ಕೊಡವೂರು ಕಾನಂಗಿ ಶ್ರೀಶಂಕರನಾರಾಯಣ ತೀರ್ಥ ಕೆರೆಗೆ ಗಂಗಾ ಪೂಜೆ

Spread the love

ಕೊಡವೂರು ಕಾನಂಗಿ ಶ್ರೀಶಂಕರನಾರಾಯಣ ತೀರ್ಥ ಕೆರೆಗೆ ಗಂಗಾ ಪೂಜೆ

ಉಡುಪಿ: ಕಳೆದ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಶ್ರೀಶಂಕರನಾರಾಯಣ ತೀರ್ಥ ಕೆರೆ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಯುವಕರ ತಂಡ ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ ಕೊಡವೂರು ಗ್ರಾಮದ ಕಾನಂಗಿಯ ಶ್ರೀಶಂಕರನಾರಾಯಣ ತೀರ್ಥ ಕೆರೆಗೆ ಭಾನುವಾರ ಗಂಗಾ ಪೂಜೆ ನೆರವೇರಿಸಲಾಯಿತು.

ಉಡುಪಿ ಶಾಸಕ ರಘುಪತಿ ಭಟ್ ಗಂಗಾಪೂಜೆ ನೆರವೇರಿಸಿ ಮಾತನಾಡಿ ಊರಿನ ಯುವಕರು ಸೇರಿ ಕಳೆ-ಹೂಳು ತೆಗೆದು ಸ್ವಚ್ಛಗೊಳಿಸಿ ಪುನರುಜ್ಜೀವನಗೊಳಿಸಿದ ಕಾನಂಗಿಯ ಚಿಕ್ಕಣ್ಣ ಕೆರೆ ಯಾನೆ ಶ್ರೀಶಂಕರನಾರಾಯಣ ತೀರ್ಥ ಕೆರೆಯನ್ನು ಅಭಿವೃದ್ಧಿಪಡಿಸುವುದು ಜನಪ್ರತಿನಿಧಿಗಳ ಜವಾಬ್ದಾರಿ. ಆದ್ದರಿಂದ ಸರಕಾರದ ಅನುದಾನ ಬಳಸಿ ಕರೆ ಅಭಿವೃದ್ಧಿ ಪಡಿಸಲಾಗುವುದು

ಕೆರೆಗೆ ಕಲ್ಲಿನ ಕಟ್ಟೆ ಕಟ್ಟಿ ಅಭಿವೃದ್ಧಿ ಪಡಿಸದೇ ಇದ್ದರೆ ಮತ್ತೆ ಮಳೆಗಾಲದಲ್ಲಿ ಕೆಸರು ನೀರು ಹರಿದು ಹೂಳು ತುಂಬಲಿದೆ. ನರಾಭಿವೃದ್ಧಿ ಪ್ರಾಧಿಕಾರದಲ್ಲಿ ಕೆರೆ ಅಭಿವೃದ್ಧಿಗೆ ಅನುದಾನವಿದೆ. ಇಲ್ಲದಿದ್ದರೆ ಸಣ್ಣ ನೀರಾವರಿ ಇಲಾಖೆಯ ಅನುದಾನ ಮೂಲಕ ಕೆರೆಯನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಇದು ಜನಪ್ರತಿನಿಧಿಗಳಾಗಿ ನಮ್ಮ ಜವಾಬ್ದಾರಿಯಾಗಿದೆ ಎಂದರು.

ಸಂವೇದನಾ ಫೌಂಡೇಶನ್ ಸಂಸ್ಥಾಪಕ ಪ್ರಕಾಶ್ ಮಲ್ಪೆ ಅವರು ಮುಖ್ಯ ಭಾಷಣ ಮಾಡಿ, ನಮ್ಮ ಸಂಸ್ಕøತಿ-ಪರಂಪರೆಯಲ್ಲಿ ನೀರಿಗೆ ಉನ್ನತ ಸ್ಥಾನ ನೀಡಲಾಗಿದೆ. ನೀರು ಉಳಿದರೆ ನಾವು ಉಳಿಯುತ್ತೇವೆ. ಅದೇ ರೀತಿ ನೀರು ಉಳಿದರೆ ಪರಿಸರವೂ ಉಳಿಯುತ್ತದೆ. ಪರಿಸರ ಸಂರಕ್ಷಣೆಗೊಂತ ದೊಡ್ಡ ಪೂಜೆ ಇನ್ನೊಂದಿಲ್ಲ. ಆದ್ದರಿಂದ ಈ ಬಾರಿ ಮಲ್ಪೆ-ಕೊಡವೂರು ಪರಿಸರದ ಇನ್ನಿತರ ಕೆರೆಗಳನ್ನು ಪಟ್ಟಿ ಮಾಡಿ, ಅವುಗಳನ್ನು ಸ್ವಚ್ಛಗೊಳಿಸಿ, ಅಭಿವೃಧ್ಧಿ ಪಡಿಸಬೇಕಿದೆ ಎಂದು ಹೇಳಿದರು.

ಇದೇ ವೇಳೆ ರಾಘವೇಂದ್ರ ರಾವ್ ಅವರು ಇಂದ್ರಾಣಿ ಹೊಳೆಗೆ ನೇರವಾಗಿ ಬಿಡುವ ಕೊಳಚೆ ನೀರಿನಿಂದ ಕೊಡವೂರು ಪರಿಸರದಲ್ಲಿ ಉಂಟಾಗುವ ಹಾನಿಯ ಬಗ್ಗೆ ವಿವರಿಸಿ, ಪರಿಸರವನ್ನು ಉಳಿಸುವಂತೆ ಶಾಸಕರಿಗೆ ಮನವಿ ಮಾಡಿದರು.

ಮುಖ್ಯ ಅತಿಥಿಯಾಗಿ ಕರ್ನಾಟಕ ದಕ್ಷಿಣ ಪ್ರಾಂತ ಜಲ ಪರಿಸರ ಸಂರಕ್ಷಣಾ ಪ್ರಮುಖ್ ಡಾ. ನಾರಾಯಣ ಶೆಣೈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೆರೆ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಕೆ. ಶ್ರೀನಿವಾಸ ರಾವ್, ಅಧ್ಯಕ್ಷ ದೇವರಾಜ್ ಸುವರ್ಣ ಉಪಸ್ಥಿತರಿದ್ದರು.


Spread the love