Home Mangalorean News Kannada News ಕೊರೋನಾವನ್ನು ಮೆಟ್ಟಿ ನಿಲ್ಲುತ್ತಿರುವ ‘ಭಾರತೀಯತ್ವ’ !

ಕೊರೋನಾವನ್ನು ಮೆಟ್ಟಿ ನಿಲ್ಲುತ್ತಿರುವ ‘ಭಾರತೀಯತ್ವ’ !

Spread the love

ಕೊರೋನಾವನ್ನು ಮೆಟ್ಟಿ ನಿಲ್ಲುತ್ತಿರುವ ‘ಭಾರತೀಯತ್ವ’ !

ಕಳೆದ ಎರಡು ತಿಂಗಳಿಂದ ಜಗತ್ತಿನಲ್ಲಿ ಕರೋನಾ ಕೋಲಾಹಲವೆಬ್ಬಿಸುತ್ತಿದೆ, ಆದರೆ ಇದುವರೆಗೆ ಅದಕ್ಕೆ ಯಾವುದೇ ಔಷಧಿಯನ್ನು ಪತ್ತೆಹಚ್ಚಲಾಗಲಿಲ್ಲ. ಅದರ ಮದ್ದು ಸಿದ್ಧವಾಗಲು ಇನ್ನೂ ೬ ತಿಂಗಳು ಬೇಕಾಗಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಆದ್ದರಿಂದ ಚೀನಾದ ನಂತರ ಇಟಲಿ, ಸ್ಪೇನ್, ಅಮೇರಿಕಾ, ಇರಾನ್ ಇತ್ಯಾದಿ ದೇಶಗಳು ತತ್ತರಿಸಿ ಹೋಗಿವೆ. ಜಗತ್ತಿನಾದ್ಯಂತ ೨೦ ಲಕ್ಷಕ್ಕಿಂತಲೂ ಹೆಚ್ಚು ಜನರಿಗೆ ಈ ಸೋಂಕು ತಗಲಿದ್ದು ೧ ಲಕ್ಷದ ೨೦ ಸಾವಿರಕ್ಕಿಂತಲೂ ಹೆಚ್ಚು ಜನರು ಈ ರೋಗಾಣುವಿಗೆ ಬಲಿಯಾಗಿದ್ದಾರೆ. ‘ಜಾಗತಿಕ ಬಲಿಷ್ಟ ರಾಷ್ಟ್ರ’ವೆಂದು ಮೆರೆಯುತ್ತಿದ್ದ ಅಮೇರಿಕಾದ ಸ್ಥಿತಿ ಏನಾಗಬಹುದು, ಎಂದು ಜಗತ್ತಿನ ಎಲ್ಲ ರಾಷ್ಟ್ರಗಳು ನಿರೀಕ್ಷಿಸುತ್ತಿವೆ. ಅದರ ಕಾರಣವೂ ಹಾಗೆಯೆ ಇದೆ. ಇಟಲಿ, ಸ್ಪೇನ್, ಚೀನಾ ಇವೆಲ್ಲವನ್ನು ಹಿಂದಿಕ್ಕಿ ಅತೀ ಹೆಚ್ಚು ಸೋಂಕು ತಗಲಿರುವ ಹಾಗೂ ಅತೀ ಹೆಚ್ಚು ಜನರು ಮೃತಪಟ್ಟಿರುವವರು ಇದೇ ದೇಶದವರು. ಆರ್ಥಿಕ ಮಹಾಶಕ್ತಿಯಾಗಿರುವ ದೇಶದ ಸ್ಥಿತಿ ಹೀಗಿರುವಾಗ ಇನ್ನಿತರ ದೇಶಗಳ ಗತಿಯೇನಾಗಬಹುದು, ಎಂಬುದರ ಕಲ್ಪನೆ ಮಾಡಲೂ ಸಾಧ್ಯವಿಲ್ಲ.

