ಕೊಡಚಾದ್ರಿಯಲ್ಲಿ ಕಾರ್ಮಿಕರ ಸಂಗಮ – ಎಂಡೋಸಲ್ಫಾನ್, ಪೋಲಿಯೋ ಪೀಡಿತರವರಿಗೆ ಸಹಾಯ
ಕುಂದಾಪುರ: ‘ನಮ್ಮ ನಡಿಗೆ, ಹಳ್ಳಿಯ ಕಡೆಗೆ’ ಎಂಬ ವಿನೂತನ ಕಾರ್ಯಕ್ರಮದೊಂದಿಗೆ ಉಡುಪಿ ಜಿಲ್ಲಾ ಕಾರ್ಮಿಕರ ವೇದಿಕೆಯು ಕುಂದಾಪುರ ತಾಲೂಕಿನ ಗೋಳಿಹೂಳಿ ಗ್ರಾಮದ ಹೋಲಾರ್ ಎಂಬ ಕುಗ್ರಾಮದಲ್ಲಿ “ಕೊಡಚಾದ್ರಿ ಕಾರ್ಮಿಕರ ಸಂಗಮ” ಎಂಬ ಎಲ್ಲಾ ರೀತಿಯ ಕಾರ್ಮಿಕರನ್ನು ಒಗ್ಗೂಡಿಸಿ ಬೃಹತ್ ಜಿಲ್ಲ ಮಟ್ಟದ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಅಪಘಾತಕ್ಕೆ ತುತ್ತಾಗಿ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಒಂದೂವರೆ ವರುಷದಿಂದ ಹಾಸಿಗೆಯಲ್ಲೆ ಇರುವ ಅಶೀಷ್ ಶೆಟ್ಟಿ ಎಂಬ ಬಾಲಕನ ಚಿಕಿತ್ಸೆಗೆ ಧನ ಸಹಾಯ ಮತ್ತು ವಿಲ್ಚೇರ್ ವಿತರಿಸಿ ಅಶೀಷ್ನ ಚಿಕಿತ್ಸೆಗೆ ಬೇಕಾದ ಎಲ್ಲಾ ರೀತಿಯ ಸಹಾಯªನ್ನು ವೇದಿಕೆ ಮಾಡುತ್ತದೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಭರವಸೆ ನೀಡಿದರು.
ಎಂಡೋಸಲ್ಥಾನ್ ಮತ್ತು ಪೋಲಿಯೋ ಪೀಡಿತ ಮಕ್ಕಳನ್ನ ಗುರುತಿಸಿ ಸಹಾಯಧನ ಮತ್ತು ಶಾಲಾ ಮಕ್ಕಳಿಗೆ ಉಚಿತ ಬಸ್ಪಾಸ್ ಮಾಡಿಕೊಡಲು ವೇದಿಕೆ ಮುಂದಾಗಿದ್ದು ಶ್ಲಾಘನೀಯ ಎಂದು ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ಬೈಂದೂರು ಕ್ಷೇತ್ರ ವಿ.ಎಲ್.ಎ ಮತ್ತು ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷರಾದ ಗೋಪಾಲ ಪೂಜಾರಿ ವೇದಿಕೆಯ ಕಾರ್ಯವೈಖರಿಯನ್ನು ಕೊಂಡಾಡಿದರು.
ರೈತರಿಗೆ ಗೇರು ಬೆಳೆ ಬಗ್ಗೆ ಮಾಹಿತಿ ಮತ್ತು ಕಾರ್ಮಿಕರ ಸೌಲಭ್ಯಗಳ ಮಾಹಿತಿ ಮತ್ತು ಕಾರ್ಮಿಕರ ಸೌಲಭ್ಯಗಳ ಮಾಹಿತಿಯನ್ನ ವೇದಿಕೆ ಅಧ್ಯಕ್ಷ ರವಿ ಶೆಟ್ಟಿ ದಿಕ್ಸೂಚಿ ಭಾಷಣದಲ್ಲಿ ಸವಿಸ್ತಾರವಾಗಿ ತಿಳಿಸಿದರು.
