Spread the love
ಕೊರೋನಾ ಗೆ ಸುರತ್ಕಲ್ ನ 31 ವರ್ಷ ಪ್ರಾಯದ ವ್ಯಕ್ತಿ ಸಾವು
ಮಂಗಳೂರು: ಮಹಾಮಾರಿ ಕೊರೋನಾ ವೈರಸಿಗೆ ಸುರತ್ಕಲ್ ನ 31 ವರ್ಷದ ವ್ಯಕ್ತಿಯೋರ್ವರು ಶನಿವಾರ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮಾಹಿತಿಗಳ ಪ್ರಕಾರ ಜೂನ್ 26ರಂದು ಮೃತ ವ್ಯಕ್ತಿಯಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕಂಡು ವೆನ್ಲಾಕ್ ಆಸ್ಪತ್ರೆಗೆದ ದಾಖಲಾಗಿದ್ದರು. ಅವರ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ಅವರಿಗೆ ಕೋವಿಡ್ 19 ಇರುವುದು ದೃಢಪಟ್ಟಿದೆ.
ಶನಿವಾರ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ 11 ಗಂಟೆಯ ಸುಮಾರಿಗೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
Spread the love