ಕೊರೋನಾದ ಈ ಜಾಗತಿಕ ಹರಡುವಿಕೆಯನ್ನು ತಡೆಗಟ್ಟಲು ಈಗ ಎಲ್ಲ ರಾಷ್ಟ್ರಗಳು ದೊಡ್ಡ ಪ್ರಮಾಣದಲ್ಲಿ ಪ್ರಯತ್ನ ಮಾಡುತ್ತಿವೆ. ಈಗ ಎಲ್ಲ ಸ್ತರಗಳಲ್ಲಿ ಪರಿಹಾರೋಪಾಯವೆಂದು ಸ್ವೀಕರಿಸಲ್ಪಡುವ ಪರ್ಯಾಯವೆಂದರೆ, ಅದು ಭಾರತೀಯ ಸಂಸ್ಕೃತಿಯಲ್ಲಿನ ದೈನಂದಿನ ಆಚರಣೆಗಳು ಮತ್ತು ಒಳ್ಳೆಯ ಅಭ್ಯಾಸಗಳು. ಇದರಿಂದ ಸನಾತನ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆ ಮತ್ತು ಮಹತ್ವ ಗಮನಕ್ಕೆ ಬರುತ್ತದೆ. ‘ಕೊರೋನಾ’ದ ವಿರುದ್ಧದ ವಿಜ್ಞಾನಿಗಳ ವೈದ್ಯಕೀಯ ಉಪಾಯ ಯಾವಾಗ ಬರುವುದೋ ಬರಲಿ, ಆದರೆ ಭಾರತೀಯ ಸಂಸ್ಕೃತಿಯ ಆಚರಣೆ ಅಂದರೆ ಧರ್ಮಾಚರಣೆಯ ಪದ್ಧತಿಯು ಕೇವಲ ಕೊರೋನಾ ಮಾತ್ರವಲ್ಲದೇ, ಎಲ್ಲ ಕಾಯಿಲೆ, ನೈಸರ್ಗಿಕ ಆಪತ್ತುಗಳು ಮತ್ತು ಇನ್ನಿತರ ಆಪತ್ಕಾಲಿಕ ಪರಿಸ್ಥಿತಿಗಳಿಗೂ ಉಪಯುಕ್ತವಾಗಿದೆ’ ಎಂಬುದು ನಿಜ !

ನಮಸ್ಕಾರ : ವಂದನೆ ಮಾಡುವ ಪರಿಪೂರ್ಣ ಪದ್ಧತಿ !
ಕೊರೋನಾದ ಸೋಂಕು ಆಗುವುದರ ಕಾರಣಗಳಲ್ಲಿ ಪಾಶ್ಚಾತ್ಯ ಹಾಗೂ ಯುರೋಪ್ ದೇಶಗಳಲ್ಲಿ ರೂಢಿಯಲ್ಲಿರುವ ಹಸ್ತಲಾಘವ (ಹ್ಯಾಂಡ್ ಶೇಕ್) ಪದ್ಧತಿಯು ಒಂದು ಕಾರಣವಾಗಿದೆ. ಇದು ಅರಿವಾದಾಗ ಇಂಗ್ಲೆಂಡ್, ಅಮೇರಿಕಾ, ಜರ್ಮನಿ, ಫ್ರಾನ್ಸ್, ಐರ್ಲೇಂಡ್, ಇಸ್ರೇಲ್, ಇಟಲಿ ಹಾಗೂ ಇನ್ನೂ ಅನೇಕ ದೇಶಗಳ ಪ್ರಮುಖರು ಪರಸ್ಪರ ಭೇಟಿಯಾದಾಗ ಕೈಜೋಡಿಸಿ ನಮಸ್ಕಾರ ಮಾಡುವ ಭಾರತೀಯ (ಅಂದರೆ ಹಿಂದೂ) ಪದ್ಧತಿಯನ್ನು ಅವಲಂಬಿಸಿದರು. ನಮಸ್ಕಾರ ಮುದ್ರೆಯು ಹಸ್ತಲಾಘವಕ್ಕೆ ಮಾತ್ರ ಪರ್ಯಾಯವಾಗಿರದೆ ವಂದನೆಯ ಈ ಪದ್ಧತಿಯಲ್ಲಿ ಎದುರಿನವರ ಮುಂದೆ ನಮ್ರತೆಯನ್ನು ತೋರಿಸುವುದು ಅಥವಾ ಆ ವ್ಯಕ್ತಿಯಲ್ಲಿರುವ ಈಶ್ವರನ ಅಂಶದ ಮುಂದೆ ಲೀನವಾಗುವುದು, ಎಂಬ ಆಧ್ಯಾತ್ಮಿಕ ಅರ್ಥ ಅಡಕವಾಗಿದೆ. ಇಂದು ಪಾಶ್ಚಾತ್ಯ ಜಗತ್ತು ಆ ಭಾವನೆಯ ವರೆಗೆ ತಲಪದಿದ್ದರೂ ಕೃತಿಯ ಸ್ತರದಲ್ಲಾದರೂ ಹಸ್ತಲಾಘವ ಪದ್ಧತಿಯನ್ನು ನಿಲ್ಲಿಸಿ ಭಾರತೀಯ ಸಂಸ್ಕೃತಿಗೆ ನಮಸ್ಕಾರ ಮಾಡುತ್ತಿದೆ, ಇದೇನೂ ಸಣ್ಣ ವಿಷಯವಲ್ಲ !