ಸಭಾಧ್ಯಕ್ಷತೆ ವಹಿಸಿದಂತಹ ರಾಮ್ಕಿಶನ್ ಹೆಗ್ಡೆ ಬಸ್ರೂರು ಇವರು ಮಾತಾನಾಡಿ ಹಳ್ಳಿಗಾಡಿನಲ್ಲಿ ಇಷ್ಟೋ ಜನೋಪಕಾರಿ ಕೆಲಸ ನಡೆದಿರುವುದು ವೇದಿಕೆಯನ್ನು ಜನ ಸೇವೆ ಕಾರ್ಯಕ್ಕೆ ಹಿಡಿದ ಕನ್ನಡಿ ಅಂತಿದೆ ವೇದಿಕೆಯಿಂದ ಇನ್ನು ಹೆಚ್ಚಿನ ಕೆಲಸ ಆಗಲಿ ಎಂದು ಶುಭ ಹಾರೈಸಿದರು.
ಬೈಂದೂರು ವಿಧಾನ ಸಭಾಕ್ಷೇತ್ರ ವ್ಯಾಪ್ತಿಯ ರಸ್ತೆ ಮತ್ತು ಬೀದಿದೀಪ, ಮಾಹಿತಿ ಫಲಕ ಕೊಲ್ಲೂರು ಮತ್ತು ಕುಂದಾಪುರ ರಸ್ತೆಯಲ್ಲಿ ಅಳವಡಿಸುವಂತೆ, ಮತ್ತು ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ನೀಡುವ ಸೌಲಭ್ಯಗಳನ್ನು ರೈತರಿಗೆ ರೈತ ಕಾರ್ಮಿಕರಿಗೂ ನೀಡುವಂತೆ ಹಳ್ಳಿಗಾಡಿಗೆ ಸರಕಾರಿ ಬಸ್ಸುಗಳನ್ನು ನೀಡುವಂತೆ ವೇದಿಕೆಯ ಘಟಕಾಧ್ಯಕ್ಷ ಪ್ರದೀಪ್ ದೇವಾಡಿಗ ನೇತೃತ್ವದಲ್ಲಿ ಕೆ. ಗೋಪಾಲ ಪೂಜಾರಿಯವರಿಗೆ ಮನವಿ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರಥಮ, ದ್ವಿತೀಯ, ತೃತೀಯ ಶ್ರೇಣಿಯಲ್ಲಿ ಪಾಸಾದ ಸ್ಥಳೀಯ 50ಕ್ಕೂ ಹೆಚ್ಚಿನ ಶಾಲಾ ಮಕ್ಕಳನ್ನು ಪ್ರೋತ್ಸಾಹಿಸಿ ಗೌರವಿಸಲಾಯಿತು. ಕ್ರೀಡೆಯಲ್ಲಿ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ನಾಗರಾಜ ಪೂಜಾರಿ (ಅಂತರಾಷ್ಟ್ರೀಯ ವೈಟ್ ಲಿಫ್ಟರ್), ಮಂಜುನಾಥ ಮರಾಠಿ (ರಾಷ್ಟ್ರಮಟ್ಟದ ವೈಟ್ ಲಿಫ್ಟರ್), ಅಭಿಷೇಕ್ (ರಾಜ್ಯಮಟ್ಟದ ನೆಟ್ಬಾಲ್ ಕ್ರೀಡಾಪಟು), ಅಕ್ಷತಾ ಪೂಜಾರಿ ಉಪ್ಪುಂದ (ರಾಷ್ಟ್ರಮಟ್ಟದ ಕ್ರೀಡಾಪಟು), ಶ್ರೇಯಸ್ (ರಾಷ್ಟ್ರಮಟ್ಟದ ಕರಾಟೆಪಟು) ಹಾಗೂ ಅವರಿಗೆ ಮಾರ್ಗದರ್ಶಕರಾಗಿದ್ದ ದೈಹಿಕ ಶಿಕ್ಷಕರುಗಳಾದ ಸುಕೇಶ್ ಶೆಟ್ಟಿ (ಶ್ರೀ ಮೂಕಾಂಬಿಕಾ ಪದವಿ ಕೂರ್ವ ಕಾಲೇಜು, ಕೊಲ್ಲೂರು), ಸಣ್ಣಯ್ಯ ನಾಯ್ಕ ಅರೆಶಿರೂರು, ಸಚಿನ್ ಕುಮಾರ್ ಶೆಟ್ಟಿ, ಕೊಲ್ಲೂರು, ರಾಜೀವ ಶೆಟ್ಟಿ (ಜಿಲ್ಲಾ ಪ್ರಶಸ್ತಿ ವಿಜೇತ ದೈಹಿಕ ಶಿಕ್ಷಣ ಶಿಕ್ಷಕರು, ಗೋಳಿಹೊಳೆ), ರವಿಶಂಕರ್ ಹೆಗ್ಡೆ (ದೈಹಿಕ ಶಿಕ್ಷಣ ಶಿಕ್ಷಕರು, ಹೊಸೂರು), ಅರುಣ್ ಶೆಟ್ಟಿ (ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಪಾಧ್ಯಕ್ಷರು, ಕುಂದಾಪುರ) ಇವರುಗಳನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಸಾರ್ವಜನಿಕ ಸೇವೆಗಾಗಿ ತನ್ನ ಜೀವನ ಮುಡಿಪಾಗಿಟ್ಟಉದ್ಯಮದಾರರಾದ ಆಪ್ತಬಾಂಧವ ರಾಮ ಪಾಲನ್ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗೆ ಪಾತ್ರರಾದ ಶ್ರೀ ಕೆ. ನಾಗರಾಜು, ನಿವೃತ್ತ ಮುಖ್ಯಶಿಕ್ಷಕರು, ಕೊಲ್ಲೂರು ಇವರನ್ನೂ ಸನ್ಮಾನಿಸಲಾಯಿತು.
ಎಂಡೋಸಾಲ್ಫನ್, ಪೋಲಿಯೋ ಪೀಡಿತ ಮಕ್ಕಳ ಚಿಕಿತ್ಸಾ ಸಹಾಯಾರ್ಥವಾಗಿ ಕರ್ನಾಟಕ ಕಾರ್ಮಿಕರ ವೇದಿಕೆಯೊಂದಿಗೆ ಎಂ.ಜಿ.ಫ್ರೆಂಡ್ಸ್ ಹೊಲಾರ್ ಇವರ ಸಂಯೋಜನೆಯಲ್ಲಿ ಹೊಲಾರ್ನ ಶ್ರೀ ಮಹಾಗಣಪತಿ ಕ್ರೀಡಾಂಗಣದಲ್ಲಿಜಿಲ್ಲಾಮಟ್ಟದ ಹೊನಲು ಬೆಳಕಿನ ಪ್ರೋಕಬಡ್ಡಿ ಪಂದ್ಯಾಟ ನೆರವೇರಿತು. ಜಿಲ್ಲಾಮಟ್ಟದ ಹಲವಾರು ತಂಡಗಳು ಭಾಗವಹಿಸಿದ್ದು, ಕಾರ್ಕಳ ಟೀಮ್ ಪ್ರಥಮ ಹಾಗೂ ಕೊಲ್ಲೂರು ತಂಡ ದ್ವಿತೀಯ ಬಹುಮಾನ ಪಡೆದವು.
