Home Mangalorean News Kannada News ಕೊಂಕಣಿ ಮಾನ್ಯತಾ ದಿನಾಚರಣೆಯ ಬೆಳ್ಳಿ ಹಬ್ಬ ಸಂಭ್ರಮಾಚರಣೆ 

ಕೊಂಕಣಿ ಮಾನ್ಯತಾ ದಿನಾಚರಣೆಯ ಬೆಳ್ಳಿ ಹಬ್ಬ ಸಂಭ್ರಮಾಚರಣೆ 

Spread the love

ಕೊಂಕಣಿ ಮಾನ್ಯತಾ ದಿನಾಚರಣೆಯ ಬೆಳ್ಳಿ ಹಬ್ಬ ಸಂಭ್ರಮಾಚರಣೆ 

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿಗೆ ಮಾನ್ಯತೆ ದೊರೆತು 25 ವರ್ಷಗಳು ಸಂದಿರುವ ಈ ಸುಸಂದರ್ಭ ದಲ್ಲಿ ರಾಜ್ಯದ ವಿವಿಧಕಡೆಗಳಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆಯ 25 ವೈವಿಧ್ಯಮಯ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ.


ಅದರಂತೆ ಈ ಆಚರಣೆಯ ಸರಣಿ ಕಾರ್ಯಕ್ರಮವಾಗಿ ಈಗಾಗಲೇ ಏಳು ಕಾರ್ಯಕ್ರಮಗಳನ್ನು ರಾಜ್ಯದ ವಿವಿಧ ಸ್ಥಳಗಳಲ್ಲಿ ನಡೆಸಿದ್ದು ಅವುಗಳ ವಿವರ ಈ ಕೆಳಗಿನಂತಿದೆ.
(1) ಒಂದನೇ ಕಾರ್ಯಕ್ರಮವನ್ನು ದಿನಾಂಕ 20-8-2017ರಂದು ಕುಮಟಾದಲ್ಲಿ ಕೊಂಕಣಿ ಪರಿಷತ್ ಇವರ ಸಹಕಾರದಲ್ಲಿ “ಕೊಂಕಣಿ ಮಾನ್ಯತಾ ದಿನಚಾರಣೆಯ ಬೆಳ್ಳಿ ಹಬ್ಬ” ದಿನಾಚರಣೆಯನ್ನು ನಡೆಸಲಾಯಿತು.
(2)ಎರಡನೇ ಕಾರ್ಯಕ್ರಮವನ್ನು ಮುಂಡಗೋಡದಲ್ಲಿ ದಿ.22-9-2017 ರಂದು ಸಿಂಚನಾ ಸಂಸ್ಥೆಯವರ ಸಹಕಾರದಲ್ಲಿ “ಕೊಂಕಣಿ ಭಾಷೆ-ವಿಚಾರಧಾರೆ” ಎಂಬ ಶಿರ್ಷಿಕೆಯಲ್ಲಿ ನಡೆಸಲಾಯಿತು.
(3)ಮೂರನೇ ಕಾರ್ಯಕ್ರಮವನ್ನು ದಿನಾಂಕ 23-9-2017 ರಂದು ಯಲ್ಲಾಪುರದಲ್ಲಿ ಮೈತ್ರಿ ಕಲಾಬಳಗ ಇವರ ಸಹಕಾರದಲ್ಲಿ “ಕೊಂಕಣಿ ಜಾನಪದ ಕಲಾ ಸಾಹಿತ್ಯೋತ್ಸವ” ಕಾರ್ಯಕ್ರಮವನ್ನು ನಡೆಸಲಾಯಿತು.
(4)ನಾಲ್ಕನೇ ಕಾರ್ಯಕ್ರಮವನ್ನು ವಿಶೇಷವಾಗಿ ಯುವಜನರಿಗೆ ಕೊಂಕಣಿ ಭಾಷೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ದಿ.24-9-2017 ರಂದು ಗೇರುಸೊಪ್ಪದಲ್ಲಿ ಅಮ್ಚಿ ಕೊಂಕಣಿ ಸಂಘಟನ ಸಂಸ್ಥೆಯ ಸಹಕಾರದಲ್ಲಿ ಯುವಜನರಿಗೆ ಕೊಂಕಣಿ ಸಾಹಿತ್ಯ ಬರವಣಿಗೆ ಪರಿಚಯ ನೀಡಲು “ಕೊಂಕಣಿ ಭಾಷಾ ಕಾರ್ಯಾಗಾರ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು
(5)ಐದನೇ ಸರಣಿ ಕಾರ್ಯಕ್ರಮ “ಕೊಂಕಣಿ ಭಾಷಾ ಸಾಹಿತ್ಯ ಸಂಸ್ಕೃತಿ ಸಮ್ಮಿಲನ್”ವನ್ನು ದಿನಾಂಕ 15-10-2017 ರಂದ ದಾರವಾಡದ ಸಾಂಸ್ಕೃತಿಕ ಸಮುಚ್ಚಯ ಭವನ ಧಾರವಾಡ ಇಲ್ಲಿ ನಡೆಸಲಾಯಿತು.
(6)ಆರನೇ ಕಾರ್ಯಕ್ರಮ “ಕೊಂಕಣಿ ಲೋಕ್ ವೇದ್ ಸಂವ್ಸಾರ್”ವನ್ನು ದಿನಾಂಕ 27-10-2017ರಂದು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಕುಣಬಿ ಭವನದಲ್ಲಿ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಆರ್ ಎಲ್ ಭಟ್ ರವರು ಕಾರ್ಯಕ್ರಮ ಉದ್ಘಾಟಿಸಿ ಭಾಷೆಗಳು ಉಳಿಯಬೇಕು. ಭಾಷೆಗಳಲ್ಲಿರುವ ಸಂಸ್ಕೃತಿ ಸಾಹಿತ್ಯವನ್ನು ಸಂರಕ್ಷಿಸಬೇಕಾಗಿದೆ ಎಂದರು.
(7)ಏಳನೇ ಕಾರ್ಯಕ್ರಮ “ಕೊಂಕಣಿ ಸಂಭ್ರಮ್” ದಿನಾಂಕ 29-10-2017ರಂದು ಪುತ್ತೂರಿನ ಶ್ರೀ ಭುವನೇಂದ್ರ ಕಲಾಭವನದಲ್ಲಿ ನಡೆಸಲಾಯಿತು. ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಶಕುಂತಲಾ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಇದೀಗ ಆಕಾಡೆಮಿಯ ಮಾನ್ಯತಾ ಸರಣಿ ಕಾರ್ಯಕ್ರಮದ ಎಂಟನೇ ಕಾರ್ಯಕ್ರಮವನ್ನು ಕೊಂಕಣಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನಾಗಿ ದಿನಾಂಕ 16.11.2017 ರಂದು ಮಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ಕೊಂಕಣಿ ಮಕ್ಕಳ ದಿನಾಚರಣಿ 2017