ಆಯುರ್ವೇದದ ಕೊಡುಗೆ !
ಚೀನಾದಲ್ಲಿ ಕೊರೊನಾ ಹರಡಲು ಅನೇಕ ಕಾರಣಗಳಲ್ಲಿ ‘ವಿವಿಧ ಪ್ರಾಣಿಗಳ ಅರ್ಧ ಹಸಿಮಾಂಸವನ್ನು ತಿನ್ನುವುದು’ ಸಹ ಒಂದು ಕಾರಣವಾಗಿದೆ ಎಂಬುದು ಬಹಿರಂಗವಾಗಿದೆ. ಆದ್ದರಿಂದ ಮಾಂಸಾಹಾರದಿಂದಲೂ ದೂರವಾಗುವವರ ಸಂಖ್ಯೆ Uಣನೀಯವಾಗಿ ಏರಿದೆ. . ಹಿಂದೂ ಧರ್ಮದಲ್ಲಿ ಮಾಂಸಾಹಾರವನ್ನು ತಮೋಗುಣಿಯೆಂದು ಹೇಳಲಾಗಿದೆ ಹಾಗೂ ಶಾಕಾಹಾರವನ್ನು ಪುರಸ್ಕರಿಸಲಾಗಿದೆ. ಇಂದು ಕೂಡ ಭಾರತದಲ್ಲಿ ಹೆಚ್ಚಿನ ಜನರು ಶಾಕಾಹಾರಿಗಳಾಗಿದ್ದಾರೆ. ಭಾರತೀಯ ಖಾದ್ಯಗಳಲ್ಲ್ಲಿ ಅರಿಶಿನ, ಶುಂಠಿ, ಮೆಣಸಿನ ಕಾಳು, ಓಮ, ಮುಂತಾದ ಜಂತುವಿರೋಧಿ ಹಾಗೂ ಔಷಧಿ ಗುಣವಿರುವ ಪದಾರ್ಥಗಳನ್ನು ದೊಡ್ಡ ಪ್ರಮಾಣದಲ್ಲಿ ಉಪಯೋಗಿಸಲಾಗುತ್ತದೆ. ಭೋಜನವು ಕೇವಲ ನಾಲಿಗೆಯ ಚಪಲವನ್ನು ಶಮನ ಮಾಡಲಿಕ್ಕಲ್ಲ, ಅದೊಂದು ಯಜ್ಞಕರ್ಮವಾಗಿದೆ, ಎಂಬುದನ್ನು ಊಟದ ಮೊದಲು ಮಾಡುವ ಪ್ರಾರ್ಥನೆಯಿಂದ ವ್ಯಕ್ತಪಡಿಸುತ್ತಾರೆ. ಭಾರತದಲ್ಲಿ ಇಂದು ಕೂಡ ಅನೇಕ ಮನೆಗಳಿಗೆ ಹೊಸ್ತಿಲು ಇದೆ. ಈ ಹೊಸ್ತಿಲು ಕೇವಲ ವಾಸ್ತು ರಚನೆಯ ಭಾಗವಾಗಿರದೆ ಮನೆಯ ಒಳಗೆ ಮತ್ತು ಹೊರಗೆ ಯಾವ ವಿಷಯ ಇರಬೇಕು, ಎಂಬುದರ ಗಡಿಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅಂಗಳವನ್ನು ಸೆಗಣಿಯಿಂದ ಸಾರಿಸುವ ಪದ್ಧತಿಯಿದೆ. ಗೋಮಯ, ಗೋಅರ್ಕವನ್ನು ಅನೇಕ ಸ್ಥಳಗಳಲ್ಲಿ ಶುದ್ಧೀಕರಣಕ್ಕಾಗಿ ಉಪಯೋಗಿಸಲಾಗುತ್ತದೆ. ಇಂತಹ ಅನೇಕ ವಿಷಯಗಳನ್ನು ಹೇಳಬಹುದು. ಈ ಧರ್ಮಾಚರಣೆಯ ಕೃತಿಗಳು ವ್ಯಕ್ತಿಯ ಜೀವನವನ್ನು ಆಧ್ಯಾತ್ಮಿಕ ಹಾಗೂ ನಿರೋಗಿಯನ್ನಾಗಿ ಮಾಡುತ್ತವೆ. ಇದರ ಜೊತೆಗೆ ಎಪ್ರಿಲ್ ೧೪ ರಂದು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಯುಷ್ ಮಂತ್ರಾಲಯವು (ಅಂದರೆ ಆಯುರ್ವೇದಾದಿ ಪರ್ಯಾಯ ವೈದ್ಯಕೀಯ ಶಾಸ್ತ್ರವನ್ನು (Alternative Medical Science) ಪುರಸ್ಕರಿಸಲು ನೇಮಿಸಿರುವ ಮಂತ್ರಾಲಯ) ನೀಡಿದ ನಿಯಮಗಳನ್ನು ಪಾಲಿಸಬೇಕು, ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದ್ದರಿಂದ ಈ ಕೃತಿಗಳನ್ನು ದೈನಂದಿನ ಆಚರಣೆಯಲ್ಲಿ ಅನುಸರಿಸಿದರೆ ವ್ಯಕ್ತಿಯ ವೈಯಕ್ತಿಕ, ಕೌಟುಂಬಿಕ ಹಾಗೂ ಸಾಮಾಜಿಕ ಜೀವನವು ಆರೋಗ್ಯಸಂಪನ್ನವಾಗುವುದರಲ್ಲಿ ಸಂಶಯವಿಲ್ಲ.

