ ಭಾಷಾಂತರ ಕಾರ್ಯಾಗಾರ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ;ಕೊಂಕಣಿ ಥಾವ್ನ್ ಕನ್ನಡಾಕ್ ಅನುವಾದ್; ಎಂಬ ಒಂದು ದಿನದ ಭಾಷಾಂತರ ಕಾರ್ಯಾಗಾರವನ್ನು ಫೆಬ್ರವರಿ 26, 2025 ರಂದು ಶಕ್ತಿನಗರದ ಕಲಾಂಗಣ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ʼಇತರ ಭಾಷೆಗಳ ಸಾಹಿತ್ಯವು ಕೊಂಕಣಿಗೆ ಧಾರಾಳವಾಗಿ ಅನುವಾದ ಆಗಿದೆಯಾದರೂ, ಕೊಂಕಣಿಯಿಂದ ಇತರ
ಭಾಷೆಗಳಿಗೆ ಅನುವಾದವಾಗಿರುವುದು ಬಹಳ ವಿರಳ. ಕೊಂಕಣಿ ಸಾಹಿತ್ಯ ಅಕಾಡೆಮಿಯು ಇದನ್ನು ಮನಗಂಡು ಮೊದಲ ಹೆಜ್ಜೆಯಾಗಿ ಕನ್ನಡ ಭಾಷೆಗೆ ಕೊಂಕಣಿ ಭಾಷೆಯ ಸಾಹಿತ್ಯವನ್ನು ಭಾಷಾಂತರಿಸುವ ಕೆಲಸವನ್ನು ಈಗಾಗಲೆ ಕೈಗೆತ್ತಿಕೊಂಡಿದೆ. ಅದರ ಮೊದಲ ಹೆಜ್ಜೆಯೇ ಈ ಭಾಷಾಂತರ ಕಾರ್ಯಾಗಾರʼ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ಪ್ರಾಸ್ತಾವಿಕ ಭಾಷಣ ಮಾಡಿದರು.
ಪ್ರೊಫೆಸರ್ ಸ್ಟೀವನ್ ಕ್ವಾಡ್ರಸ್, ಡಾ. ಆಲ್ವಿನ್ ಡೆಸಾ, ಡಾ. ವಿನ್ಸೆಂಟ್ ಆಳ್ವ ಇವರುಗಳು ಭಾಷಾಂತರದ ಬಗ್ಗೆ ಮಾಹಿತಿ ನೀಡಿದರು.
ಈ ಭಾಷಾಂತರ ಕಾರ್ಯಾಗಾರದಲ್ಲಿ ಭಾಷಾಂತರಗಾರರು ಬಹಳ ಹುಮ್ಮಸ್ಸಿನಿಂದ ಪಾಲ್ಗೊಂಡು ವಿಚಾರ ವಿನಿಮಯ ಮಾಡಿಕೊಂಡರು.