ಕೊಡಗಿನ ಕುಲದೇವತೆ ಶ್ರೀ ಕಾವೇರಿ ಮಾತೆಯ ನೂತನ ಚಿತ್ರಪಟ ತಲಕಾವೇರಿಯಲ್ಲಿ ಬಿಡುಗಡೆ
2025 ಫೆಬ್ರವರಿ 26ನೇ ತಾರೀಕಿನ ಮಹಾ ಶಿವರಾತ್ರಿಯ ಪವಿತ್ರ ದಿನದಂದು ಕೊಡಗಿನ ಚಿತ್ರ ಶಿಲ್ಪ ಕಲಾವಿದ ಬಿ. ಕೆ. ಗಣೇಶ್ ರೈ ಯವರು ರಚಿಸಿರುವ ನೂತನ ಶ್ರೀ ಕಾವೇರಿ ಮಾತೆಯ ಚಿತ್ರಪಟ ತಲಕಾವೇರಿಯ ಪವಿತ್ರ ತೀರ್ಥ ಕುಂಡಿಕೆಯ ಸನ್ನಿಧಿಯಲ್ಲಿ ಸಕಲ ಪೂಜಾ ವಿದಿ ವಿಧಾನಗಳೊಂದಿಗೆ ಪೂಜಾ ಕೈಂಕರ್ಯ ನಡೆಸಿ ಲೋಕಾರ್ಪಣೆ ಗೊಳಿಸಲಾಯಿತು.
ಆಚ್ಛಸ್ವಚ್ಛಲಸದ್ದುಕೂಲ ವಸನಾಂ ಪದ್ಮಾಸನೇ ಧ್ಯಾಸಿನೀಂಹಸ್ತನ್ಯಸ್ತವರಾಭಯಾಬ್ಜಕಲಶಾA ರಾಕೇಂದು ಕೋಟಿ ಪ್ರಭಾಮ್ |ಭಾಸ್ವದ್ಬೂಷಣ ಗಂಧಮಾಲ್ಯ ರುಚಿರಾಂ ಚಾರುಪ್ರಸನ್ನಾನನಾAಶ್ರೀ ಗಂಗಾದಿ ಸಮಸ್ತ ತೀರ್ಥ ನಿಲಯಾಂ ಧ್ಯಾಯಾಮಿ ಕಾವೇರಿಕಾಮ್ ||
ಶ್ಲೋಕ ವರ್ಣನೆಯಂತೆ ಡಿಜಿಟಲ್ ಕಂಪ್ಯೂಟರ್ ಗ್ರಾಫಿಕ್ಸ್ ನಲ್ಲಿ ಚಿತ್ರ ಶಿಲ್ಪಕಲಾವಿದ ಗಣೇಶ್ ರೈಯವರು ರಚಿಸಿರುವ ಕೊಡಗಿನ ಕುಲದೇವತೆ ಶ್ರೀ ಕಾವೇರಿ ಮಾತೆ ಪದ್ಮಾಸನ ರೂಪದಲ್ಲಿ ದರ್ಶನ ನೀಡಿರುವಂತೆ ಚಿತ್ರಿಸಲಾಗಿದ್ದು ದಕ್ಷಿಣ ಭಾರತದ ಶಿವಕಾಶಿಯಲಿ,್ಲ ಚಿತ್ರಪಟ ಅಫ್ ಸೆಟ್ ವರ್ಣ ರಂಜಿತವಾಗಿ ಮುದ್ರಣವಾಗಿದೆ. ಚಿತ್ರಪಟವು ಎ3, ಎ4, ಪೋಸ್ಟ್ ಕಾರ್ಡ್ ಮತ್ತು ಐಡಿ ಕಾರ್ಡ್ ಸೈಜಿನಲ್ಲಿ ಕೊಂಡು ಕೊಳ್ಳಲು
ಲಭ್ಯವಿದೆ.
1980ರ ದಶಕದಲ್ಲಿ ಪ್ರಥಮ ಬಾರಿಗೆ ಶ್ರೀ ಕಾವೇರಿ ಮಾತೆಯ ವರ್ಣ ಚಿತ್ರವನ್ನು ಗಣೇಶ್ ರೈಯವರು ಶಿವಕಾಶಿಯಲ್ಲಿ ಮುದ್ರಿಸಿ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ನವರಿಂದ ಬಿಡುಗಡೆ ಗೊಳಿಸಿದ್ದರು.
ತಲಕಾವೇರಿ ಮತ್ತು ಭಾಗಮಂಡಲ ಹಾಗೂ ಪ್ರಮುಖ ಪಟ್ಟಣಗಳಸ್ಟೇಷನರಿ ಮಳಿಗೆಗಳಲ್ಲಿ ಚಿತ್ರಪಟಗಳು ದೊರೆಯುತ್ತದೆ.