Home Mangalorean News Kannada News ಕೊರೋನಾ ನಿಯಂತ್ರಣಕ್ಕೆ ಚೆಕ್‌ಪೋಸ್ಟ್ ಸ್ಥಾಪನೆ: ಡಿಸಿ ಜಿ.ಜಗದೀಶ್

ಕೊರೋನಾ ನಿಯಂತ್ರಣಕ್ಕೆ ಚೆಕ್‌ಪೋಸ್ಟ್ ಸ್ಥಾಪನೆ: ಡಿಸಿ ಜಿ.ಜಗದೀಶ್

Spread the love

ಕೊರೋನಾ ನಿಯಂತ್ರಣಕ್ಕೆ ಚೆಕ್‌ಪೋಸ್ಟ್ ಸ್ಥಾಪನೆ: ಡಿಸಿ ಜಿ.ಜಗದೀಶ್

ಉಡುಪಿ : ಜಿಲ್ಲೆಯಲ್ಲಿ ಕೊರೋನ ವೈರಸ್ ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಗಡಿಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಉಡುಪಿ ರೈಲ್ವೆ ನಿಲ್ದಾಣದಲ್ಲಿ ಇಂದು ನಡೆದ ಕೊರೋನ ಜಾಗೃತಿ ಕಾರ್ಯ ಕ್ರಮದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡುತಿದ್ದರು.

ಈಗಾಗಲೇ ಕೇರಳದಿಂದ ಕೊರೋನ ಪೀಡಿತರ ಸಂಖ್ಯೆ ಹೆಚ್ಚಾಗಿರುವುದರಿಂದ, ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೂಲಕ ಉಡುಪಿಗೆ ಆಗಮಿಸುವವರನ್ನು ಚೆಕ್‌ಪೋಸ್ಟ್ ನಲ್ಲಿ ಪರೀಕ್ಷಿಸಲಾಗುವುದು. ಮುಂದಿನ ಹಂತದಲ್ಲಿ ಜಿಲ್ಲೆಯ ಇತರೆ ಗಡಿಭಾಗ ದಲ್ಲೂ ಚೆಕ್‌ಪೋಸ್ಟ್ ಆರಂಭಿಸಲಾಗುವುದು. ಈ ಚೆಕ್‌ಪೋಸ್ಟ್ ಮೂಲಕ ಆಗಮಿಸುವವರನ್ನು ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷಿಸಲಾಗುವುದು ಎಂದರು.

ಜಿಲ್ಲೆಯ ಡಿಸಿ ಮತ್ತು ಎಸಿ ಕೋರ್ಟ್‌ಗಳಲ್ಲಿರುವ ಗಂಭೀರ ಮತ್ತು ತುರ್ತು ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸಲು ಕ್ರಮಕೈಗೊಂಡಿದ್ದು, ಈ ಕುರಿತು ಕುಂದಾಪುರ ಎಸಿ ಅವರಿಗೂ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.


Spread the love

Exit mobile version