Home Mangalorean News Kannada News ಕೊಣಿಲ ರಾಘವೇಂದ್ರ ಭಟ್ ರವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪಿ.ಎಚ್.ಡಿ

ಕೊಣಿಲ ರಾಘವೇಂದ್ರ ಭಟ್ ರವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪಿ.ಎಚ್.ಡಿ

Spread the love

ಕೊಣಿಲ ರಾಘವೇಂದ್ರ ಭಟ್ ರವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪಿ.ಎಚ್.ಡಿ

ಕರ್ನಾಟಕ ಸರಕಾರ ಮತ್ತು ಯುನಿಸೆಫ್ ಸಹಯೋಗದ ಮಕ್ಕಳ ಸಂರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕರಾಗಿರುವ ಕೊಣಿಲ ರಾಘವೇಂದ್ರ ಭಟ್ ಇವರಿಗೆ ಪ್ರತಿಷ್ಠಿತ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪಿ ಎಚ್ ಡಿ (ಡಾಕ್ಟರ್ ಆಫ್ ಫಿಲಾಸಫಿ) ಪದವಿ ಲಭಿಸಿದೆ.

ಇತ್ತಿಚೆಗೆ ನಡೆದ ಕನ್ನಡ ವಿಶ್ವವಿದ್ಯಾಲಯದ ನುಡಿಹಬ್ಬ -32, ರ ಘಟಿಕೋತ್ಸವ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ , ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಡಿ.ವಿ.ಪರಶಿವಮೂರ್ತಿ , ಆಂಧ್ರ ಪ್ರದೇಶ ಕೇಂದ್ರೀಯ ವಿಶ್ವ ವಿದ್ಯಾಲಯದ ಕುಲಪತಿಗಳಾದ ಪ್ರೋ.ಎಸ್.ಎ.ಕೋರಿ ಹಾಗೂ ಇತರ ಗಣ್ಯರ ಸಮ್ಮುಖದಲ್ಲಿ ಕೊಣಿಲ ರಾಘವೇಂದ್ರ ಭಟ್ ಇವರಿಗೆ ಪಿಎಚ್.ಡಿ ಪದವಿ ಪ್ರಧಾನ ಮಾಡಲಾಯಿತು.

ಕೊಣಿಲ ರಾಘವೇಂದ್ರ ಭಟ್‌ರವರು ಅಭಿವೃದ್ಧಿ ಮತ್ತು ಮಕ್ಕಳ ಹಕ್ಕುಗಳು ಎಂಬ ವಿಷಯದ ಮೇಲೆ ಅಧ್ಯಯನ ನಡೆಸಿ ಬರೆದ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿಎಚ್.ಡಿ (ಡಾಕ್ಟರ್ ಆಫ್ ಫಿಲಾಸಫಿ) ಪದವಿಯನ್ನು ನೀಡಿದೆ. ಹಂಪಿ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ.ಹೆಚ್.ಡಿ. ಪ್ರಶಾಂತ್ ಇವರ ಮಾರ್ಗದರ್ಶಶನಲ್ಲಿ ಸಂಶೋಧನೆ ನಡೆಸಲಾಗಿತ್ತು.

ಇವರು ಪ್ರಸಕ್ತ ಕರ್ನಾಟಕ ಸರಕಾರ ಮತ್ತು ಯುನಿಸೆಫ್ ಸಹಯೋಗದ ಮಕ್ಕಳ ಸಂರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕರಾಗಿ ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮಕ್ಕಳ ಹಕ್ಕು, ಮಕ್ಕಳ ಸಂರಕ್ಷಣೆ ಮತ್ತು ಮಕ್ಕಳ ಅಭಿವೃದ್ಧಿಗಾಗಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ.

ಕೊಣಿಲ ರಾಘವೇಂದ್ರ ಭಟ್ ರವರು ದಕ್ಷಿಣ ಕನ್ನಡ ಜಿಲ್ಲೆಯ ನೆರೆರಾಜ್ಯ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ತಾಲೂಕಿನ ಕೊಣಿಲ ಮನೆತನದವರಾಗಿದ್ದು, ವರ್ಕಾಡಿ ಪಂಚಾಯತಿಯ ಸುಳ್ಯಮೆ ಗ್ರಾಮದವರಾಗಿದ್ದಾರೆ. ಇವರು ದಿ. ಕೊಣಿಲ ರಾಮ್ ಭಟ್ ಹಾಗೂ ದಿ. ಪಾರ್ವತಿ ಅಮ್ಮನವರ ನಾಲ್ಕನೇ ಪುತ್ರ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕುರ್ನಾಡು ಮುಡಿಪಿನ ಭಾರತೀ ಶಾಲೆಯಲ್ಲಿ ಓದಿದ್ದು, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಮುಡಿಪಿನ ಸರಕಾರಿ ಪದವಿಯನ್ನು ಪದವಿಪೂರ್ವ ಕಾಲೇಜ್‌ನಲ್ಲಿ ಮುಗಿಸಿ, ಕಲಾ ವಿಭಾಗದ ಪದವಿಯನ್ನು ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಪಡೆದು, ಮಂಗಳೂರಿನ ಸ್ಕೂಲ್ ಆಫ್ ಸೊಶ್ಯಲ್ ವರ್ಕ್, ರೋಶನಿ ನಿಲಯದ ಮೂಲಕ ಮಂಗಳೂರು ವಿಶ್ವವಿದ್ಯಾಲಯದಿಂದ ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಪಡೆದಿರುತ್ತಾರೆ.


Spread the love

Exit mobile version