ಕೊರೋನಾ ನಿಯಂತ್ರಣಕ್ಕೆ ಉಡುಪಿ ಜಿಲ್ಲೆಗೆ ಅಗತ್ಯ ಐಸಿಯು, ಅಂಬುಲೆನ್ಸ್ ಒದಗಿಸಲು ಸರಕಾರ ಸಿದ್ದ – ಸಚಿವ ಕೋಟ
ಉಡುಪಿ: ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗೆ ಬೇಕಾದ ಐಸಿಯು, ಆ್ಯಂಬುಲೆನ್ಸ್ ಗಳನ್ನು ಮಂಜೂರು ಮಾಡಲು ಕೇಳಿಕೊಂಡಿದ್ದೇನೆ. ಜಿಲ್ಲಾಧಿಕಾರಿಗಳಿಗೆ ಬೇಕಾದಷ್ಟು ಸಾಮಾಗ್ರಿಗಳನ್ನು ಸರಕಾರ ನಿಡಲು ಸಿದ್ದವಿದೆ ಎಂದು ರಾಜ್ಯದ ಮೀನುಗಾರಿಕೆ, ಬಂದರು, ಒಳನಾಡು ಸಾರಿಗೆ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಶನಿವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಆಸ್ಪತ್ರೆಗಳ ಸ್ಥಿತಿಗತಿಗಳ ಕುರಿತು ಮಾತನಾಡಿದ ಸಚಿವರು ” ನಿನ್ನೆ ಡಿಸಿಎಂ ಅಶ್ವತನಾರಾಯಣ ಜೊತೆ ಮಾತನಾಡಿ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗೆ ಬೇಕಾದ ಐಸಿಯು, ಆ್ಯಂಬುಲೆನ್ಸ್ ಗಳನ್ನು ಮಂಜೂರು ಮಾಡಲು ಕೇಳಿಕೊಂಡಿದ್ದೇನೆ. ಎಷ್ಟೇ ನಿಯಂತ್ರಣ ಮಾಡಿದರೂ ಕೂಡಾ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದೆ, ಹೀಗಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೊರೊನಾ ನಿಯಂತ್ರಣಕ್ಕೆ ಬೇಕಾದ ಎಲ್ಲಾ ರೀತಿಯ ಕೆಲಸಗಳನ್ನು ಸರಕಾರ ಮಾಡುತ್ತಿದೆ ಎಂದು ಹೇಳಿದರು.
ನಿನ್ನೆ ನಾನು ಡಿಸಿಎಂ ಮತ್ತು ಸಿಎಂ ಅವರನ್ನು ಭೇಟಿಯಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮುಂದಿನ ಎರಡು ತಿಂಗಳ ಕಾಲ ಕೊರೊನಾವನ್ನು ಹೇಗೆ ನಿಯಂತ್ರಿಸಬೇಕು ಎಂಬ ಕುರಿತಾಗಿ ಅಧಿಕಾರಿಗಳ ಜೊತೆ ಸೇರಿ ಚರ್ಚೆ ಮಾಡಿದ್ದೆವೆ. ಎಲ್ಲಾ ಖಾಸಗಿ, ಸರಕಾರಿ ಆಸ್ಪತ್ರೆಗಳನ್ನು ಸುಸಜ್ಜಿತ ವಾಗಿ ಇಡಲಾಗಿದೆ. ಕೊರೊನಾ ವನ್ನು ಜನಜಾಗೃತಿ ಮೂಲಕ ನಿಯಂತ್ರಣಕ್ಕೆ ತರುತ್ತೆವೆ ಎಂಬ ವಿಶ್ವಾಸ ಸರಕಾರಕ್ಕೆ ಇದೆ ಎಂದರು
ಮಂಗಳೂರು, ಬೆಂಗಳೂರು ಗಳಲ್ಲಿ ಅಂತರಾಷ್ಟ್ರೀಯ ಮಟ್ಟದ ಪ್ರಯಾಣಿಕರು ಆಗಮಿಸುತಿದ್ದಾರೆ, ಇಲ್ಲಿ ಸಾಮಾನ್ಯ ಜನರ ನಡುವೆ ಕೊರೊನಾ ಬೆಳವಣಿಗೆ ಕಾಣುತ್ತಿದೆ ಎಂಬುವುದನ್ನು ನಾವು ಕಂಡಿದ್ದೇವೆ, ಇದಕ್ಕಾಗಿ ಸರಕಾರ ಸನ್ನದವಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಇಡೀ ಸರಕಾರ ಹೋರಾಟ ಮಾಡುತ್ತಿದೆ. ಜನಸಾಮಾನ್ಯರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೊರೊನಾ ವಿರುದ್ದ ಗೆಲ್ಲಲು ಸಹಕರಿಸಬೇಕು ಎಂದರು