ಈ ಸಂದರ್ಭದಲ್ಲಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ರವಿ ಶಾಸ್ತ್ರೀ ಬನ್ನಂಜೆ, ಜಿಲ್ಲಾ ಸಂಚಾಲಕರಾದ ಸುಧಾಕರ್ ನಾಯಕ್, ಸಹಸಂಘಟನಾ ಕಾರ್ಯದರ್ಶಿ ಸಂದೀಪ್ ಕೊಡಂಕೂರು, ಸ್ವಯಂ ಸೇವಾ ಘಟಕದ ಅಧ್ಯಕ್ಷರಾದ ಮಲ್ಲಿಕಾರ್ಜುನ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಕೆವಿನ್ ನೆಲ್ಸನ್, ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾದ ಜಾವಿದ್, ರೈತ ಮುಖಂಡರಾದ ವೀ.ನಾ. ಕುರುವತ್ತಿಗೌಡರ್, ಯುವ ಘಟಕದ ಅಧ್ಯಕ್ಷರಾದ ಗೌತಮ್, ದಲಿತ ಮುಖಂಡರಾದ ಮಂಜುನಾಥ ಕೊಡಂಕೂರು, ಜಿಲ್ಲಾ ಸಲಹೆಗಾರರಾದ ದಯಾನಂದ ಶೆಟ್ಟಿ ಮತ್ತು ಪ್ರಶಾಂತ್ ದೇವಾಡಿಗ, ಕ್ರೀಡಾ, ಸಾಹಿತ್ಯ ಮತ್ತು ಸಾಂಸ್ಕøತಿಕ ಘಟಕದ ಉಪಾಧ್ಯಕ್ಷರಾದ ನೀಲೇಶ್ ಕುಮಾರ್, ಮಲ್ಪೆ ಘಟಕದ ಅಧ್ಯಕ್ಷರಾದ ಮೋಹನ್ರಾಜ್, ಸಿದ್ಧಾಪುರ ಘಟಕದ ಅಧ್ಯಕ್ಷರಾದ ದಿನಕರ ಶೆಟ್ಟಿ, ಕಾಪು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಚಂದ್ರ ಪೂಜಾರಿ, ಸರಿತಾ ಕೆವಿನ್, ಬೈಂದೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಪ್ರದೀಪ್ ದೇವಾಡಿಗ ಹಾಗೂ ಅಲ್ಲಿನ ಕಾರ್ಯಕರ್ತರು ಮತ್ತು ಇನ್ನಿತರ ಕಾರ್ಯಕರ್ತರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಮುಖ್ಯ ಅತಿಥಿಗಳಾಗಿ ರಾಮಸೇನಾ ಸಂಸ್ಥಾಪಕ ಅಧ್ಯಕ್ಷರಾದ ಪ್ರಸಾದ್ ಅತ್ತಾವರ, ಎ.ಪಿ.ಎಂ.ಸಿ. & ಗ್ರಾಮ ಪಂ. ಸದಸ್ಯರಾದ ವಸಂತ ಹೆಗ್ಡೆ, ನಿವೃತ್ತ ಮುಖ್ಯೋಪಾಧ್ಯಾಯರಾದ ಜೆ.ರತ್ನಾಕರ ಶೆಟ್ಟಿ, ಯುವ ಉದ್ಯಮಿಗಳಾದ ಸರ್ಜಿತ್ ಶೆಟ್ಟಿ, ಮೋಹನ್ದಾಸ್ ಶೆಟ್ಟಿ, ಉದ್ಯಮಿಗಳು, ಚಂದ್ರಿಕಾಎಸ್. ಶೆಟ್ಟಿ, ಜನಸಂಪರ್ಕಾಧಿಕಾರಿ, ಮಾನವ ಹಕ್ಕು, ಉಡುಪಿ ಜಿಲ್ಲೆ ಉಪಸ್ಥಿತರಿದ್ದರು.
ಕುಂದಾಪುರ ಕನ್ನಡದ ಹಾಸ್ಯ ಚಕ್ರವರ್ತಿ ಮನು ಹಂದಾಡಿಯವರಿಂದ ‘ಹಾಸ್ಯ ಸಂಜೆ’ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮವನ್ನು ಚಂದ್ರ ಪೂಜಾರಿಯವರು ಪ್ರಸ್ತಾವಿಸಿ, ರಾಜೇಶ್ ಕಿಣಿ ಸ್ವಾಗತಿಸಿ ಚರಣ್ದಾಸ್ ವಂದಿಸಿದರು