ಕೊಣಾಜೆ ಪೊಲೀಸ್ ಠಾಣೆಯ “ಪಾರ್ಟ್ ಟೈಮ್ ಜಾಬ್” ಸೈಬರ್ ಕ್ರೈಮ್ ಪ್ರಕರಣದ ಆರೋಪಿಗಳ ದಸ್ತಗಿರಿ
ಮಂಗಳೂರು: ವಾಟ್ಸಾಪ್ ಮೆಸೇಜ್ ನಲ್ಲಿ. ಟೆಲೆಗ್ರಾಮ್ App ನ ಲಿಂಕ್ ಕಳುಹಿಸಿ ಓಪನ್ ಮಾಡುವಂತೆ ತಿಳಿಸಿದ್ದು, ಅದರಂತೆ ಪಿರ್ಯಾದಿದಾರರು ಟೆಲೆಗ್ರಾಮ್ App ನ್ನು ಓಪನ್ ಮಾಡಿದಾಗ ಟೆಲಿಗ್ರಾಮ್ ನಲ್ಲಿ ಪಾರ್ಟಿ ಟ್ರೈಮ್ ಜಾಬ್ ಏನೆಂದು ಕೇಳಿದಾಗ ಅವರಿಗೆ ಒಂದು ವಿಡಿಯೋ ಕಳುಹಿಸಿ ಅದನ್ನು ನೋಡಿ ಸ್ಟ್ರೀನ್ ಶಾಟ್ ಕಳುಹಿಸಲು ಹೇಳಿದ್ದು ಪಿರ್ಯಾದಿದಾರರು ಅವರಿಗೆ ಸ್ಟ್ರೀನ್ ಶಾಟ್ ನ್ನು ಕಳುಹಿಸಿದ ತಕ್ಷಣ ಅವರ ಬ್ಯಾಂಕ್ ಖಾತೆಗೆ RS 130/- ನ್ನು ಹಾಕಿರುತ್ತಾರೆ. ನಂತರ ಪಿರ್ಯಾದಿದಾರರು ಹಾಕಿದ ವಿಡಿಯೋ ತಪ್ಪಾಗಿದೆ ಎಂದು ಹೇಳಿ ಅದನ್ನು ಸರಿ ಮಾಡಲು ಟೆಲಿಗ್ರಾಮ್ ಲಿಂಕ್ ನ್ನು ಕಳುಹಿಸಿದು, ಸದ್ರಿ ಲಿಂಕ್ ನ್ನು ಪಿರ್ಯಾದಿದಾರರು ಓಪನ್ ಮಾಡಿದಾಗ ಆರೋಪಿಗಳು 1000/- ಮೊತ್ತವನ್ನು ಹಾಕಲು ಹೇಳಿ ಹಾಗೇಯೆ ಅವರಂತೆ ಪಿರ್ಯಾದಿದಾರರು ತಮ್ಮ ಬ್ಯಾಂಕ್ ನ ಆಕೌಂಟಿಂದ ಹಂತ ಹಂತವಾಗಿ ಆರೋಪಿಗಳು ನೀಡಿದ ಬೇರೆ ಬೇರೆ ಖಾತೆಗೆ ಪಿರ್ಯಾದಿದಾರರನ್ನು ಹೆಚ್ಚು ಹಣವನ್ನು ಕೊಡುವುದಾಗಿ ನಂಬಿಸಿ ಮೋಸಮಾಡಿ ಒಟ್ಟು ರೂ 28,18,065/- ವನ್ನು ತಮ್ಮ ಖಾತೆಗೆ ಹಾಕಿಸಿಕೊಂಡಿರುತ್ತಾರೆ. ಈ ಬಗ್ಗೆ ಕೊಣಾಜಿ ಠಾಣೆಯಲ್ಲಿ ಐಟಿ ಕಾಯಿದೆಯಂತೆ ದೂರು ದಾಖಲಾಗಿರುತ್ತದೆ.