ಅಗ್ನಿಹೋತ್ರ !
ಇದರ ಹೊರತು ರೋಗರುಜಿನೆಗಳಿಂದ ರಕ್ಷಣೆಯಾಗಲು ಹಾಗೂ ವಾತಾವರಣದ ಶುದ್ಧೀಕರಣಕ್ಕಾಗಿ ಪ್ರತಿದಿನ ‘ಅಗ್ನಿಹೋತ್ರ’ ಮಾಡುವ ಸಂಕಲ್ಪನೆಯೂ ಭಾರತೀಯ ಸಂಸ್ಕೃತಿಯಲ್ಲಿದೆ. ಅಗ್ನಿಹೋತ್ರದ ಉಪಾಸನೆಯಿಂದ ವಾತಾವರಣ ಶುದ್ಧವಾಗಿ ಒಂದು ರೀತಿಯ ರಕ್ಷಣಾಕವಚ ನಿರ್ಮಾಣವಾಗುತ್ತದೆ. ವಿಕಿರಣಗಳಿಂದ ರಕ್ಷಣೆ ಮಾಡುವ ಸಾಮರ್ಥ್ಯವು ಈ ಅಗ್ನಿಹೋತ್ರದಲ್ಲಿದೆ. ಪ್ರತಿದಿನ ಅಗ್ನಿಹೋತ್ರ ಮಾಡುವುದರಿಂದ ವಾತಾವರಣದಲ್ಲಿನ ಹಾನಿಕರ ರೋಗಾಣುಗಳ ಪ್ರಮಾಣವು ಗಣನೀಯವಾಗಿ ಕಡಿಮೆಯಾಗುತ್ತದೆ. ಇದು ವೈಜ್ಞಾನಿಕ ಪ್ರಯೋಗದ ಮೂಲಕ ಸಿದ್ಧವಾಗಿದೆ. ರಾಮರಕ್ಷಾ ಮುಂತಾದ ಸ್ತೋತ್ರಗಳನ್ನು ಶ್ರದ್ದೆಯಿಂದ ಪಠಿಸುವವರಿಗೆ ಎಲ್ಲ ರೀತಿಯ ಸಂಕಟಗಳಿಂದ ರಕ್ಷಣೆಯಾಗುತ್ತದೆ, ಎಂದು ಹೇಳಲಾಗಿದೆ. ಇದನ್ನು ಅನೇಕ ಜನರು ಅನುಭವಿಸಿದ್ದಾರೆ. ಹಿಂದೂ ಧರ್ಮದಲ್ಲಿ ಹೇಳಿರುವ ವಿಷಯಗಳು ಇಂದು ವೈಜ್ಞಾನಿಕ ಸ್ತರದಲ್ಲಿಯೂ ಉಪಯುಕ್ತವೆಂದು ಸಿದ್ಧವಾಗುತ್ತಿವೆ ಎಂಬುದು ಕೊರೋನಾದ ನಿಮಿತ್ತದಿಂದ ಪುನಃ ದೃಢವಾಗುತ್ತಿದೆ.

