Home Mangalorean News Kannada News ಕೊಂಚಾಡಿ ಚಾತುರ್ಮಾಸ ಸಮಿತಿ ವತಿಯಿಂದ ಆಯುರ್ವೇದಿಕ ಆರೋಗ್ಯ ತಪಾಸಣೆ

ಕೊಂಚಾಡಿ ಚಾತುರ್ಮಾಸ ಸಮಿತಿ ವತಿಯಿಂದ ಆಯುರ್ವೇದಿಕ ಆರೋಗ್ಯ ತಪಾಸಣೆ

Spread the love

ಕೊಂಚಾಡಿ ಚಾತುರ್ಮಾಸ ಸಮಿತಿ ವತಿಯಿಂದ ಆಯುರ್ವೇದಿಕ ಆರೋಗ್ಯ ತಪಾಸಣೆ

ಮಂಗಳೂರು: ಶ್ರೀಮದ್ ಯಾದವೇಂದ್ರ ಆಯುರ್ವೇದ ವೈದ್ಯಶಾಲಾ ಕೋಟೇಶ್ವರ , ಶ್ರೀಮದ್ ಭುವನೇಂದ್ರ ಪಂಚಕರ್ಮ ಸೆಂಟರ್ ಕೋಟೇಶ್ವರ ಮತ್ತು ಕೊಂಚಾಡಿ ಚಾತುರ್ಮಾಸ ಸಮಿತಿ ಇದರ ಜಂಟಿ ಆಶ್ರಯದಲ್ಲಿ 25 ನೇ ಆಯುರ್ವೇದಿಕ್ ಉಚಿತ ಅರೋಗ್ಯ ತಪಾಸಣೆ ಮತ್ತು ಔಷದಿ ವಿತರಣೆ ಶಿಬಿರವು ಕೊಂಚಾಡಿ ಯಲ್ಲಿ ನಡೆಯಿತು.

 ಸುಮಾರು 300 ಕ್ಕೂ ಅಧಿಕ ಶಿಭಿರಾರ್ಥಿಗಳು ಸದುಪಯೋಗ ಪಡಕೊಂಡರು , ಬಳಿಕ ಜಿ.ಯಸ್.ಬಿ ಸಮಾಜದ 100 ಕ್ಕೂ ಅಧಿಕ ಆಯುರ್ವೇದಿಕ್ ವೈದ್ಯರುಗಳ ಸಮಾವೇಶ ನಡೆಯಿತು ಇದೆ ಸಂಧರ್ಭದಲ್ಲಿ ಕೇರಳದ ಪ್ರಸಿದ್ಧ ಸಂಸ್ಕೃತ ಪಂಡಿತ್ ಹಾಗೂ ಆಯುರ್ವೇದ ತಜ್ಞ ಸರ್ವಶ್ರೀ ಶೇಷಾದ್ರಿನಾಥ ಶಾಸ್ತ್ರಿಗಳು ಆಯುರ್ವೇದದ ಬಗ್ಗೆ  ವಿಶೇಷ ವಿಚಾರ ಘೋಷ್ಠಿ ನಡೆಯಿತು . ಸಾಯಂಕಾಲ ಕಾಶೀಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನೆರೆದ ವೈದ್ಯರುಗಳಿಗೆ , ಸಮಾಜಭಾಂದವರಿಗೆ ಆಶೀರ್ವಚನ ಪ್ರವಚನ ನಡೆಯಿತು .

ಕಾಂಜಂಗಾಡಿನ ಶ್ರೀ ಲಕ್ಷ್ಮಿ ವೆಂಕಟರಮಣ ದೇವಳಕ್ಕೆ ಕಾಶೀ ಮಠಾಧೀಶರ ಭೇಟಿ

ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿರವರು ಕಾಂಜಂಗಾಡಿನ ಶ್ರೀ ಲಕ್ಷ್ಮಿ ವೆಂಕಟರಮಣ ದೇವಳಕ್ಕೆ ಶನಿವಾರ ಭೇಟಿ ನೀಡಿದರು . ಶ್ರೀ ದೇವಳದಲ್ಲಿ ನಡೆಯಲಿರುವ ಪರಿಹಾರ ಹಾಗೂ ಜೀರ್ಣೋದ್ಧಾರ ಕಾರ್ಯಕ್ರಮಗಳ ಪ್ರಯುಕ್ತ ಶ್ರೀ ದೇವರ ಸನ್ನಿಧಿಯಲ್ಲಿ ಶ್ರೀಗಳವರಿಂದ ಮಹಾ ಪ್ರಾರ್ಥನೆ ನಡೆಯಿತು .

 


Spread the love

Exit mobile version