Home Mangalorean News Kannada News ಕೊಡವೂರು ದೇವಳದಲ್ಲಿ ಪ್ರದಕ್ಷಿಣೆ ನಮಸ್ಕಾರದ ಕರಪತ್ರ ಹಾಗು ದಿನಚರಿ ಪುಸ್ತಕ ಲೋಕಾರ್ಪಣೆ

ಕೊಡವೂರು ದೇವಳದಲ್ಲಿ ಪ್ರದಕ್ಷಿಣೆ ನಮಸ್ಕಾರದ ಕರಪತ್ರ ಹಾಗು ದಿನಚರಿ ಪುಸ್ತಕ ಲೋಕಾರ್ಪಣೆ

Spread the love

ಕೊಡವೂರು ದೇವಳದಲ್ಲಿ ಪ್ರದಕ್ಷಿಣೆ ನಮಸ್ಕಾರದ ಕರಪತ್ರ ಹಾಗು ದಿನಚರಿ ಪುಸ್ತಕ ಲೋಕಾರ್ಪಣೆ

ಸುಖ ಶಾಂತಿ ಲಭಿಸಿ ಮೋಕ್ಷಕ್ಕೆ ದಾರಿ ತೋರಬಲ್ಲ ಪ್ರದಕ್ಷಿಣೆ ಎಲ್ಲರೂ ಮಾಡಬಹುದಾದ ಸುಲಭ ಸಾಧ್ಯ ಅತ್ಯುತ್ತಮ ಸೇವೆ. ದೇವರಿಗೆ ಸುತ್ತು ಬರುವುದರಿಂದ ಗುರುತ್ವಾಕರ್ಷಣ ಶಕ್ತಿ ನಮ್ಮ ನರನಾಡಿಗಳಲ್ಲಿ ಪಸರಿಸಿ ಹೊಸ ಚೈತನ್ಯ ಮೂಡುವುದು. ಧನಾತ್ಮಕ ಶಕ್ತಿಯ ಅಯಸ್ಕಾಂತೀಯ ಕಂಪನಗಳು ನಮ್ಮನ್ನಾವರಿಸಿ ಮೈ ಮನಗಳೆರಡೂ ಆರೋಗ್ಯಪೂರ್ಣವಾಗುತ್ತವೆ. ಎಂದು ಉದ್ಯಮಿ ಮಂಜನಾಥ್ ಭಟ್ ಮೂಡುಬೆಟ್ಟು ಅಬಿಪ್ರಾಯ ಪಟ್ಟರು. ಅವರು ಸೋಮವಾರದಂದು ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ಪ್ರದಕ್ಷಿಣೆ ನಮಸ್ಕಾರದ ದಿನಚರಿ ಪುಸ್ತಕ ಲೋಕಾರ್ಪಣೆಗೆಗೊಳಿಸಿ ಮಾತನಾಡಿದರು.

ದೇವಳದ ಪ್ರದಾನ ತಂತ್ರಿ ವೇದಮೂರ್ತಿ ಪುತ್ತೂರು ಹಯವದನ ತಂತ್ರಿ ಪ್ರದಕ್ಷಿಣೆ ನಮಸ್ಕಾರದ ಸಂಕ್ಷಿಪ್ತ ಮಾಹಿತಿ ನೀಡುವ ಆಶಯಪತ್ರವನ್ನು ಬಿಡುಗಡೆಗೊಳಿಸಿ ನೂತನ ಆಡಳಿತ ಮಂಡಳಿ ದೇವತಾ ಕಾರ್ಯವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಿಹಿಸುತ್ತಿದ್ದು ನಿರಂತರ ಧಾರ್ಮಿಕ ಚಟುವಟಿಕೆ ನಡೆಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ದಾರ್ಮಿಕ ಚಿಂತಕ ವಿಜಯ ಕೆದ್ಲಾಯ ವಡಬಾಂಡೇಶ್ವರ, ಭಕ್ತವೃಂದ ಅಧ್ಯಕ್ಷ ರವಿರಾಜ ಹೆಗ್ಡೆ, ಸೇವಾ ಸಮಿತಿಯ ಗೌರವ ಅಧ್ಯಕ್ಷ ಆನಂದ ಪಿ, ಸುವರ್ಣ, ವ್ಯವಸ್ಥಾಪನಾ ಸಮಿತಿ ಸದಸ್ಯ ಭಾಸ್ಕರ ಬಾಚನಬೈಲು, ಅಡಿಗ ಕೃಷ್ಣ ಮೂರ್ತಿ ಭಟ್, ಎ. ರಾಜ ಸೇರಿಗಾರ, ಬಾಬ ಕೆ., ಚಂದ್ರಕಾಂತ ಪುತ್ರನ್, ಸುದಾ ಎನ್.ಶೆಟ್ಟಿ, ಬೇಬಿ ಎಸ್ ಮೆಂಡನ್ ಉಪಸ್ಥಿತರಿದ್ದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿದರು. ಜನಾರ್ದನ್ ಕೊಡವೂರು ಪ್ರಸ್ತಾಪಿಸಿದರು. ಕಾವ್ಯ ಸೀತರಾಮ್ ಪ್ರಾರ್ಥಿಸಿದರು. ಪೂರ್ಣಿಮಾ ಜೆ. ವಂದಿಸಿದರು. ಸತೀಶ್ ಕೊಡವೂರು ನಿರೂಪಿಸಿದರು. ವಿದ್ವಾನ್ ಅನಂತಕೃಷ್ಣ ಆಚಾರ್ ಯುಗಾದಿ ಹಾಗು ಪ್ರದಕ್ಷಿನೆ ನಮಸ್ಕಾರದ ಬಗ್ಗೆ ಪ್ರವಚನ ನೀಡಿದರು


Spread the love

Exit mobile version