ಉತ್ಪತ್ತಿ, ಸ್ಥಿತಿ ಮತ್ತು ಲಯ ಎಂಬುದು ಮಹತ್ವದ ಒಂದು ನಿಯಮವಾಗಿದೆ. ಹೇಗೆ ರಾತ್ರಿ ಸರಿದು ಸೂರ್ಯೋದಯವಾಗುತ್ತದೆಯೋ, ಅದೇ ರೀತಿ ಯಾವುದೇ ಆಪತ್ತು ಉಲ್ಬಣಿಸಿದ ನಂತರ ಅದರ ಲಯವಾಗುತ್ತದೆ. ಅನೇಕ ದಾರ್ಶನಿಕ ಸಂತರು, ಭವಿಷ್ಯ ಹೇಳುವವರು ಹೇಳಿರುವಂತೆ ೨೦೨೩ ರಲ್ಲಿ ಮತ್ತೊಮ್ಮೆ ರಾಮರಾಜ್ಯದ ಉದಯವಾಗಲಿದೆ. ಆದ್ದರಿಂದ ಆಪತ್ತಿನಿಂದ ಪಾರಾಗಲು ವೈದ್ಯಕೀಯ ಉಪಾಯಗಳ ಜೊತೆಗೆ ಸಾಧನೆ ಮತ್ತು ವೈಯಕ್ತಿಕ ಉಪಾಸನೆಯ ಬಲವನ್ನು ಸಹ ಹೆಚ್ಚಿಸುವ ಆವಶ್ಯಕತೆಯಿದೆ.

