Home Mangalorean News Kannada News ಕೊಂಕಣಿ ಮ್ಯೂಸಿಯಂ ಪ್ರತಿಷ್ಠಾನದ ಅಧ್ಯಕ್ಷ ಹುದ್ದೆಗೆ ರಾಯ್ ಕ್ಯಾಸ್ತೆಲಿನೊ ರಾಜೀನಾಮೆ

ಕೊಂಕಣಿ ಮ್ಯೂಸಿಯಂ ಪ್ರತಿಷ್ಠಾನದ ಅಧ್ಯಕ್ಷ ಹುದ್ದೆಗೆ ರಾಯ್ ಕ್ಯಾಸ್ತೆಲಿನೊ ರಾಜೀನಾಮೆ

Spread the love

ಕೊಂಕಣಿ ಮ್ಯೂಸಿಯಂ ಪ್ರತಿಷ್ಠಾನದ ಅಧ್ಯಕ್ಷ ಹುದ್ದೆಗೆ ರಾಯ್ ಕ್ಯಾಸ್ತೆಲಿನೊ ರಾಜೀನಾಮೆ

ಮಂಗಳೂರು:  ಹೆಸರಾಂತ ಉದ್ಯಮಿ  ಕೊಂಕಣಿ ಸಂಘಟಕ ಹಾಗೂ ಸಮಾಜ ಸೇವಕ ರಾಯ್ ಕ್ಯಾಸ್ತೆಲಿನೊ ಅವರು ಮಾಂಡ್ ಸೊಭಾಣ್ ಪ್ರಾಯೋಜಿತ ಕೊಂಕಣಿ ಮ್ಯೂಸಿಯಂ ಪ್ರತಿಷ್ಠಾನದ ಅಧ್ಯಕ್ಷ ಹುದ್ದೆಗೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.

 ಮಾಂಡ್ ಸೊಭಾಣ್ ಅಧ್ಯಕ್ಷರಾದ ಲುವಿಸ್ ಪಿಂಟೊ ಅವರಿಗೆ ಸಲ್ಲಿಸಿರುವ ತನ್ನ ರಾಜೀನಾಮೆ ಪತ್ರದಲ್ಲಿ  ಮಾಂಡ್ ಸೊಬಾಣ್ ಸಂಸ್ಥೆ ಸ್ಥಾಪನೆ ಅದರ ಪ್ರಗತಿಗಾಗಿ ಸದಾ ಶ್ರಮಿಸಿರುವರ ಪೈಕಿ ತಾನೂ ಕೂಡ ಒಬ್ಬನಾಗಿದ್ದು, ಮಾಂಡ್ ಸೊಭಾಣ್ ಸಂಸ್ಥೆಯ ಸ್ಥಾಪನೆ ಮತ್ತು ಬೆಳವಣಿಗೆಯಲ್ಲಿ ಆರಂಭದಿಂದಲೂ ನಾನು ಸಕ್ರಿಯ ಪಾತ್ರವಹಿಸಿರುವುದು ನಿಮಗೆಲ್ಲ ತಿಳಿದಿರುವ ವಿಷಯ. ಮಾಂಡ್ ಸೊಭಾಣ್, ಅದರಿಂದ ಸ್ಥಾಪಿತವಾದ ಕಲಾಂಗಣ್ ಸಂಸ್ಥೆಯನ್ನು ನನ್ನ ಹಾಗೂ ನನ್ನ ದಿವಂಗತ ತಂದೆಯವರಿಗೆ ಸೇರಿದ ಭೂಮಿಯಲ್ಲಿ ನಿರ್ಮಿಸಲಾಗಿದೆ. . ಮಾಂಡ್ ಸೊಭಾಣ್ ಸಂಸ್ಥೆಯ ಸ್ಥಾಪನೆಯ ದಿನಗಳಿಂದಲೂ ಅದರ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಆರ್ಥಿಕವಾಗಿ ಮತ್ತು ಇತರ ವಿಷಯಗಳಲ್ಲಿ ನಾನು ನಿರಂತರವಾಗಿ ಬೆಂಬಲಿಸುತ್ತಾ ಬಂದಿದ್ದೇನೆ. ಮಾಂಡ್ ಸೊಭಾಣ್ ಮಾರ್ಗದರ್ಶನದಡಿಯಲ್ಲಿ ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ನಿರಂತರ ಪ್ರಗತಿ ಉಂಟಾಗಬಹುದೆಂದು ನಾವು ನಿರೀಕ್ಷಿಸಿದ್ದೆವು. ಹಲವಾರು ಸಂದರ್ಭದಲ್ಲಿ ಪಂಥಾಹ್ವಾನಗಳನ್ನು ಮತ್ತು ಒತ್ತಡಗಳನ್ನು ಎದುರಿಸಿದಾಗಲೂ, ವೈಯಕ್ತಿಕ ಹಿನ್ನಡೆಗಳನ್ನು ಮತ್ತು ಸಂಕಷ್ಟಗಳನ್ನು ಬದಿಗೊತ್ತಿ ಸಂಘಟನೆಯ ಯಶಸ್ವಿಗಾಗಿ ನಾವು ಶ್ರಮಿಸಿದ್ದೆವು.

ಕೊಂಕಣಿ ಮ್ಯೂಸಿಯಂ ಪ್ರತಿಷ್ಠಾನದ ಅಧ್ಯಕ್ಷ ಹುದ್ದೆಗೆ ಧನ್ಯವಾದ ಸಲ್ಲಿಸಿರುವ ರೋಯ್ ಕ್ಯಾಸ್ತಲಿನೊ ಅವರು ಕೆಲ ಹಿತೈಷಿಗಳ ಪಂಗಡ ಕಟ್ಟಿಕೊಂಡು ಸರ್ಕಾರದಿಂದ ರೂ 2.5 ಕೋಟಿ ಅನುದಾನವನ್ನು ಬಜೆಟ್ ಹಂಚಿಕೆಯಲ್ಲಿ ಪಡೆಯಲು ಶ್ರಮಿಸಿ ನಾನು ಯಶಸ್ವಿಯಾಗಿದ್ದೆನು. ಅದೇ ರೀತಿ ಸರ್ಕಾರವು ಮುಂದೆ ರೂ. 2.5 ಕೋಟಿ ಒದಗಿಸುವ ಆಶ್ವಾಸನೆ ನೀಡಿತ್ತು. ಆದರೆ ಕೆಲವೊಂದು ಘಟನೆಗಳಿಂದಾಗಿ ಹಣ ಲಭಿಸದೇ ಇರುವುದು ಒಂದು ರೀತಿಯ ಹಿನ್ನಡೆಯಾಗಿದೆ. ಇತ್ತೀಚಿನ ದಿನಗಳಲ್ಲಿ ನಡೆದಿರುವ ಕೆಲವು ಘಟನೆಗಳಿಂದ ನಾನು ಕೊಂಕಣಿ ಮ್ಯೂಸಿಯಂ ನ ಕೆಲಸ ಕಾರ್ಯಗಳಿಂದಾಗಿ ಗೌರವಪೂರ್ವಕವಾಗಿ ದೂರ ಇರುವಂತಾಗಿದ್ದು ಆದ್ದರಿಂದ ನನ್ನ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ಅವರು ಹೇಳಿದ್ದಾರೆ.


Spread the love

Exit mobile version