Spread the love
ಕೊರೋನಾದಿಂದ ಸಿಎಮ್ ಬಿಎಸ್ ವೈ ಶೀಘ್ರ ಗುಣಮುಖರಾಗುವಂತೆ ಪೇಜಾವರ ಸ್ವಾಮೀಜಿ ಹಾರೈಕೆ
ಉಡುಪಿ: ಕೊರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಗಳು ಶುಭ ಹಾರೈಸಿದ್ದಾರೆ.
ಕೊರೊನಾ ಸೋಂಕಿಗೆ ತುತ್ತಾಗಿರುವ ನಮ್ಮ ಸಂಸ್ಥಾನದ ಮುಖ್ಯಾಭಿಮಾನಿಗಳೂ , ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳೂ ಆಗಿರುವ ಬಿ ಎಸ್ ಯಡ್ಯೂರಪ್ಪನವರು ಅತೀ ಶೀಘ್ರ ಗುಣಮುಖರಾಗಿ ಎಂದಿನಂತೆ ತಮ್ಮ ಉತ್ಸಾಹ -ಚೈತನ್ಯವನ್ನು ತುಂಬಿಕೊಂಡು ನಾಡಿಗೆ ಬಹುಕಾಲ ಸೇವೆ ಸಲ್ಲಿಸುವಂತಾಗಲಿ ; ಅವರಿಗೆ ಉತ್ತಮ ಆಯುಷ್ಯ ಆರೋಗ್ಯವನ್ನು ಕರುಣಿಸುವಂತೆ ಉಡುಪಿ ಶ್ರೀ ಕೃಷ್ಣ ಮತ್ತು ನಮ್ಮ ಆರಾಧ್ಯಮೂರ್ತಿ ಶ್ರೀರಾಮ ದೇವರಲ್ಲಿ ವಿಶೇಷವಾಗಿ ಪ್ರಾರ್ಥಿಸುತ್ತೇವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Spread the love