ಕೊಣಾಜೆ: ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಪ್ರಮುಖ ಆರೋಪಿ ಸೆರೆ

Spread the love

ಕೊಣಾಜೆ: ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಪ್ರಮುಖ ಆರೋಪಿ ಸೆರೆ

ಕೊಣಾಜೆ: ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಪ್ರಮುಖ ಆರೋಪಿಯನ್ನು ಆ್ಯಂಟಿ ಡ್ರಗ್ ಟೀಮ್ ಕಾರ್ಯಾಚರಣೆ ನಡೆಸಿ ಬಂಧಿಸಿ, ಅಪಾರ ಮೌಲ್ಯದ ಎಂಡಿಎಂಎ ಮಾದಕ ವಸ್ತು ಸೇರಿದಂತೆ ಇತರ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಬೆಳ್ತಂಗಡಿ ಮೂಲದ ಅಲ್ಫಾಝ್ ಯಾನೆ ಅಲ್ಫಾ ಪ್ಯಾಬ್ಲೋ ಎಂದು ಗುರುತಿಸಲಾಗಿದೆ.

ನ.25ರಂದು ಪಜೀರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಬಳಪದವು ಬಳಿ ತಲಪಾಡಿಯ ಮರಿಯ ಚರ್ಚ್ ಕಂಪೌಂಡ್ ನಿವಾಸಿ ಗೌತಮ್ (22),‌ ಕುಂಪಲ ಹನುಮಾನ್ ದೇವಸ್ಥಾನ ಬಳಿಯ ನಿವಾಸಿ ಕಾರ್ತಿಕ್ (27) , ತೊಕ್ಕೊಟ್ಟು ಗಣೇಶ ನಗರ ನಿವಾಸಿ ನಿಖಿಲ್ (28) ಎಂಬವರನ್ನು ನಿರ್ಜನ ಪ್ರದೇಶದಲ್ಲಿ ಸೋಮವಾರ ಬಂಧಿಸಿದ್ದರು. ಇವರಿಂದ ಎಂಡಿಎಂಎ ಮಾದಕ ವಸ್ತು, ಕಾರು ಮತ್ತು 3 ಮೊಬೈಲ್ ಫೋನ್‌ಗಳು ಹಾಗು ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.


Spread the love