Home Mangalorean News Kannada News ಕೊಕ್ಕಡದಲ್ಲಿ ರಸ್ತೆ ದಾಟುತ್ತಿದ್ದ ಬಾಲಕಿಗೆ ಕಾರು ಡಿಕ್ಕಿ ಹೊಡೆದು ಸಾವು

ಕೊಕ್ಕಡದಲ್ಲಿ ರಸ್ತೆ ದಾಟುತ್ತಿದ್ದ ಬಾಲಕಿಗೆ ಕಾರು ಡಿಕ್ಕಿ ಹೊಡೆದು ಸಾವು

Spread the love
RedditLinkedinYoutubeEmailFacebook MessengerTelegramWhatsapp

ಕೊಕ್ಕಡದಲ್ಲಿ ರಸ್ತೆ ದಾಟುತ್ತಿದ್ದ ಬಾಲಕಿಗೆ ಕಾರು ಡಿಕ್ಕಿ ಹೊಡೆದು ಸಾವು

ಧರ್ಮಸ್ಥಳ: ರಸ್ತೆ ದಾಟುತ್ತಿದ್ದ ಬಾಲಕಿಗೆ ಕಾರೊಂದು ಡಿಕ್ಕಿ ಹೊಡೆದ ಘಟನೆ ಕೊಕ್ಕಡ ಪೇಟೆಯಲ್ಲಿ ಶನಿವಾರ ನಡೆದಿದೆ.

ಮೃತ ಬಾಲಕಿಯನ್ನು ಕೊಕ್ಕಡ ಪಟಲಡ್ಕ ನಿವಾಸಿ ಶಿವಪ್ಪ ಎಂಬವರ ಪುತ್ರಿ ಕೃತಿಕಾ (5) ಎಂದು ಗುರುತಿಸಲಾಗಿದೆ.

ಕೊಕ್ಕಡ ಪೇಟೆಯಲ್ಲಿ ವೈದ್ಯರ ಬಳಿ ಔಷಧಿಗಾಗಿ ತಾಯಿ ಜೊತೆಯಲ್ಲಿ ಬಂದಿದ್ದು, ಅಲ್ಲಿಂದ ಹಿಂತಿರುಗಿತ್ತಿದ್ದ ವೇಳೆ ಕೊಕ್ಕಡದ ಎಂಡೋ ಪಾಲನಾ ಕೇಂದ್ರದ ಮಾರುತಿ ಒಮಿನಿ ಕಾರು ಡಿಕ್ಕಿ ಹೊಡೆದಿದ್ದು, ಸ್ಥಳೀಯರು ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ.

ಕಾರನ್ನು ಚಲಾಯಿಸುತ್ತಿದ್ದ ನಾರಾಯಣ ಎಂಬಾತ ಪಾನಮತ್ತನಾಗಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಧರ್ಮಸ್ಥಳ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Spread the love
RedditLinkedinYoutubeEmailFacebook MessengerTelegramWhatsapp

Exit mobile version