‘ಅಧರ್ಮಾಚರಣೆ’ಯೇ ಎಲ್ಲ ರೋಗಗಳ ಮೂಲವಾಗಿದೆ !
ಕಳೆದ ಅನೇಕ ವರ್ಷಗಳಿಂದ ಹೊಸ ಹೊಸ ಸಾಂಕ್ರಾಮಿಕರೋಗಗಳು ಉದ್ಭವವಾಗಿವೆ. ಅದೇ ರೀತಿ ನೈಸರ್ಗಿಕ ಆಪತ್ತುಗಳ ಪ್ರಮಾಣವೂ ಹೆಚ್ಚಾಗಿದೆ. ‘ಅಧರ್ಮಾಚರಣೆ’ಯೇ ಎಲ್ಲ ರೋಗಗಳ ಮೂಲ ಕಾರಣವಾಗಿದೆ’, ಎಂದು ಆಯುರ್ವೇದ ಹೇಳುತ್ತದೆ. ಧರ್ಮಾಚರಣೆಯು ಕೃತಿಯ ಶಾಸ್ತ್ರವಾಗಿದೆ. ಶ್ರದ್ಧೆಯಿಂದ ಆಚರಿಸುವವರಿಗೆ ಅದರ ಫಲ ಸಿಗುತ್ತದೆ. ಆಯುರ್ವೇದಿಕ್ ಹಾಗೂ ಧರ್ಮಾಧಿಷ್ಠಿತ ಜೀವನಪದ್ಧತಿಯನ್ನು ಅಂಗೀಕರಿಸುವುದೇ ಆರೋಗ್ಯವಂತ ಹಾಗೂ ಆನಂದಮಯ ಜೀವನದ ಮೂಲಮಂತ್ರವಾಗಿದೆ. ಆದರೆ ಕಳೆದ ಹಲವಾರು ದಶಕಗಳಿಂದ ‘ಧರ್ಮಾಚರಣೆಯೆಂದರೆ ಹಿಂದುಳಿದವರು’ ಎನ್ನುವ ಮಾನಸಿಕತೆ ನಿರ್ಮಾಣವಾಗಿದೆ. ಬುದ್ಧಿಜೀವಿಗಳೆಂದು ಕರೆಸಿಕೊಳ್ಳುವ ಅನೇಕ ನಾಸ್ತಿಕರು, ಪ್ರಗತಿಪರರೆಂದು ಕರೆಸಿಕೊಳ್ಳುವ ಸಂಘಟನೆಗಳು ಈ ಮಾನಸಿಕತೆಗೆ ಪ್ರೋತ್ಸಾಹ ನೀಡಿದವು. ಹಿಂದೂ ಸಂಸ್ಕೃತಿಯನ್ನು ಟೀಕಿಸುವ ಏಕೈಕ ಉದ್ದೇಶವನ್ನು ಈ ಸಂಘಟನೆಗಳು ಇಟ್ಟುಕೊಂಡಿವೆ. ಇಂದು ಇಡೀ ಜಗತ್ತು ಭಾರತದ ಸಂಸ್ಕೃತಿಯ ಕಡೆಗೆ ದೊಡ್ಡ ಆಶಾಭಾವನೆಯಿಂದ ನೋಡುತ್ತಿರುವಾಗ ತಥಾಕಥಿತ ವೈಜ್ಞಾನಿಕತೆಯ ಭ್ರಮೆಯಲ್ಲಿದ್ದು ಭಾರತದ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಸ್ವತ್ತನ್ನು ನಿರಾಕರಿಸುವುದೆಂದರೆ ಇದು ವೈಚಾರಿಕ ದಾರಿದ್ರ್ಯದ ಲಕ್ಷಣವಾಗಿದೆ. ಭಾರತದಲ್ಲಿನ ‘ಇಲಿಟ್ ಕ್ಲಾಸ್’ ಬಿಟ್ಟರೂ ಎಲ್ಲ ಸಾಮಾನ್ಯ ಭಾರತೀಯ ಸಮಾಜ ಮಾತ್ರ ಅವರ ವಂಚನೆಯನ್ನು ಮರೆತು ಶ್ರೇಷ್ಠವಾದ ಭಾರತೀಯ ಸಂಸ್ಕೃತಿಯ ಆಚರಣೆ ಮಾಡಲು ಆರಂಭಿಸಿದ್ದಾರೆ. ಇದರ ಒಂದು ಉದಾಹರಣೆಯೆಂದರೆ, ದೂರದರ್ಶನದಲ್ಲಿ ತೋರಿಸುವ ‘ರಾಮಾಯಣ’ ಮತ್ತು ‘ಮಹಾಭಾರತ’ ಈ ಮಾಲಿಕೆಗಳು ಟಿಆರ್‌ಪಿ ಕಳೆದ ೬ ವರ್ಷಗಳ ಎಲ್ಲ ದಾಖಲೆಗಳನ್ನು (ರೆಕಾರ್ಡಗಳನ್ನು) ಮೀರಿಸಿದೆ. ಕಾಲ್ಪನಿಕ ಪ್ರಗತಿಯ ಹೆಸರಿನಲ್ಲಿ ಸನಾತನ ಸಂಸ್ಕೃತಿಯನ್ನು ತಿರಸ್ಕರಿಸುವುದಕ್ಕಿಂತ ಪುನಃ ಧರ್ಮದೊಂದಿಗೆ ಜೋಡಿಸಲ್ಪಡುವುದು ಅಂದರೆ ಧರ್ಮಾಚರಣೆ ಮಾಡುವುದರಲ್ಲಿಯೇ ವ್ಯಕ್ತಿಯ, ಸಮಾಜದ ಮತ್ತು ರಾಷ್ಟ್ರದ ಹಿತ ಅಡಗಿದೆ, ಎಂಬ ಸತ್ಯದ ಅರಿವು ಈಗ ಭಾರತೀಯರಿಗಾಗಿದೆ. ಆದ್ದರಿಂದ ಇಂದಿನ ಲಾಕ್‌ಡೌನ್‌ನ ಅವಧಿಯಲ್ಲಿ ಧರ್ಮದಲ್ಲಿ ಹೇಳಿರುವ ಆಚರಣೆಗಳನ್ನು ಪಾಲಿಸಿ ಭಾರತೀಯ ಸಮಾಜವು ಅದರ ಮಹತ್ವವನ್ನು ಅನುಭವಿಸಬೇಕು.


Spread the love

Exit mobile version