ದಿನಾಂಕ 16-11-2017 ರಂದು ಮಂಗಳೂರಿನ ಪುರಭವನದಲ್ಲಿ ಬೆಳಿಗ್ಗೆ 9.00 ರಿಂದ ಪ್ರಾಥಮಿಕ, ಪ್ರೌಢ, ಕಾಲೇಜು ವಿದ್ಯಾರ್ಥಿಗಳ “ಕೊಂಕಣಿ ಮಕ್ಕಳ ದಿನಾಚರಣೆ”ಯ ಸಹಿತವಾಗಿ ದಿನ ಪೂರ್ತಿ ರಾತ್ರಿ 8.00ರ ತನಕ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿದೆ.

ಬೆಳಿಗ್ಗೆ 9 ಗಂಟೆಗೆ ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ಸವಿತಾ ಸನಿಲ್ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್.ಪಿ.ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಮಂಗಳೂರು ನಗದ ಪೆÇೀಲಿಸ್ ಆಯುಕ್ತರಾದ ಶ್ರೀ ಟಿ.ಆರ್.ಸುರೇಶ್ ಮುಖ್ಯ ಅತಿಥಿಯಾಗಿ ಭಾವಗಹಿಸಲಿರುವರು. ಆಯ್ದ ಶಾಲಾ, ಕಾಲೇಜು ಕಲಾತಂಡಗಳಿಂದ ಪ್ರತಿಭಾ ಪ್ರಧರ್ಶನ ನಡೆಯಲಿದೆ. ಶಾಲಾ ಮಕ್ಕಳಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ಎರಡು ವಿಭಾಗಗಳಲ್ಲಿ ನಾಟಕ, ರೂಪಕ, ಸಮೂಹಗಾಯನ, ಜನಪದ ನೃತ್ಯ/ಆಚರಣೆ, ಭಾಷಣ, ಏಕಪಾತ್ರಾಬಿನಯಕ್ಕೆ ಅವಕಾಶ ಕಲ್ಪಿಸಲಾಗಿದೆ.

