ಕೊರೋನಾ ಆತಂಕ : ಮೇ 26ರಿಂದ ಕಾಪು ವಲಯದ ಸೆಲೂನ್ ಗಳು ಬಂದ್
ಉಡುಪಿ; ಉಡುಪಿ ಜಿಲ್ಲಾ ಪಂಚಾಯತ್ ಸಿಬಂದಿಯೋರ್ವರಿಗೆ ಸೋಮವಾರ ಕೊರೋನಾ ಪಾಸಿಟಿವ್ ಕಂಡು ಬಂದಿದ್ದು ಸೋಂಕಿತ ವ್ಯಕ್ತಿ ಕಾಪು ತಾಲೂಕಿನ ಸೆಲೂನ್ ಒಂದರಲ್ಲಿ ಕೆಲ ದಿನಗಳ ಹಿಂದೆ ಹೇರ್ ಕಟ್ಟಿಂಗ್ ಮಾಡಿಕೊಂಡು ಹೋಗಿರುವುದು ಸೆಲೂನ್ ಮ್ಹಾಲಕರ ಆತಂಕಕ್ಕೆ ಕಾರಣವಾಗಿದೆ
ಈ ಹಿನ್ನೆಲೆಯಲ್ಲಿ ಕಾಪು ತಾಲೂಕಿನ ಎಲ್ಲಾ ಸೆಲೂನ್ ಗಳನ್ನು ಮೇ 26ರಿಂದ ಬಂದ್ ಮಾಡಲಿದ್ದೇವೆ ಎಂದು ಕಾಪು ತಾಲೂಕು ಸವಿತಾ ಸಮಾಜ ಸಂಘದ ಅಧ್ಯಕ್ಷರಾದ ವಿನಯ್ ಭಂಡಾರಿ ಪಡುಬಿದ್ರೆ ಮತ್ತು ಗೌರವ ಅಧ್ಯಕ್ಷರಾದ ಸತೀಶ್ ಭಂಡಾರಿ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಂಡಿದ್ದಾರೆ
ಜಿಲ್ಲೆಯಲ್ಲಿ ಸೋಮವಾರ ಕೊರೊನಾ ಪಾಸಿಟಿವ್ ಪ್ರಕರಣ 32ಕ್ಕೆ ಏರಿದ್ದು ಸಂಜೆಯ ವರದಿಯಲ್ಲಿ ಜಿಲ್ಲಾ ಪಂಚಾಯತ್ ಸಿಬ್ಬಂದಿಗೂ ಕೊರೊನಾ ಪಾಸಿಟಿವ್ ದೃಢ ಪಟ್ಟಿತ್ತು.