ಕೊರೋನಾ ಪಾಸಿಟಿವ್ ದೃಢಪಟ್ಟ ಹಿನ್ನಲೆ – ಉಡುಪಿಯಿಂದ ಮಂಗಳೂರಿಗೆ ಖಾಸಗಿ ಬಸ್ಸು ಸಂಚಾರ ರದ್ದು!
ಉಡುಪಿ: ಮಂಗಳೂರಿನಲ್ಲಿ ಓರ್ವನಿಗೆ ಕೊರೋನಾ ಪಾಸಿಟಿವ್ ದೃಢಪಟ್ಟ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿಗೆ ಸೋಮವಾರ ಉಡುಪಿಯಿಂದ ಯಾವುದೇ ಖಾಸಗಿ ಬಸ್ಸುಗಳು ಸಂಚರಿಸುವುದಿಲ್ಲ ಎಂಬ ಮಾಹಿತಿ ಬಂದಿದೆ.
ಕೊರೋನಾ ಸಮಸ್ಯೆಯ ಎಚ್ಚರಿಕೆಯ ದೃಷ್ಟಿಯಿಂದ ಯಾವುದೇ ನರ್ಮ ಹಾಗೂ ಸರಕಾರಿ ಬಸ್ಸುಗಳನ್ನು ರಸ್ತೆಗಿಳಿಯದಂತೆ ವಿನಂತಿಸಲಾಗಿದೆ ಆದರೆ ಬೆರಳೆಣಿಕೆ ಖಾಸಗಿ ಸಿಟಿ, ಸರ್ವೀಸ್ ಬಸ್ಸುಗಳು ಓಡಾಡುತ್ತವೆ. ಭಾನುವಾರ ಜನತಾ ಕರ್ಫ್ಯೂ ಹಿನ್ನಲೆಯಲ್ಲಿ ಬಂದಾಗಿದ್ದ ಎಲ್ಲಾ ಅಂಗಡಿ ಮುಗ್ಗಟ್ಟು ಎಂದಿನಂತೆ ಸೋಮವಾರ ಓಪನ್ ಆಗಲಿದೆ. ಆದರೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಮಾಲ್, ಪಬ್, ಶೋರೂಂ ಗಳೆಲ್ಲವೂ ಬಂದ್ ಆದರೆ ಮಾಲ್ ಗಳ ಗ್ರೋಸರಿ ಮಳಿಗೆ ಎಂದಿನಂತೆ ಕಾರ್ಯಾಚರಿಸಲಿದೆ. ಜಿಲ್ಲೆಯಲ್ಲಿ ಸೆಕ್ಷನ್144(3) ಅನಿರ್ದಿಷ್ಟಾವಧಿ ಮುಂದುವರಿಕೆ ಆಗಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಮಾಹಿತಿ ನೀಡಿದ್ದಾರೆ.