Home Mangalorean News Kannada News ಕೊಡವೂರು: ಪ್ರಕೃತಿ ಉಳಿಸುವ ಅಭಿಯಾನ ಪ್ರತಿಯೊಬ್ಬರ ಮನೆ ಮನದಲ್ಲಿ ನಡೆಯಬೇಕು

ಕೊಡವೂರು: ಪ್ರಕೃತಿ ಉಳಿಸುವ ಅಭಿಯಾನ ಪ್ರತಿಯೊಬ್ಬರ ಮನೆ ಮನದಲ್ಲಿ ನಡೆಯಬೇಕು

Spread the love

ಕೊಡವೂರು: ಪ್ರಕೃತಿ ಉಳಿಸುವ ಅಭಿಯಾನ ಪ್ರತಿಯೊಬ್ಬರ ಮನೆ ಮನದಲ್ಲಿ ನಡೆಯಬೇಕು

ಉಡುಪಿ: ಪ್ರಕೃತಿ ಉಳಿಸುವ ಅಭಿಯಾನ ಪ್ರತಿಯೊಬ್ಬರ ಮನದಲ್ಲಿ ಮನೆಯಲ್ಲಿ ಆದಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ. ನಮ್ಮ ಭಾರತದ ಜನಸಂಖ್ಯೆಯ ಮೂವತ್ತಮೂರು ಶೇಖಡಾವಾರು ಅರಣ್ಯ ಪ್ರದೇಶ ವಿರಬೇಕಿದ್ದು ಇದೀಗ ತುಂಬ ಕಡಿಮೆ ವನ ಸಂಪತ್ತು ನಮ್ಮದಾಗಿದೆ. ಹಾಗಾಗಿ ಹಸಿರು ಬೆಳೆಸಿ ಉಳಿಸುವ ಕೆಲಸ ಕಾರ್ಯಗಳನ್ನು ಪ್ರತಿಯೊಬ್ಬ ನಾಗರಿಕ ತನ್ನ ಕರ್ತವ್ಯವೆಂಬಂತೆ ಮಾಡಬೇಕಾಗಿದೆ ಎಂದು ಅರಣ್ಯಾಧಿಕಾರಿ ಜೀವನ ದಾಸ್ ಶೆಟ್ಟಿ ಅಭಿಪ್ರಾಯಪಟ್ಟರು.

ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನ, ಸುಮನಸಾ ಸಂಸ್ಥೆ, ಅರಣ್ಯ ಇಲಾಖೆ, ವಿಜಯವಾಣಿ ದಿನಪತ್ರಿಕೆ ಹಾಗೂ ದಿಗ್ವಿಜಯ ವಾಹಿನಿ ಇವರುಗಳ ಜಂಟಿ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಯ ಅಂಗವಾಗಿ ಕೊಡವೂರು ದೇವಳದ ವಠಾರದಲ್ಲಿ ಸಸಿ ನೆಡುವುದರ ಮೂಲಕ ಚಾಲನೆ ನೀಡಿದರು.

ಆಧುನಿಕತೆಯ ನೆಪದಲ್ಲಿ ಒಂದೊಂದು ಮರ ಉರುಳಿದಾಗ ಎರಡೆರಡು ಸಸಿನೆಡುವ ಸಂಕಲ್ಪ ಮಾಡಿದರೆ ಮಾತ್ರ ಮುಂದಿನ ಜನಾಂಗ ಶುದ್ಧ ಗಾಳಿ,ನೀರು,ಆಹಾರ ಪಡೆಯಲು ಸಾಧ್ಯ ಎಂದು ನಗರಸಭಾ ಸದಸ್ಯ ವಿಜಯ ಕೊಡವೂರು ಕರೆ ನೀಡಿದರು.

ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಭಾಸ್ಕರ ಬಾಚನಬೈಲ್,ಎ ರಾಜ ಶೇರಿಗಾರ,ದೇವಳದ ಪಿಆರ್ ಒ ಉಮೇಶ್ ರಾವ್,ನಗರ ಸಭಾ ಸದಸ್ಯ ವಿಜಯ ಕೊಡವೂರು, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ್, ಕೊಡವೂರು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು, ಹಿರಿಯ ಶಿಕ್ಷಕಿ ಮಲ್ಲಿಕಾ ಕೊಡವೂರು,ದುರ್ಗಾ ಮಹಿಳಾ ಮಂಡಲದ ಅಧ್ಯಕ್ಷೆ ಸರೋಜಿನಿ ಉಪಸ್ಥಿತರಿದ್ದರು.ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು ಸ್ವಾಗತಿಸಿದರು.ಸದಸ್ಯ ಜನಾರ್ದನ ಕೊಡವೂರು ನಿರೂಪಿಸಿ ವಂದಿಸಿದರು.


Spread the love

Exit mobile version