ಈಗಾಗಲೇ ಈ ಪ್ರಕರಣಕದಲ್ಲಿ ಬೆಂಗಳೂರು ಹಾಗೂ ಮೈಸೂರು ಮೂಲದ 5 ಆರೋಪಿಗಳನ್ನು ಬಂದಿಸಿ ಮಾನ್ಯ ನ್ಯಾಯಲಯಕ್ಕೆ ಹಾಜರು ಪಡಿಸಲಾಗಿರುತ್ತದೆ ಈ ಆರೋಪಿಗಳ ವಿಚಾರಣೆಯಲ್ಲಿ ಇತರ ಆರೋಪಿಗಳ ಮಾಹಿತಿ ನೀಡಿದ್ದು ಅಮೀರ್ ಸುಹೇಲ್ ವಾಸ: ನೀಲಸಂದ್ರ, ಬೆಂಗಳುರು ಮತ್ತು ಸುಹೇಲ್ ಆಹ್ಮದ್ ವಾನಿ ವಾಸ;ಆನಂತನಾಗ ಜಿಲ್ಲೆ,,, ಜಮ್ಮು ಕಾಶ್ಮೀರ್ ರಾಜ್ಯ, ಈ ಆರೋಪಿಗಳನ್ನು ಜಮ್ಮು ಕಾಶ್ಮೀರ್ ರಾಜ್ಯದ ಕುಲಮ್ ಬಳಿ ದಸ್ತೆಗಿರಿ ಮಾಡಿ ಮಾನ ಮಂಗಳೂರು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿರುತ್ತದೆ ಸುಹೇಲ್ ಅಹ್ಮದ್ ವಾನಿ ಮೂಲತಹ ಜಮ್ಮು ಕಾಶ್ಮೀರ್ ರಾಜ್ಯದವನಾಗಿದ್ದು, ಇತನಿಗೆ ಬೆಂಗಳುರಿನಲ್ಲಿ. ಅಮೀರ್ ಸುಹೇಲ ಪರಿಚಯವಾಗಿರುತ್ತದೆ ಈ ಇಬ್ಬರು ಆರೋಪಿಗಳು ಹಲವಾರು ಬ್ಯಾಂಕ್ ಗಳಲ್ಲಿ ಬೇರೆಯವರ ಹೆಸರಿನಲ್ಲಿ ಹಾಗೂ ತಮ್ಮ ಹೆಸರಿನಲಿ ಬ್ಯಾಂಕ್ ಖಾತೆಗಳನ್ನು ಮಾಡಿಸಿ ಕೊಟ್ಟಿರುವುದಾಗಿ ವಿಚಾರಣೆಯಲ್ಲಿ ತಿಳಿದುಬಂದಿರುತ್ತದೆ. ಇದೇ ರೀತಿ ಬೇರೆ ಬೇರೆ ಬ್ಯಾಂಕ್ ಆಕೌಂಟ್ ಮಾಡಿಸಿಕೊಟ್ಟು ದಿನಕ್ಕೆ ಮೂರರಿಂದ ಐದು ಸಾವಿರ ಹಣಗಳಿಸುವ ಉದ್ದೇಶದಿಂದ ಬ್ಯಾಂಕ್ ಖಾತೆ ಮಾರಾಟ ಮಾಡಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ,
ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಅನುಪಮ್ ಅಗರವಾಲ್ (ಐ.ಪಿ.ಎಸ್) ರವರ ನಿರ್ದೇಶನದಂತೆ, ಮಂಗಳೂರು ನಗರದ ಉಪ ಪೊಲೀಸ್ ಆಯುಕ್ತರುಗಳಾದ ಮಾನ ಶ್ರೀ ಸಿದ್ಧಾರ್ಥ ಗೋಯಲ್, ಮಾನ್ಯ ಶ್ರೀ ದಿನೇಶ್ ಕುಮಾರ್ ರವರ ಮಾರ್ಗದರ್ಶನದಂತೆ ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಮಾನ್ಯ ಶ್ರೀಮತಿ ಧನ್ನ ಎನ್ ನಾಯಕ್ ಕೊಣಾಜೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ರಾಜೇಂದ್ರ ಬಿ ಹಾಗೂ ಪಿಎಸ್ಐ ಗಳಾದ ಪುನೀತ್ ಗಾಂಬ್ರರ್, ನಾಗರಾಜ್, ಎಎಸ್ ಐ
ಪ್ರವೀಣ್ ಹಾಗೂ ಕೊಣಾಜೆ ಠಾಣೆ ಸಿಬ್ಬಂದಿಗಳಾದ ರೇಷ್ಮೆ, ರಾಮನಾಯ್ಕ, ಬಸವನಗೌಡ, ದರ್ಶನ್, ಸುರೇಶ್, ಮುತ್ತು ಓಗೇನರ್, ಸಂತೋಷ್ ಕಾರ್ಯಾಚರಣೆಯಲಿ ಭಾಗವಹಿಸಿರುತ್ತಾರೆ.