ಅಪರಾಹ್ನ 5.00 ಗಂಟೆಗೆ ಕಾಲೇಜು ವಿದ್ಯಾರ್ಥಿಗಳಿಗಾಗಿ “ಕೊಂಕಣಿ ಮಾನ್ಯತಾ ರಜತ ವರ್ಷಾಚರಣೆ” ಬಗ್ಗೆ ಒಂದು ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ರಮಾನಾಥ ರೈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್ ಪಿ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಸಚಿವರಾದ ಶ್ರೀ ಯು.ಟಿ ಖಾದರ್, ಮಂಗಳೂರು ದಕ್ಷಿಣ ವಿಧಾನಸಭಾ ಶಾಸಕರಾದ ಶ್ರೀ ಜೇ.ಆರ್.ಲೋಬೊ, ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಶಾಸಕರಾ ಶ್ರೀ ಅಭಯಚಂದ್ರ ಜೈನ್, ವಿಧಾನ ಪರಿಷತ್, ಮುಖ್ಯ ಸಚೇತಕರಾದ ಶ್ರೀ ಐವನ್ ಡಿಸೋಜ, ದ.ಕ ಜಿಲ್ಲಾಪಂಚಾಯರ್ ಅಧ್ಯಕ್ಷರಾದ ಶ್ರೀ ಮೀನಾಕ್ಷಿ ಶಾಂತಿಗೋಡು, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಶಕುಂತಲಾ ಶೆಟ್ಟಿ, ಲೋಕಸಭಾ ಸದಸ್ಯರಾದ ಶ್ರೀ ನಳಿನ್ ಕುಮಾರ್ ಕಟೀಲ್,ಮಂಗಳೂರು ಉತ್ತರದ ಶಾಸಕರಾದ ಶ್ರೀ. ಬಿ ಎ ಮೊಹಿಯುದ್ದೀನ್ ಬಾವ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಬಿ.ಎಚ್.ಖಾದರ್, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀ ಮಹಮ್ಮದ್ ಮೋನು ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎ.ಸಿ ಭಂಡಾರಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು.

ಅಕಾಡೆಮಿಯ ಮಾಜಿ ಅಧ್ಯಕ್ಷರುಗಳಾದ ಶ್ರೀ ಬಸ್ತಿವಾಮನ್ ಶೆಣೈ, ಶ್ರೀ ಎರಿಕ್ ಒಝೇರಿಯೊ, ಶ್ರೀ ಕುಂದಾಪುರ ನಾರಾಯನ ಖಾರ್ವಿ, ಶ್ರೀ ಕಾಸರಗೋಡು ಚಿನ್ನಾ ಹಾಗೂ ಶ್ರೀ ರೋಯ್ ಕ್ಯಾಸ್ತೆಲಿನೊ ಗಣ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ತದನಂತರ ಪದವಿಪೂರ್ವ ಮತ್ತು ಕಾಲೇಜು ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ನಡೆಯಲಿದೆ. ಅಕಾಡೆಮಿಯ ಸದಸ್ಯರಾದ ಶ್ರೀ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಇವರು ಕಾರ್ಯಕ್ರಮದ ಸದಸ್ಯ ಸಂಚಾಲಕರಾಗಿರುತ್ತಾರೆ. ಈ ಕಾರ್ಯಕ್ರಮಕ್ಕೆ ಕೊಂಕಣಿ ಪ್ರಚಾರ ಸಂಚಾಲನ(ರಿ) ಮಂಗಳೂರು ಇವರು ಸಹಯೋಗ ನೀಡಲಿದ್ದಾರೆ.

ಕೊಂಕಣಿ ಬಾಂಧವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕೊಂಕಣಿ ಭಾಷೆಗೆ ದೊರೆತ ಮಾನ್ಯತೆಗೆ ತಮ್ಮ ಅಭಿನಂದನೆಗಳನ್ನು ಸಲ್ಲಿಸಲು ಮನವಿ ಮಾಡಲಾಗಿದೆ.


Spread the love

Exit mobile version